ಮೈಸೂರಿನಲ್ಲಿ  ದಿನಾಂಕ 04.01.2022 ರ ಮಂಗಳವಾರದಿಂದ 07.01.2021 ರ ಶುಕ್ರವಾರದ ವರೆಗೆ ಹಮ್ಮಿಕೊಂಡಿರುವ ಬೃಹತ್ ಉದ್ಯೋಗ, ಕೌಶಲ್ಯಾಭಿವೃದ್ಧಿ, ಸ್ವಯಂ-ಉದ್ಯೋಗ ನೋಂದಾವಣಿ ಕಾರ್ಯಕ್ರಮದ ಮೂರನೇ ದಿನವಾದ ಇಂದು ನಿತ್ಯಾನಂದ ಕಲ್ಯಾಣ ಮಂದಿರದಲ್ಲಿ ನಡೆಯಿತು.

ಬೆಳಗ್ಗಿನಿಂದ ವಿದ್ಯಾರ್ಥಿಗಳು, ಯುವ ಜನತೆ ಹಾಗೂ ಸ್ವಯಂ ಉದ್ಯೋಗ ನಡೆಸಬೇಕೆಂಬ ಇಚ್ಛೆ ಇರುವವರು ಬ್ಯಾಚ್ ರೀತಿಯಾಗಿ ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ವಿದ್ಯಾರ್ಥಿಗಳನ್ನು ಕುರಿತ ಸಮಾಲೋಚನೆಯಲ್ಲಿ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು ಭಾರತದ ಭವಿಷ್ಯವನ್ನು ನಿರ್ಮಾಣ ಮಾಡಲಿಕ್ಕೋಸ್ಕರವಾಗಿ ಮುಂದಿನ 10 ವರ್ಷಗಳ ಕಾಲಕ್ಕೆ ಭಾರತವನ್ನ ವಿಶ್ವ ಗುರುವನ್ನಾಗಿ ಮಾಡಬೇಕೆಂದರೆ ಈಗ ಇರುವ ಭವಿಷ್ಯವನ್ನು ಬರೆಯುವ ಮಕ್ಕಳು ಅವರು ಮಾನವ ಸಂಪನ್ಮೂಲ ಆಗಬೇಕು ಶಿಕ್ಷಣದ ಜೊತೆಗೆ ಅವರಿಗೆ ಕೌಶಲ್ಯವನ್ನೂ ನೀಡುವ ವಿಶೇಷ ಕಾರ್ಯಕ್ರಮ ಇದು. ವಿದ್ಯಾರ್ಥಿಗಳು ಯಾವ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡಬೇಕು, ಯಾವ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂದು ಬರೆಯಿಸಿಕೊಂಡು ಅವರಿಗೆ ಮುಂದಿನ ದಿನದಲ್ಲಿ ಅದೇ ಸ್ಕಿಲ್ ಅನ್ನು ನೀಡುವವರಿದ್ದೇವೆ. ಸುಮಾರು 40 ಕ್ಕೂ ಅಧಿಕ ಸ್ಟಾಲ್ ಗಳನ್ನು ಹಾಕಿ ಅವರಿಗೆ ಮಾಹಿತಿಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಪ್ರತಿ ದಿನ ಸುಮಾರು 5 ಸಾವಿರಕ್ಕೂ ಅಧಿಕ ಮಕ್ಕಳು ಇದರಲ್ಲಿ ಪಾಲ್ಗೊಂಡು ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.  ವಿದ್ಯಾರ್ಥಿಗಳು ಮಾತ್ರವಲ್ಲದೇ ಶಾಲಾ, ಕಾಲೇಜು ಬಿಟ್ಟವರಿಗೂ ಕೂಡಾ  ಇಲ್ಲಿ ಅವಕಾಶಗಳನ್ನು, ಕೌಶಲ್ಯಗಳನ್ನು ನೀಡುತ್ತಿದ್ದೇವೆ. ವಿಶೇಷವಾಗಿ ನಮ್ಮ ರಾಜ್ಯ, ದೇಶವಲ್ಲದೇ ಪ್ರಪಂಚದ ಯಾವ ಯಾವ ದೇಶದಲ್ಲಿ ಕೆಲಸ ಖಾಲಿ ಇದೆ ಹಾಗೂ ಅವರಿಗೆ ಆ ದೇಶಕ್ಕೆ ಹೋಗಲು ಬೇಕಾದಂತಹ ಭಾಷೆಯನ್ನು ಸಹ ಕಲಿಸುತ್ತಿದ್ದೇವೆ ಎಂದರು.

ಕೆ.ಆರ್.ನಗರದ ಶಾಸಕರಾದ ಶ್ರೀ ಸಾರಾ ಮಹೇಶ್ ಭೇಟಿ: ಕೆ.ಆರ್ ನಗರದ ಶಾಸಕರಾದ ಸಾರಾ ಮಹೇಶ್ ಅವರು ಉದ್ಯೋಗ ನೋಂದಾವಣಿ ಕಾರ್ಯಕ್ರಮಕ್ಕೆ ಭೇಟಿ ನೀಡಿ ಎಲ್ಲಾ ಸ್ಟಾಲ್ ಗಳ ಖುದ್ದು ತೆರಳಿ ಮಾಹಿತಿಯನ್ನು ಪಡೆದರು ಅಲ್ಲದೆ ಮಾತನಾಡಿ ನನ್ನ ಸ್ನೇಹಿತರಾದ ರಾಮದಾಸ್ ಅವರು ಕಳೆದ ತಿಂಗಳು ಮೋದಿ ಯುಗ್ ಉತ್ಸವ ವನ್ನು ಮಾಡಿ ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ನೆರವಾದರು. ಇದೀಗ ಕೋವಿಡ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡವರಿಗೆ ಕೆಲಸ ನೀಡುವ ಒಳ್ಳೆ ಕಾರ್ಯ ಮಾಡುತ್ತಿದ್ದಾರೆ, ನಮ್ಮಂತಹ ಶಾಸಕರಿಗೆ ಮಾದರಿಯಾಗಿದ್ದಾರೆ ಅವರ ಈ ಕಾರ್ಯಕ್ಕೆ ಶುಭ ಹಾರೈಸುತ್ತೇನೆ ಎಂದರು.

ಸದರಿ ಕಾರ್ಯಕ್ರಮದಲ್ಲಿ ಸ್ಥಳೀಯ ನಗರಪಾಲಿಕಾ ಸದಸ್ಯರುಗಳಾದ ಶ್ರೀಮತಿ ಶಾರದಮ್ಮ ಈಶ್ವರ್, ಶ್ರೀಮತಿ ಶಾಂತಮ್ಮ ವಡಿವೇಲು, ಶ್ರೀಮತಿ ಚಂಪಕ
 ಬಿಜೆಪಿ ಕೆ.ಆರ್ ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು, ಪ್ರಧಾನಕಾರ್ಯದರ್ಶಿ ಓಂ ಶ್ರೀನಿವಾಸ್, ನಾಗೇಂದ್ರ ಕುಮಾರ್, ಉಪಾಧ್ಯಕ್ಷರಾದ ಸಂತೋಷ್ ಶಂಭು, ದೇವರಾಜೇಗೌಡ, ಒಬಿಸಿ ಮೋರ್ಚಾದ ಶಿವಪ್ಪ, ಯುವಮೋರ್ಚಾ ಅಧ್ಯಕ್ಷರಾದ ಮನು ಶೈವ (ಅಪ್ಪಿ) ಆಶ್ರಯ ಸಮಿತಿ ಸದಸ್ಯರಾದ ಹೇಮಂತ್ ಕುಮಾರ್, ವಾರ್ಡ್ ಉಸ್ತುವಾರಿಗಳಾದ ಬಂಗಾರಿ ಸುರೇಶ್ , ಶ್ರೀಮತಿ ನಾಗರತ್ನ , ಮುರುಳಿ , ರವಿ, ಮಧು, ಗೋವಿಂದ್, ರೇವತಿ ,ಕಲಿಯಮೂರ್ತಿ,ಶಿವಪ್ರಸಾದ್,  ರೇಣುಕಾ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.