ಕಳೆದ ಸಂಚಿಕೆಯಿಂದ ಮುಂದುವರೆದಿದೆ……..

      

ಆಕಾಶವಾಣಿ(ರೇಡಿಯೊ):-ಭಾರತದಲ್ಲಿ ಪ್ರಥಮಬಾರಿಗೆ ೧೯೨೭ರಿಂದ ರೇಡಿಯೊ ಬಾನುಲಿ ವಿ.ಮಾಧ್ಯಮ ಪ್ರಾರಂಭವಾಯಿತು. ೧೯೩೦ರಿಂದ ಪ್ರಾದೇಶಿಕ ಭಾಷೆಗಳಲ್ಲಿ ‘ಆಲ್‌ಇಂಡಿಯರೇಡಿಯೊ’ ಹೆಸರಲ್ಲಿ ಪ್ರಸಾರ ಪ್ರಾರಂಭಿಸಿ, ೧೯೫೭ರಿಂದ ‘ಆಕಾಶವಾಣಿ’ ಎಂಬ ಹೆಸರಿಡಲಾಯ್ತು. ದೂರದರ್ಶನ(ಟೆಲಿವಿಶನ್):- ಮಾಧ್ಯಮದ ಮತ್ತೊಂದು ವಿದ್ಯುನ್ಮಾನ ವಿಭಾಗದ ಟೆಲಿವಿಶನ್ ಪ್ರಸಾರವು ಭಾರತದಲ್ಲಿ ಪ್ರಪ್ರಥಮ ಬಾರಿಗೆ ೧೯೫೯ರಿಂದ  ಕೇಂದ್ರ ಸರ್ಕಾರ ಸ್ವಾಮ್ಯದ ಟಿ.ವಿ.ಚಾನಲ್‌ಗಳ ಮೂಲಕ ಪ್ರಾರಂಭವಾಯಿತು.  ಇದರ ಯಶಸ್ಸಿನ ಕಾರಣ ದಿಂದಾಗಿ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ೧೯೯೧ರಿಂದ ಖಾಸಗಿ ಚಾನಲ್ ಪ್ರಾರಂಭಿಸಲು ಅನುಮತಿ ನೀಡಿತು. ಪ್ರಸ್ತುತ ನೂರಾರು ಖಾಸಗಿ ಚಾನಲ್‌ಗಳಿದ್ದು ಅವುಗಳಿಂದ ಟೆಲಿಕಾಸ್ಟ್ ಆಗುವ ಲೈವ್/ರೆಕಾರ್ಡೆಡ್ ಕಾರ್ಯಕ್ರಮಗಳು ಎಲ್ಲರಿಗು ಇಷ್ಟ. ಇದರಲ್ಲಿ ಪ್ರಾದೇಶಿಕ ಭಾಷೆಯ/ಸ್ಥಳೀಯ ಕಾರ್ಯಕ್ರಮ ಸೇರಿದಂತೆ ರಾಜ್ಯ/[ಅಂತರ್]ರಾಷ್ಟ್ರಮಟ್ಟದ ಕತೆ, ಸಿನಿಮಾ, ನಾಟಕ, ಕಾಮಿಕ್ಸ್, ಕಾರ್ಟೂನ್,ಗೀತ-ಸಂಗೀತ-ನೃತ್ಯ,ಇಂಟರ್‌ವ್ಯು,ರಿಯಾಲಿಟಿಶೊ, ಮಕ್ಕಳ-ಯುವಕರ ಕಾರ್ಯಕ್ರಮ, ವಿಜ್ಞಾನ-ತಂತ್ರಜ್ಞಾನ ಸಾಮಾನ್ಯಜ್ಞಾನ, ಪಠ್ಯಕ್ರಮ, ಪ್ರತಿಭಾನ್ವೇಷಣ, ಮುಂತಾದ ಭರಪೂರ ಮನರಂಜನೆ ಕಾರ್ಯಕ್ರಮಗಳ ಜತೆಗೆ ಆರ್ಥಿಕ, ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ, ಕ್ರೀಡಾಲೋಕ ಸುದ್ದಿಸಮಾಚಾರ, ಕಿರುಚಿತ್ರ, ಧಾರಾವಾಹಿ, ಹಾಸ್ಯ, ವಿಡಂಬನೆ, ವಿಮರ್ಶೆ, ಟೀಕೆ-ಟಿಪ್ಪಣಿ, ಕ್ರೈಂ-ಸ್ಟೋರಿ, ಮುಂತಾದ ಕಾರ್ಯಕ್ರಮಗಳು ಯಥೇಚ್ಚವಾಗಿ ಪ್ರಸಾರವಾಗುತ್ತವೆ.  ಟಿ.ವಿ.ಚಾನಲ್‌ನ ಟಿ.ಆರ್.ಪಿ. ಜಾಹೀರಾತು[ಹಣ] ಮೂಲಕ ಆಯಾ ಚಾನಲ್‌ನ ಆರ್ಥಿಕ ಸುಭದ್ರತೆ ಅವಲಂಬಿಸಿರುತ್ತೆ.  ಕೇಬಲ್ ಆಪರೇಟರ್, ಡಿಶ್ ಆಂಟೆನೊ ಸೇವಾಸಂಸ್ಥೆಗಳು ನೀಡುವ ತರಾವರಿ ತೆರಿಗೆ ಮೂಲಕ ಕೇಂದ್ರ-ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಪ್ರಿಂಟ್ ಮಾಧ್ಯಮದಿಂದ ಬರುವ ಆದಾಯಕ್ಕಿಂತ ಹೆಚ್ಚು ಆದಾಯ ದೊರಕುತ್ತದೆ.

ಮಾಧ್ಯಮದ ಪ್ರಕಾರಗಳು. ಮಾಧ್ಯಮ
v

ವೆಬ್‌ಸೈಟ್ ಬೇಸ್ಡ್ ಅಂತರ್ಜಾಲ(www/internet):-):- ವೆಬ್‌ಸೈಟ್ ಬೇಸ್ಡ್ ಎಲೆಕ್ಟ್ರಾನಿಕ್ ಮೀಡಿಯ ಇಂಟರ್‌ನೆಟ್ ಅಂಗವು ಹುಟ್ಟಿಕೊಂಡ ದಿನದಿಂದ ಆಧುನಿಕ ವಿಜ್ಞಾನ-ತಂತ್ರಜ್ಞಾನದ ವಿರಾಟ್‌ದರ್ಶನವೇ ರೂಪುಗೊಂಡಿತು.  ವೀಡಿಯೋ ಕಾನ್ಫರೆನ್ಸ್, ವೀಡಿಯೊ ಲೀಗಲ್‌ಕನ್ಸಲ್ಟೆಂಟ್, ವೀಡಿಯೋ ಲಾಕೋರ್ಟ್ ಪ್ರೊಸಿಡಿಂಗ್ಸ್ (ಸಾಕ್ಷಿ,ದೂರು,ಹೇಳಿಕೆ,ವಾದವಿವಾದ,ತೀರ್ಪು) ವೀಡಿಯೊ ಫ಼ಿಲಂ/ಕಾಲ್, ಚಿಟ್‌ಚಾಟ್, ಬ್ರೈಡ್/ಗ್ರೂಮ್ ಸೆಲೆಕ್ಷನ್, ಪೇಶೆಂಟ್ ಎಕ್ಸಾಮಿನೇಶನ್/ಆಪರೇಶನ್[ಸರ್ಜರಿ]ಕಂ-ಪ್ರಿಸ್ಕ್ರಿಪ್‌ಶನ್. ವೀಡಿಯೊಆಡಿಟಿಂಗ್, ರಿಯಲ್‌ಎಸ್ಟೇಟ್/ಆಟೋಕನ್ಸಲ್ಟೆಂಟ್ ಸ್ಟಡೀಸ್-ಕಂ-ಎಕ್ಸಾಮಿನೇಶನ್. ವೀಡಿಯೊ ಎಲೆಕ್ಟ್ರಿಕಲ್/ಮೆಕಾನಿಕಲ್/ಆಟೊಮೊಬೈಲ್ ಅಸೆಂಬ್ಲಿಂಗ್/ರಿಪೇರಿಂಗ್/ಸರ್ವಿಸಿಂಗ್. ವಿವಿಧ ವೀಡಿಯೊ ಬೆಟ್ಟಿಂಗ್, ಮ್ಯಾಚ್‌ಫ಼ಿಕ್ಸಿಂಗ್ ಅಪರಾಧಗಳಲ್ಲಿ ಭಾಗಿ, ಕ್ರಿಮಿನಲ್ಸ್‌ಗೆ ಶಿಕ್ಷೆ ನೀಡಲು ಸೈಬರ್ ಕ್ರೈಂ ಪೊಲೀಸ್ ಸ್ಟೇಶನ್, ಸೈಬರ್ ಲಾ ಕೋರ್ಟ್ ಅಸ್ತಿತ್ವಕ್ಕೆ ಬಂತು.  ಪ್ರಸ್ತುತ ರಾಕೆಟ್ ಸ್ಪೀಡಲ್ಲಿ ಮುನ್ನುಗ್ಗುತ್ತಿರುವ ಯುಟ್ಯೂಬ್, ಈ-ಮೇಲ್, ಈ-ನ್ಯುಸ್/ಪತ್ರಿಕೆ, ಈ-ಪ್ರೊಕ್ಯುರ್ ಮೆಂಟ್, ಈ-ಬ್ಯಾಂಕಿಂಗ್, ಈ-ಸ್ಟಡೀಸ್, ಈ-ಟೆಂಡರ್, ಈ-ಕಾಮರ್ಸ್ ಈ-ಸ್ಕೂಲ್, ಚಾಲ್ತಿಗೆಬಂದವು!  ಮುಂದೊಂದು ದಿನ ಈ-ವೆಡ್ಡಿಂಗ್, ಈ-ಚಿಲ್ಡ್ರನ್, ಈ-ಪ್ಲೇ, ಈ-ಲಿವಿಂಗ್, ಈ-ಡೆತ್ ಕೂಡ ಅಸ್ತಿತ್ವಕ್ಕೆ ಬರಬಹುದೇನೊ?!  ಭವಿಷ್ಯದಲ್ಲಿ [ವಿ]ಜ್ಞಾನದ ಆವಿಷ್ಕಾರವು ಇನ್ನಷ್ಟು ಪರಮಾವಧಿ ಹಂತ ತಲುಪಿ ಈಗಿನ ಜಾಗತಿಕ ಮಟ್ಟದಿಂದ ಬಡ್ತಿ ಹೊಂದಿ ಅಂತರಿಕ್ಷ ನಿಲ್ದಾಣ(space station) ಮೂಲಕ ಅಂತರ್‌ಗ್ರಹ ಜಾಗತೀಕರಣ interplanetary globalization space station) ಮಟ್ಟವನ್ನೂ ತಲುಪಬಹುದೇನೋ?! ಗ್ರಹ-ಉಪಗ್ರಹಾಂತರ ಅಭಿವೃದ್ಧಿ ಕಾರ್ಯ ಸಂಬಂಧ ಹೊಸಮಾಹಿತಿ ರೂಪುರೇಶೆಸಮಿತಿ ಸಭೆ ಪಾಲಿಸಿ ನಿರ್ಣಯ ಜಾರಿ ಎಲ್ಲವನ್ನೂ ಅಂಗೈ-ಮುಂಗೈ ಗಡಿಯಾರದಲ್ಲೆ ನೋಡುವಂಥ ಅಂತರ್ ಗ್ರಹ ಅಂತರ್ಜಾಲ ವಿದ್ಯುನ್ಮಾನೀಕರಣ ಮಾಧ್ಯಮ ಹುಟ್ಟಿಕೊಂಡರೂ ಆಶ್ಚರ್ಯವೇನಿಲ್ಲ? 

ಸಾಮಾಜಿಕ ಮಾಧ್ಯಮದ ಮೇಲ್ವಿಚಾರಣೆ ಮುಖ್ಯವೇ? ಏಕೆ ಅಥವಾ ಏಕೆ ಇಲ್ಲ? - Quora

ವಿದ್ಯುನ್ಮಾನ ಮಾಧ್ಯಮದ ಗುಣಾವಗುಣಗಳು:[ scope, merits, de-merits of electronic media     ಆಧುನಿಕ ತಂತ್ರಜ್ಞಾನ, ಉದ್ಯೋಗ ನಿವಾರಣೆ, ವಿದ್ಯಾವಂತಿಕೆ ನಿರ್ಮೂಲನೆ, ಶೀಘ್ರ ಗ್ರಹಣ, ಥಳುಕು ಆಕರ್ಷಣ, ಕೀಳು ಮನೋ ರಂಜನ, ಅಲ್ಪಾನಂದ, ಬೃಹತ್ ಬಂಡವಾಳ, ದುಬಾರಿ ಬೆಲೆ, ದುಪ್ಪಟ್ಟು ನಿರ್ವಹಣೆ, ತ್ರಾಸದ ಸಾಗಣೆ, ಚಮತ್ಕಾರದ ಸಾಧನೆ, ಪರಾವಲಂಬನೆ, ದೃಶ್ಯಾದೃಶ್ಯ ವೀಕ್ಷಣೆ, ವಾಕ್-ಶ್ರವಣ-ನಯನ-ಸವಕಲು, ನಿಯಮಿತ ಅಸ್ತಿತ್ವ, ತಾತ್ಕಾಲಿಕ ದಾಖಲೆ, ಎಲ್ಲೆಡೆ ಸಲ್ಲದ, ಸದಾ ಗೆಲ್ಲದ, ಅಂಗಾಂಗ-ರೋಗರುಜಿನ, ವಿ/ಅ/ಜ್ಞಾನಾರ್ಜನೆ, ಅಸ್ಪಷ್ಟ ರುಜುವಾತು, ಅಲ್ಪಾವದಿ ಬಾಳಿಕೆ, ಅಂಗೈಲಿ ಆನ್‌ಲೈನ್ (ಅ)ಲೋಕ, ಕೃತಕ ಸೃಷ್ಠಿ, ನಿಸರ್ಗ ನಾಶ, ನಿಯಂತ್ರಣ ನಿಷ್ಟುರತೆ, ಸರ್ವಶಿಕ್ಷಣ ದರ್ಶನ, ಸಕಲಕಲಾ ವೀಕ್ಷಣೆ, ನವ್ಯ ಚಿಂತನೆ, ಇಷ್ಟ ಕಾಮ್ಯ ಪ್ರಚೋದನೆ, [ವಿ]ಚಿತ್ರ ಪ್ರೇ[ಕಾ]ಮ [ಪ್ರ]ದರ್ಶನ, ತಂದೆ-

ಉಪಸಂಹಾರ[ನಿರ್ಣಾಯಕ]:- [conclusion]:

ಮುದ್ರಣ ಮಾಧ್ಯಮ’ ಮತ್ತು ‘ವಿದ್ಯುನ್ಮಾನ ಮಾಧ್ಯಮ’ ಎರಡು ವಿಭಾಗದಲ್ಲೂ ಗುಣ-ಅವಗುಣಗಳು ಇದ್ದೇ ಇರುತ್ತದೆ.  ಆದರೆ ಯಾವ ಮಾಧ್ಯಮದಲ್ಲಿ ಹೆಚ್ಚು ಅವಗುಣಗಳಿವೆ ಎಂಬ ಗಂಭೀರ ಚಿಂತನೆ ಮಾಡಿದರೆ, ವಿದ್ಯುನ್ಮಾನ ಮಾಧ್ಯಮ ಅಗ್ರಪಂಕ್ತಿಗೆ ಬರುತ್ತದೆ. ಯುವಜನಾಂಗವನ್ನು ಅಡ್ಡದಾರಿಗೆಳೆದು ಮಾರಣಾಂತಿಕ ದುಶ್ಚಟಗಳಿಗೆ ಬಲಿಯಾಗುವಂತೆ ಮಾಡುವ ಕೈವಾಡದ [ಮ್ಯಾನಿಪ್ಯುಲೇಶನ್] ಸ್ಯಾಂಪಲ್ ಇಲ್ಲಿದೆ:-ವೀಡಿಯೋಗೇಮ್ಸ್, ಬ್ಲೂವೇಲ್, ಪಬ್ಜಿ, ಬ್ಲೂಫ಼ಿಲಂ, ಟಿಕ್‌ಟಾಕ್, ವಾಚ್‌ಪಾರ್ಟಿ, ಫ಼ೇಸ್‌ಬುಕ್, ಯೂಟ್ಯುಬ್, ಟ್ವಿಟರ್, ವಾಟ್ಸಪ್, ಇನ್‌ಸ್ಟಾಗ್ರಾಂ, ಹೆಲೋಆಪ್, ಹನಿಟ್ರ್ಯಾಪ್, ಮುಂತಾದವು. ದೇಶದ್ರೋಹದ ಕೆಲಸಕಾರ್ಯಗಳಿಗೂ ಟೆಕ್ಕಿಗಳನ್ನು ದುರುಪಯೋಗ ಪಡಿಸಿಕೊಳ್ಳುವ:- ‘ಹ್ಯಾಕಿಂಗ್’ ದೇಶದ ರಕ್ಷಣಾವ್ಯವಸ್ಥೆ ಲೀಕ್, ಸುಭದ್ರತೆ-ಬುಡಮೇಲು. ಬ್ಯಾಂಕ್‌ಖಾತೆಗೆ-ಕನ್ನ, ಎಟಿಎಂ-ಲೂಟಿ, ಗೂಗಲ್, ಹೆಲ್ಪ್‌ಲೈನ್, ಡೆಬಿಟ್/ಕ್ರೆಡಿಟ್ ಕಾರ್ಡ್, ಪಿಪಿ, ಓಟಿಪಿ, ಪಾಸ್‌ವರ್ಡ್, ಸ್ಟಾಕ್ ಎಕ್ಸ್‌ಚೇಂಜ್, ರಿಯಲ್ ಎಸ್ಟೇಟ್, ಬಿಸಿನೆಸ್‌ಬಿಲ್ ಗೋಲ್‌ಮಾಲ್. ‘ಟ್ಯಾಪಿಂಗ್’ ಟೆಲಿಫ಼ೋನ್ ಕದ್ದಾಲಿಕೆ, ಮುಂತಾದ ಅನೇಕ [ಅ]ಕಾರ್ಯ ಕೈಗೊಳ್ಳುವ ಯುವಜನಾಂಗ ಕೊನೆಗೆ ಸೇರುವುದೇ ಸೆರೆಮನೆ ಅಥವಾ ಸಾವಿನಮನೆ. 

ಸಾಮಾಜಿಕ ಮಾಧ್ಯಮಗಳೂ ನೀತಿ ಸಂಹಿತೆ ವ್ಯಾಪ್ತಿಗೆ | Prajavani

ಇತ್ತೀಚಿನ ಒಂದು ಘಟನೆಯನ್ನು ಇಲ್ಲಿ ಉದಾಹರಿಸಲಾಗಿದೆ:- ೯ನೇ ತರಗತಿ ಹುಡುಗನೊಬ್ಬ ೮ನೇ ತರಗತಿ ಹುಡುಗಿಯನ್ನು ಲವ್ ಮಾಡುತ್ತಿದ್ದೇನೆಂದು ಪೋಷಕರಿಗೆ ತಿಳಿಸಿ ಮದುವೆಯ ‘ಸವಾಲ್’ ಎಸೆಯುತ್ತಾನೆ. ‘ಲವ್‌ಮೇನಿಯಾ’ಗೆ ಬಲಿಯಾದ ಆ ಇಬ್ಬರು ಎಳೆಯರು ಪರೀಕ್ಷೆಯಲ್ಲಿ ಫ಼ೇಲಾಗಿ ನಾಪತ್ತೆಯಾಗುತ್ತಾರೆ. ಅದಾದ ೨೧ದಿನದೊಳಗೆ ಜೋಡಿಹೆಣವಾಗಿ ಸಿಗುತ್ತಾರೆ?!  ವಿಷಯ ತಿಳಿದ ತಂದೆ-ತಾಯಿ ಆತ್ಮಹತ್ಯೆಗೆ ಶರಣಾಗುತ್ತಾರೆ! ಹೀಗೆ ಅನೇಕ ಕುಟುಂಬಗಳು ಅವನತಿ ಹೊಂದುತ್ತಿರುವುದರ ಹಿಂದೆ ಶೇ.೬೦% ಮಾಧ್ಯಮದ ಪ್ರಚೋದನೆ-ಪ್ರಭಾವ ಇಲ್ಲದಿಲ್ಲ!  ಬದುಕಿ ಬಾಳಗಬೇಕಾದ ಎಳೆಯ ಜೀವ(ನ) ದೃಶ್ಯ ಮಾಧ್ಯಮದ ದುಷ್ಪರಿಣಾಮದಿಂದ ನಾಶವಾಗುತ್ತಿರುವುದು ವಿಷಾದನೀಯ ಆದರೆ ಸತ್ಯ!? ವರಪ್ರಧಾನವಾದ ವಿದ್ಯುನ್ಮಾನ ವಿಜ್ಞಾನವನ್ನು ಸದುಪಯೋಗ ಪಡಿಸಿಕೊಂಡರೆ ಮಾತ್ರ ಸರ್ವತೋಮುಖ ಲಾಭವಿದೆ ಹಾಗೆಯೇ ದುರುಪಯೋಗ ಪಡಿಸಿಕೊಂಡರೆ ಸರ್ವರೀತಿಯಲ್ಲಿ ಸಮಾಜಕ್ಕೆ ಮತ್ತು ದೇಶಕ್ಕೆ ನಷ್ಟ-ಕಷ್ಟ ಗ್ಯಾರೆಂಟಿ?!

ದೇಶದ ಪ್ರಗತಿಯಲ್ಲಿ ಸುದ್ದಿ ಮಾಧ್ಯಮಗಳ ಪಾತ್ರ (ಬಹುಮಾನಿತ ಪ್ರಬಂಧ) | Kulal World

  ಉದ್ರೇಕಕಾರಿ ವಿದ್ಯುನ್ಮಾನ ಮಾಧ್ಯಮದ ಪ್ರಭಾವದಿಂದ ವಿಕೃತ ಕಾಮ, ಕೆಟ್ಟ ಸಂಸ್ಕೃತಿ, ಅತಿರೇಕ ಅನಾಗರಿಕತೆ, ಅಸ(ಹ್ಯ)ಭ್ಯ ವರ್ತನೆ, ಅಶ್ಲೀಲ ನಡೆ-ನುಡಿ ಹೆಚ್ಚುತ್ತಲೆ ಇದೆ? ಅಶ್ಲೀಲವೀಡಿಯೊ ಸಾಮಾಜಿಕಪಾಪ, ವಿಜ್ಞಾನಕ್ಕೇಅವಮಾನ, ಶಿಕ್ಷಾರ್ಹ ಅಪರಾಧ! ಎಂದು ಗೊತ್ತಿದ್ದರೂ ಪದೇಪದೇ ಅದೇತಪ್ಪು ಮಾಡುವಂಥ ಕುಕೃತ್ಯಗುಂಪನ್ನು ಸೃಷ್ಟಿಸುವುದು ಯಾವ ವೃತ್ತಿಧರ್ಮ? ‘ಟಿಆರ್‌ಪಿ’ಗಾಗಿ ಸೋಗಲಾಡಿತನದ ಅನಿವಾರ್ಯತೆಯನ್ನು ಬಿಂಬಿಸಿ ನೈತಿಕತೆಯನ್ನೆ ಹರಾಜು ಹಾಕಬಹುದೆ? ವಿನಾಕಾರಣ ಭಾರತೀಯ ಸಂಸ್ಕೃತಿ-ನಾಗರಿಕತೆ ಬಲಿಕೊಡಬಹುದೆ?  ಬಡವ-ಬಲ್ಲಿದ, ಹೆಣ್ಣು-ಗಂಡು, ಹದಿಹರೆಯ-ಮುದಿಮುತ್ಸದ್ದಿ, ಶಾಸನ(ಲೋಕ) ಸಭೆ/ಸದನ, ಟಿಪ್ಪುಜಯಂತಿ ವೇದಿಕೆ, ಎಮ್‌ಎಲ್‌ಎ, ಎಂಪಿ, ಮಂತ್ರಿ, ಎಲ್ಲರಿಗೂ ‘ಬೇಕೇ ಬೇಕು’ ಎನ್ನುವ  ಮಟ್ಟ(ಚಟ)ಕ್ಕೆ ವ್ಯಸನಿ (ಅಡಿಕ್ಟ್)ಗೊಳಿಸಬಹುದೇ? ಮನುಜ ಸಹಜ ನಾಚಿಕೆ-ಮಾನ-ಮರ್ಯಾದೆ ಜತೆಗೆ ಅಮೂಲ್ಯವಾದ ಸಮಯ, ವಿದ್ಯಾಭ್ಯಾಸ, ಉದ್ಯೋಗ, ವ್ಯಾಯಾಮ, ಆರೋಗ್ಯ, ಮಾನವ(ಹೆತ್ತವರ-ಬಂಧು-ಮಿತ್ರ-ಗುರು-ಹಿರಿಯರ)ಸಂಬಂಧ, ಪರಿಸರ ಸಂರಕ್ಷಣೆ, ಸಾಮಾನ್ಯ ಜ್ಞಾನ, ದೇಶಭಕ್ತಿ, ಆಧ್ಯಾತ್ಮಿಕ ಶಕ್ತಿ, ಎಲ್ಲವ[ದೇವರ]ನ್ನೂ ಮರೆಯುವಂತೆ ಮಾಡಬಹುದೇ! ಅಶ್ಲೀಲ ಚಿತ್ರೀಕರಣ, ಎಸ್‌ಎಂಎಸ್, ಎಂಎಂಎಸ್, ಜತೆಗೆ ಲೈಂಗಿಕ ಕಿರುಕುಳ, ಹಫ಼್ತಾ ವಸೂಲಿ, ಮೆಂಟಲ್ ಟಾರ್ಚರ್, ಬ್ಲಾಕ್ ಮೇಲ್. ಇವುಗಳಿಂದ ಸ್ಫೂರ್ತಿಗೊಂಡು ಅಕ್ರಮ ಲೈಂಗಿಕ ಸಂಬಂಧ, ಬಲಾತ್ಕಾರ, ಅತ್ಯಾಚಾರ, ಕೊಲೆ, ಆತ್ಮಹತ್ಯೆ, ಮುಂತಾದ ಅಪರಾಧಗಳು ಜರುಗಬಹುದೇ?

ಸ್ಯಾಟಲೈಟ್ ದೋಷ, ಸರ್ವರ್ ಬ್ರೇಕ್‌ಡೌನ್, ಟೆಕ್ನಿಕಲ್ ಡಿಫ಼ೆಕ್ಟ್, ಪವರ್ ಶಟ್‌ಡೌನ್, ಕಂಪ್ಯುಟರ್ ಕರಪ್‌ಶನ್, ವೈರಸ್ ಅಟ್ಯಾಕ್ ಮುಂತಾದ ತಾಂತ್ರಿಕ ಅಡಚಣೆ ಅಮರಿಕೊಂಡಾಗ ಇಡೀ ವಿದ್ಯುನ್ಮಾನ ಮಾಧ್ಯಮ ಸ್ಥಗಿತಗೊಳ್ಳುತ್ತದೆ.  ಕಣ್ಣು ಕಟ್ಟಿಕೊಂಡು ಕತ್ತಲೆ ಲೋಕಕ್ಕೆ ಪ್ರವೇಶಿಸಿ ಎಡವಿ ಬೀಳುವರು.  ತಾಂತ್ರಿಕ ಅಡಚಣೆಗಾಗಿ ಕ್ಷಮಿಸಿ ಬೋರ್ಡ್ ಪ್ರದರ್ಶಿಸಿ ಕುಂಟು ನೆಪದಿಂದ ಬಚಾವ್‌ಆಗಲು ಪ್ರಯತ್ನಿಸುವರು. ರಿಯಲ್‌ಎಸ್ಟೇಟ್/ಬ್ಲಾಕ್‌ಮೇಲ್ ಮೂಲಕ ಹಣ-ಕೀರ್ತಿ-ಅಂತಸ್ತು ಸಂಪಾದಿಸುವರು.  ತಂತ್ರಜ್ಞಾನದ ಯಂತ್ರಗಳು ಕೈಕೊಟ್ಟರೆ; ಸಂಪಾದಿಸಿದ್ದ[ಸೇವ್ಡ್],  ಶೇಖರಿಸಿದ್ದ ಸಾಫ಼್ಟ್(ವೇರ್)ಅರ್ನ್ಡ್-ಹಾರ್ಡ್(ವೇರ್)ಅರ್ನ್ಡ್ ಎಲ್ಲವೂ ಅಳಿಸಿ[ಡಿಲೀಟ್] ಹೋಗಿ ಕೊನೆಗೆ ಶೂನ್ಯ[ಸೈಫ಼ರ್] ಫ಼ಲಿತಾಂಶದಿಂದ ಇಡೀ ಸಂಸ್ಥೆಗೆ ಲೊಕ್ವ ಹೊಡೆದ ಪರಿಸ್ಥಿತಿ ಬರುತ್ತದೆ.  ಇದೆಲ್ಲವನ್ನು ನೆನೆಸಿಕೊಂಡು ಪ್ರತಿಕ್ಷಣ ಭಯದಿಂದಲೆ ಕಳೆಯಬೇಕು. ಆದರೆ ಇಂಥ ಜಠಿಲವಾದ ಸರ್ವನಾಶದ ಬೃಹತ್ ಸಮಸ್ಯೆಗಳು ಪ್ರಿಂಟ್ ಮೀಡಿಯಾದಲ್ಲಿ ಬಹಳ ಕಡಿಮೆ? ಏಕೆಂದರೆ, ನೋಡಿದ್ದೇ ನೋಡಿ ಕೇಳಿದ್ದೇ ಕೇಳಿ ಮಾನಸಿಕ ಅಸ್ವಸ್ಥರಾಗುವ ಸಮಸ್ಯೆ ಉದ್ಭವಿಸುವುದಿಲ್ಲ. ತಲೆನೋವು ಮತ್ತು ವಾಕರಿಕೆ ಬರುವಷ್ಟರಮಟ್ಟಿಗೆ  ರಿಪೀಟೆಡ್ ಟೆಲಿಕಾಸ್ಟ್ [ಪುನರಾವರ್ತನೆ] ಭೂತದ ಕಾಟ, ಶಾಂತಿ-ನೆಮ್ಮದಿಯ ಜಂಜಾಟ ಮುದ್ರಣ ಮಾಧ್ಯಮದಲ್ಲಿ ಬಹುಶಃ ಇಲ್ಲವೇ ಇಲ್ಲ?!.

ಉದಾಹರಣೆಗೆ ಟೆಕ್ಕಿ ಜೀವನ:-

     ವಯೋಧರ್ಮಕ್ಕನುಗುಣವಾಗಿ ಸಂಪಾದಿಸಿ, ಶೇಖರಿಸಿ, ಸಾವಕಾಶವಾಗಿ ಖರ್ಚುಮಾಡಬೇಕಾದ ಯಂಗ್ ಟೆಕ್ಕಿಯ ಜೀವನ-ಆರೋಗ್ಯ ಅಲ್ಪಾವಧಿಯಲ್ಲೆ ಹಿಂಡಿ ಹಿಪ್ಪೆಕಾಯಿ ಮಾಡಿ ಭಯಾನಕ ಅಂತ್ಯ ತರಿಸುತ್ತಿದೆ? ೨೦ ವರ್ಷ ದುಡಿದು ೩೦ ವರ್ಷ ರೋಗಿಯಾಗಿ ದುಡಿದದ್ದೆಲ್ಲಾ ಖರ್ಚು ಮಾಡುವುದು ಸರ್ವೆಸಾಮಾನ್ಯ. ಏಕೆಂದರೆ ಸ್ಪೈನಲ್‌ಕಾರ್ಡ್,  ಸ್ಪಾಂಡಲೈಟೀಸ್, ನರ್ವಸ್-ವೀನ್ಸ್ ಬ್ರೇಕ್‌ಡೌನ್ ನರಮಂಡಲ/ ಅಂಗಾಂಗ/ಬೋನ್ಸ್/ಜಾಯಿಂಟ್ಸ್ ಮುಂತಾದ ಡ್ಯಾಮೇಜ್ ತೀವ್ರ ಸ್ವರೂಪದ ಅನಾರೋಗ್ಯದಿಂದ ನರಳಬಹುದು, ಬೇಡವೆಂದರೆ ಇಚ್ಚಾಮರಣಕ್ಕೂ ಶರಣಾಗಬಹುದು!? ಇಂಥ ಘೋರ ಮಾಧ್ಯಮ ಯಾರಿಗೂ ಎಲ್ಲಿಯೂ ಬೇಡವೇಬೇಡ ಎಂಥ (ಪ್ರ)ದೇಶಕ್ಕೂ ಅನಗತ್ಯ?  ಭಾರತ ಮಾತ್ರವಲ್ಲ ವಿಶ್ವದ ಹಿತದೃಷ್ಟಿಯಿಂದ ಇಡೀ ಮನುಕುಲಕ್ಕೆ, ವಿಶೇಷವಾಗಿ ಯುವಪೀಳಿಗೆಗೆ ಮಾರಕವಾಗುವ ಮಾಧ್ಯಮ ಯಾವ ಪುರುಷಾರ್ಥಕ್ಕೆ? ಯುವಕರ ಮನಸ್ಥಿತಿ ಅರಿಯುವುದು ಮಾಧ್ಯಮದ ಹೊಣೆಗಾರಿಕೆ ಮಾತ್ರವಲ್ಲ ಕರ್ತವ್ಯವೂ ಹೌದು!? ಮಾಧ್ಯಮ ಯಾವುದೇ ಇರಲಿ ಅದರಿಂದ ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಬೇಕು.

ಇಂಡಿಯನ್ ರೀಡರ್‌ಶಿಪ್ ಸರ್ವೆ[IRS]ಮತ್ತು ಮೀಡಿಯ ರಿಸರ್ಚ್ ಯುಸರ್ಸ್ ಕೌನ್ಸಿಲ್ ಆಫ಼್ ಇಂಡಿಯ [IRS] ಪ್ರಕಾರ ಎಲೆಕ್ಟ್ರಾನಿಕ್ ಮೀಡಿಯದಿಂದ ಆಗುತ್ತಿರುವ ಅನಾಹುತ, ದುಷ್ಪರಿಣಾಮ ಪ್ರಿಂಟ್ ಮೀಡಿಯಕ್ಕಿಂತ ಹೆಚ್ಚಾಗಿದೆ.  ವಿದ್ಯುನ್ಮಾನ ಮಾಧ್ಯಮಕ್ಕಿಂತ ಮುದ್ರಣ ಮಾಧ್ಯಮದಲ್ಲಿ ಅವಗುಣಗಳು ಕಡಿಮೆಯಿದ್ದು ಪ್ರಿಂಟ್ ಮೀಡಿಯ ಹೆಚ್ಚು ಫ಼ಲಕಾರಿ ಪ್ರಯೋಜನಕಾರಿ ಎಂದು ಸಾಬೀತಾಗಿದೆ.  ಇದಕ್ಕೆ ಇಂಬು ಕೊಡುವಂತೆ ವಾಸ್ತವತೆಯ ಉದಾ:- ಮುದ್ರಣಮಾಧ್ಯಮದಿಂದಾಗಿ ಶೇ.೯೦%ರಷ್ಟು ಮಂದಿ ಯಾವುದೆ ವ್ಯಸನಿಯಾಗುವುದಿಲ್ಲ, ದಿಢೀರ್‌ನಿರ್ಧಾರ ಕೈಗೊಂಡು ಪ್ರಚೋದನೆಗೆ ಒಳಗಾಗದೆ, ವಿದ್ಯಾಭ್ಯಾಸ, ಜವಾಬ್ಧಾರಿ, ದುಡಿಮೆ, ಪ್ರೀತಿ, ಪ್ರೇಮ, ಪ್ರಣಯ, ವಿವಾಹ, ಮಡದಿ, ಮಕ್ಕಳು, ತಂದೆ, ತಾಯಿ, ಕುಟುಂಬ, ದೇಶ, ಎಲ್ಲದರ ಬಗ್ಗೆ ಹತ್ತುಸಲ ಪಾಸಿಟೀವ್-ನೆಗಟೀವ್ ಎರಡೂ ಬಗೆಯಲ್ಲಿ ಚಿಂತನ-ಮಂಥನ ಮಾಡಿ ಒಳ್ಳೆಯ ನಿರ್ಧಾರಕ್ಕೆ ಬರುತ್ತಾರೆ.  ಪ್ರಿಂಟ್ ಮಾಧ್ಯಮದ ಕತೆ, ಕಾದಂಬರಿ, ಲೇಖನ, ಇತಿಹಾಸ, ನೈಜಘಟನೆ ಮುಂತಾದವುಗಳಿಂದ ಸ್ಫೂರ್ತಿಗೊಂಡು ಅನೇಕ ಸಿನಿಮಾ-ನಾಟಕ-ಧಾರಾವಾಹಿ ತಯಾರಾಗಿವೆ.  ಕೃತಿಯಾಧಾರಿತ ಸಿನಿಮಾಗಳು ಯಶಸ್ವಿಗೊಂಡು ಆ ಮೂಲಕ ಅನೇಕ ದಿಗ್ಗಜ ಕಲಾವಿದರು ಅತಿರಥ-ಮಹಾರಥ ನಟ-ನಟಿ-ನಿರ್ಮಾಪಕ-ನಿರ್ದೇಶಕ ಸುಬ್ಬಯ್ಯನಾಯ್ಡು, ಬಿ.ಆರ್.ಪಂತುಲು, ಪುಟ್ಟಣ್ಣಕಣಗಾಲ್ ರಾಜಕುಮಾರ್, ವಿಷ್ಣುವರ್ಧನ್,ಅಂಬರೀಷ್, ಶಂಕರನಾಗ್ ಮುಂತಾದವರು ಚರಿತ್ರಾರ್ಹರಾಗಿದ್ದಾರೆ. ಪ್ರಖ್ಯಾತ ಸಾಹಿತಿಗಳು, ಪತ್ರಿಕೋದ್ಯಮಿಗಳು ಗಾಂಧಿ-ನೆಹರು-ಠಾಗೋರ್-ಕುವೆಂಪು-ಬೇಂದ್ರೆ-ಡಿವಿಜಿ-ತ್ರಿವೇಣಿ ಮುದ್ರಣ ಮಾಧ್ಯಮದ ಮೂಲಕವೆ ಭಾರತರತ್ನ, ಜ್ಞಾನಪೀಠ, ಪುರಸ್ಕೃತರಾಗಿ ಅಮರರಾದರು! ಪ್ರಿಂಟ್ ಮಾಧ್ಯಮದಿಂದ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಅನುಕೂಲ, ಸ್ಫೂರ್ತಿ, ಸಹಾಯ, ಸಹಕಾರ, ಇದ್ದೇ ಇರುತ್ತದೆ.  ಮುದ್ರಣ ಮಾಧ್ಯಮ ಇಲ್ಲದೆ ವಿದ್ಯುನ್ಮಾನ ಮಾಧ್ಯಮವು ಯಶಸ್ವಿಯಾಗಿ ಸಾಗುವುದು ಕಠಿಣ ಅಥವಾ ದುರ್ಲಭ!  ಆದರೆ ವಿದ್ಯುನ್ಮಾನ ಮಾಧ್ಯಮದಿಂದ ಮುದ್ರಣ ಮಾಧ್ಯಮಕ್ಕೆ ಯಾವ ರೀತಿಯ ಸಹಾಯ, ಸಹಕಾರ ದೊರಕಬಹುದು?

ಪ್ರಿಂಟ್ ಮೀಡಿಯ ಹೆಚ್ಚು ವಿದ್ಯಾವಂತರನ್ನು ಸೃಷ್ಟಿಸುತ್ತದೆ. ಒಮ್ಮೆ ಓದಲು ಪ್ರಾರಂಭಿಸಿದರೆ, ಮುಗಿಯುವವರೆಗೆ ನಿತ್ಯಕರ್ಮದ ಜತೆಗೆ ಕಚೇರಿನೆಂಟರಿಷ್ಟರಸ್ವಯಂಮನೆ ಕೆಲಸ ಅವಶ್ಯಕತೆಗಳನ್ನು ಕರ್ತವ್ಯ ಭ್ರಷ್ಟರಾಗದಂತೆ ಅಟೆಂಡ್ ಮಾಡಬಹುದು. ಮರಣದವರೆಗೂ ಆರೋಗ್ಯ ಕಾಪಾಡಿಕೊಳ್ಳಬಹುದು. ವಿದ್ಯುನ್ಮಾನದ ಆಡಿಯೋ/ವೀಡಿಯೋ ಕೇಳುತ್ತ ಶೇ.೧೦% ಕೆಲಸಗಳನ್ನು ಅರೆಬರೆಯಾಗಿ ಮಾಡಬಹುದು. ಆದರೆ ಶೇ.೯೦% ಮೊಬೈಲ್ ಇಯರ್ಫ಼ೋನ್ ಸಿಕ್ಕಿಸಿಕೊಂಡು, ವೀಡಿಯೊ ನೋಡಿಕೊಂಡು ಶಾಲಾ ಕಾಲೇಜು ಉದ್ಯೋಗಕ್ಕೆ ಹೋಗುವಾಗ ಸ್ಕೂಟರ್ ಆಟೋ ಕ್ಯಾಬ್ ಬಸ್ ರೈಲ್ ಹತ್ತು ವಾಗ; ಪಿಕ್ನಿಕ್ ಪಾರ್ಟಿ ಮದುವೆ ಮುಂಜಿ ಸಮಾರಂಭದಲ್ಲಿ ಇರುವಾಗ; ಸೆಲ್ಫೀ ಫ಼ೊಟೋಶೂಟ್ಗಳಲ್ಲಿ ಮೈಮರೆತಾಗ; ಆಘಾತಕಾರಿ ಘಟನೆ,ದುರಂತ,ಮರಣ ಜರುಗುತ್ತಿವೆ!? ಟಿ.ವಿ.ನೋಡುವಾಗ ಮಗುವನ್ನು ವಾಶಿಂಗ್ ಮೆಶಿನ್ಗೆ ಹಾಕಿರುವ, ಕುಕ್ಕರ್ ಸಿಡಿದು ಸಾವುನೋವು ಸಂಭವಿಸಿರುವ, ಹಾಡಹಗಲೇ ಕಳ್ಳಬಂದು ಮನೆಯೊಡತಿಯಿಂದ ಕೀಲಿಪಡೆದು ನಗನಾಣ್ಯ ದೋಚಿ ಹೋಗಿರುವ ಘಟನೆಗಳಿವೆ. ಪ್ರತಿದಿನ ಒಂದಿಲ್ಲೊಂದುವಿದ್ಯುನ್ಮಾನ ಮಾಧ್ಯಮ ಸ್ಕ್ಯಾಂ/ಕಾಂಟ್ರೊವರ್ಸಿಬಗ್ಗೆ ಮುದ್ರಣ ಮಾಧ್ಯಮದಲ್ಲಿ ಪಬ್ಲಿಶ್ ಆಗುತ್ತಿದೆ. ಎಲ್ಲ ರೀತಿಯಲ್ಲು ದೃಶ್ಯ ಮಾಧ್ಯಮಕ್ಕಿಂತ ವಾಚನ ಮಾಧ್ಯಮವೆ ಹೆಚ್ಚು ಪ್ರಯೋಜನಕಾರಿ. ಮತ್ತು ಉತ್ತಮ, ಶಾಶ್ವತ, ಸ್ವತಂತ್ರ ಸ್ವಾವಲಂಬಿ, ಸಾರ್ವಕಾಲಿಕ ಸತ್ಯ! ಇದನ್ನು ಪುಷ್ಟೀಕರಿಸುವಂತೆ(ಸಪೋರ್ಟಿಂಗ್) ಗಂಗಾವತಿ ಪ್ರಾಣೇಶ್ ಸ್ಟೇಟ್ಮೆಂಟ್:- ಎಲೆಕ್ಟ್ರಾನಿಕ್ ಮೀಡಿಯಾದ ಮೊಬೈಲ್ ಹೇಳುತ್ತದೆ ನೀನು ಒಮ್ಮೆ ನನ್ನನ್ನು ತಲೆಬಗ್ಗಿಸಿ ನೋಡಿದರೆ ಸಾಕು ಇನ್ನೆಂದೂ ತಲೆ ಎತ್ತದಂತೆ ಮಾಡುತ್ತೇನೆ ಮತ್ತು ಪ್ರಿಂಟ್ ಮೀಡಿಯಾದ ಪುಸ್ತಕವು ಹೇಳುತ್ತದೆ ನೀನು ಒಮ್ಮೆ ನನ್ನನ್ನು ತಲೆತಗ್ಗಿಸಿ ಓದಿದರೆ ಸಾಕು ಎಂದೆಂದೂ ತಲೆ ಎತ್ತಿ ಬಾಳುವಂತೆ ಮಾಡುತ್ತೇನೆ ಎಂಬುದು ಅಕ್ಷರಷಃ ನಿಜಈಗಲಾದರೂ ಎಲೆಕ್ಟ್ರಾನಿಕ್ ಮಾಧ್ಯಮದವರು ಸಾಮಾಜಿಕ, ಮಾನವಿಕ, ಸಂಸ್ಕೃತಿ, ನಾಗರಿಕತೆ, ರಾಷ್ಟ್ರೀಯಭದ್ರತೆ, ಮುಂತಾದ ನೈತಿಕ ಬದ್ಧತೆ ಉಳ್ಳವರಾಗಿ ಇವತ್ತಿನಿಂದಲೆ ಸಾಧ್ಯವಾದಷ್ಟು ಮಾರ್ಪಾಡು ಮಾಡಿದರೆ ಮಾತ್ರ ದೇಶ ಮತ್ತು ಪ್ರಜೆ ಸುರಕ್ಷಿತ ಕ್ಷೇಮವಾಗಿರಲು ಸಾಧ್ಯ. ನಿಟ್ಟಿನಲ್ಲಿ ಮುದ್ರಣ ಮಾಧ್ಯಮದವರು, ಸಾರ್ವಜನಿಕರು, ಅಧ್ಯಾಪಕವರ್ಗ ವಿದ್ಯಾರ್ಥಿಗಳು, ರಾಜಕಾರಣಿಗಳು, ಸಿನಿಮಾದವರು ಸಾಥ್ ನೀಡುತ್ತಾರೆ. ಸನಾತನದ ಧರ್ಮ, ಪರಂಪರೆ, ಸಂಸ್ಕೃತಿ, ನಾಗರಿಕತೆ, ಉಳಿಸಿಕೊಳ್ಳಲು ಈಗಲಾದರೂ ಪ್ರತಿಜ್ಞೆ ಮಾಡೋಣ?! 

ಕುಮಾರಕವಿ ಬಿ.ಎನ್.ನಟರಾಜ್[೯೦೩೬೯೭೬೪೭೧]

           ಬೆಂಗಳೂರು-೫೬೦೦೭೨ ೯೦