ನೆಮ್ಮದಿ ಸಂವತ್ಸರ
ಯಾವುದಾದರೇನು?
ಬಂದುಹೋಗುವ ಸಂವತ್ಸರ!
ಕಿತ್ತೊಗೆ(ದರೆ) ಮನದೊಳಗಿನ
ಮದ-ಮತ್ಸರ..?
ಉಕ್ಕುವುದೆಲ್ಲೆಡೆ ಶಾಂತಿ-ನೆಮ್ಮದಿಯ ಮಹಾಪೂರ…!
ಹಳೇ ಪ್ಲವನಾಮಕ್ಕೆ ಹೇಳುತ್ತ ವಿದಾಯ
ಹೊಸ ಶುಭಕೃತುವನ್ನು ಸ್ವಾಗತಿಸೋಣ
ಬೇವುಬೆಲ್ಲ ತಿನ್ನುವಮುನ್ನ ಪ್ರತಿಜ್ಞೆಮಾಡೋಣ
ಹೆಣ್ಣು-ಹೊನ್ನು-ಮಣ್ಣು
ತಾಯಿ-ಭಾಷೆ-ತಾಯ್ನಾಡು ಬಗ್ಗೆ
ಗೌರವಾಭಿಮಾನ ಇರಿಸಿಕೊಳ್ಳೋಣ
ಕಾಯಾ-ವಾಚಾ-ಮನಸಾ(ತ್ರಿಕರಣ) ಶುದ್ಧಿಯಿಂ ಬದುಕಿ, ಬದುಕಲು ಬಿಡೋಣ
ವಾಟ್ಸಾಪ್ ಟ್ವಿಟರ್ ಫೇಸ್ಬುಕ್ ವ್ಯಸನಿಯಾಗದೆ
ಕೋಶಓದಿ ದೇಶಸುತ್ತಿ, ಸನ್ನಡೆ ಚೆನ್ನುಡಿ
ಸಂಸ್ಕೃತಿ ನಾಗರಿಕತೆ ಕಲಿತು, ಕಲಿಸೋಣ
ಸಕಲ ಜೀವ(ನ)ವ ಪಾವನಗೊಳಿಸೋಣ..?!
…..ಆಕಾಶವಾಣಿಯಲ್ಲಿ….ತೇಲಿಬರುತ್ತಿತ್ತು…
“ಯುಗ ಯುಗಾದಿ ಕಳೆದರೂ…..
ಯುಗಾದಿ ಮರಳಿ ಬರುತ್ತಿದೆ…….
ಹೊಸ ವರುಷದ ಹೊಸ ಹರುಷಕೆ..
ಹೊಸತು ಹೊಸತು ತರುತಿದೆ…….”

ಕುಮಾರಕವಿ ಬಿ.ಎನ್.ನಟರಾಜ (೯೦೩೬೯೭೬೪೭೧)ಬೆಂಗಳೂರು೫೬೦೦೭೨