ಒಂದು ವಿಷಯ/ಮಾಹಿತಿಯನ್ನು ಮಾನವ/ಯಂತ್ರಶಕ್ತಿ ಮೂಲಕ ವ್ಯಕ್ತಿಯಿಂದ-ವ್ಯಕ್ತಿಗೆ/ಸಮೂಹಕ್ಕೆ ಅಥವ ಸಮೂಹದಿಂದ-ಸಮೂಹಕ್ಕೆ/ವ್ಯಕ್ತಿಗೆ ಬಿಸಿಸುದ್ದಿಯನ್ನಾಗಿಸಿ ಸರಿಸಮಯಕ್ಕೆ ಪೂರ್ಣವಾಗಿ ಸತ್ಯವಾಗಿ ತಲುಪಿಸುವ ಯು(ಶ)ಕ್ತಿಯೆಮಾಧ್ಯಮ! ಯಾವುದೆ ಸಮಾಚಾರವು ಭೂತ-ವರ್ತಮಾನ-ಭವಿಷ್ಯತ್‌ಕಾಲ/ಸಂದರ್ಭಕ್ಕೆ ತಕ್ಕಂತೆ ಪ್ರಶ್ನಾತೀತವಾಗಿದ್ದು ತನುತಟ್ಟುವಂತೆ ಮನಮುಟ್ಟುವಂತೆ ಮನವರಿಕೆ ಆಗುವಂತೆ ಇರಬೇಕು! ಇದು ಸಂಪಾದಕನ ಕರ್ತವ್ಯ/ತಾಕತ್ ಮಾತ್ರವಲ್ಲ ಮಾಧ್ಯಮದ ಧರ್ಮವೂ ಹೌದು! ಒಮ್ಮೆ ನವದೆಹಲಿಯ ನಿರ್ವಚನ್ ಭವನದ ಸುದ್ದಿಗೋಷ್ಠಿಯಲ್ಲಿ CORRUPTIVE MEDIA ಬಗ್ಗೆ ಅಂದಿನ ಚೀಫ಼್ ಎಲೆಕ್ಷನ್ ಕಮಿಶನರ್ ಆಗಿದ್ದ ಟಿ.ಎನ್. ಶೇಷನ್ ಗುಡುಗಿದ್ದು ಹೀಗೆ“If my chastity is being proclaimed by prostitutes, I don’t want such chastity” ಇದು ಇಲ್ಲಿ ಅಪ್ರಸ್ತುತವಲ್ಲ?

Print media is THE MOTHER of Electronic media! ಒಂದೇನಾಣ್ಯದ-ಎರಡುಮುಖ ಎಂದೂ ಹಲವರ ಅಭಿಪ್ರಾಯ? ಈ ಎರಡೂ ಮಾಧ್ಯಮದ ಗುರಿ ಒಂದೇ, ಆದರೆ ತಲುಪಿಸುವ ಹಾದಿ ಮಾತ್ರ ಬೇರೆ ಬೇರೆ. ಒಂದು ಪ್ರಸಂಗವನ್ನು ಸಂದರ್ಭಕ್ಕೆ/ಅನುಕೂಲಕ್ಕೆ ತಕ್ಕಂತೆ, ಸುದ್ದಿ/ಲೇಖನ/ಕತೆ/ಧಾರಾವಾಹಿ ಯನ್ನಾಗಿಸಿ ಪ್ರಕಟಿ[ಬಿತ್ತರಿ]ಸಬಹುದು. ಸದರಿ ಮಾಹಿತಿಯು ಪೂರ್ಣ[ಸತ್ಯ]ವಾಗಿದ್ದರೆ ಮಾತ್ರ ಪ್ರಶ್ನಾತೀತ? ಇಲ್ಲದಿದ್ದರೆ ಅನುಮಾನಕ್ಕೆ, ಪ್ರಶ್ನೆಗೆ, ಎಡೆಮಾಡಿಕೊಟ್ಟು ಸಮಸ್ಯೆಗಳ ಮಹಾಪೂರ ಸೃಷ್ಟಿಸಿ ಮಾಧ್ಯಮವನ್ನು ಟೊಳ್ಳಾಗಿಸುತ್ತದೆ! ಇದು ಉತ್ತಮ ಮಾಧ್ಯಮದ ಲಕ್ಷಣವಲ್ಲ. ಪ್ರತಿಯೊಬ್ಬ ಮಾಧ್ಯಮಿ think before you ink; pen is mightier than sword ನಾಣ್ಣುಡಿಯನ್ನು ಆಗಾಗ್ಗೆ ಮನದಟ್ಟು ಮಾಡಿಕೊಂಡರೆ sಚಿಜಿe-ಟiಜಿe! ಇಲ್ಲದಿದ್ದರೆ ಎಂಥವರೂ ಸಹ ಮುಗ್ಗರಿಸಿ safe-life? ಮಾಡಿಕೊಳ್ಳುವಂತೆ ಆಗಬಹುದು. ಅಂಥ ಕೆಲವು ನಿದರ್ಶನಗಳು ಇಲ್ಲಿವೆ:- ಮುಗಿಲೆತ್ತರ ತಲುಪಿದ್ದ ಪತ್ರಿಕೆ-ಪತ್ರಿಕೋದ್ಯಮಿ ಪ್ರಪಾತಕ್ಕೆ ಬಿದ್ದು ಏಳಲಾರದಂತಾದ, ಅಕಾಲಿಕ ಮೃತ್ಯುಗೆ ತುತ್ತಾದ, ಮರಣಕ್ಕೆ/ಆತ್ಮಹತ್ಯೆಗೆ ಶರಣಾದ ಅಥವಾ ನರಳುತ್ತ ಬೀದಿ ಹೆಣವಾದ ಘಟನೆ ಬಹಳಷ್ಟಿವೆ! ಪ್ರಪಂಚದಲ್ಲೆ ಫ಼ಸ್ಟ್ ಪ್ಲೇಸ್‌ನಲ್ಲಿದ್ದ LIFE[1883-1978] [೧೮೮೩-೧೯೭೮] ಭಾರತದ ನಂ.೧. ಸ್ಥಾನದಲ್ಲಿದ್ದ BLITZ [೧೯೪೧-೧೯೯೯] ಹಾಗೂ SCREEN [೧೯೫೦-೨೦೧೫] ಸಾಪ್ತಾಹಿಕಗಳು ಪತನಗೊಂಡವು! ತಾಯಿನಾಡು, ಹಿಂದುನೇಶನ್[೫ಭಾಷೆಗಳಲ್ಲಿ ಏಕಕಾಲಕ್ಕೆಪ್ರಕಟಿತ] ಚಿತ್ರಸುಧ, ಚಿತ್ರಶ್ರೀ, ನಟರಾಜ, ಮೇನಕಾ, ಪ್ರಜಾಮತ, ಲಂಕೇಶ್‌ಪತ್ರಿಕೆ, ಪೊಲೀಸ್‌ನ್ಯೂಸ್, ಹಾಯ್‌ಬೆಂಗಳೂರು ಮುಂತಾದ ಅನೇಕ ಸುಪ್ರಸಿದ್ಧ ಪತ್ರಿಕೆಗಳು ಪಾತಾಳಕ್ಕಿಳಿದವು! ಸಮಯ, ಸಮರ, ನ್ಯೂಸ್೧, ಉಷಾ, ಚಾಮುಂಡಿ, ಈ-ಟಿವಿ ಮುಂತಾದ ಅನೇಕ ಜನಪ್ರಿಯ ಚಾನಲ್‌ಗಳು ಅಂತ್ಯ ಕಂಡದ್ದು ದುರಂತ ಇತಿಹಾಸ!
ಮುದ್ರಣ ಮಾಧ್ಯಮ (PRINT MEDIA)

[೧]ಸಾರ್ವಜನಿಕ ಅಂಗ (Public Sector):-
ವೃತ್ತಪತ್ರಿಕೆ-ದೈನಿಕ(Daily-Newspaper):- ಬೆಳಗಿನ ಅಥವಾ ಸಂಜೆ ದಿನಪತ್ರಿಕೆ ಚಾಲ್ತಿಯಲ್ಲಿದೆ. ಈ ಎರಡೂ ಬಗೆಯ ನ್ಯೂಸ್ ಪೇಪರ್‌ನ ಸ್ಥಿರಶೀರ್ಷಿಕೆಗಳು; ಸಂಪಾದಕೀಯ, ಸ್ಥಳೀಯ/ರಾಜ್ಯ/ರಾಷ್ಟ್ರ/ಅಂತಾರಾಷ್ಟ್ರ ಸುದ್ದಿ-ಸಮಾಚಾರದ ಪುಟ ಸಹಜವಾಗಿದ್ದು, ಸುಭಾಷಿತ, ಅಂಕಣ, ಓದುಗರ ವೇದಿಕೆ, ಗಾದೆ, ಒಗಟು, ಹಾಸ್ಯ, ಸಾಮಾನ್ಯಜ್ಞಾನ, ವಿದ್ಯಾರ್ಥಿ ಮಾರ್ಗದರ್ಶಿ, ಕ್ರೀಡಾ, ಸಿನಿಮಾ, ವಾಣಿಜ್ಯೋದ್ಯಮ ವಿಜ್ಞಾನ-ತಂತ್ರಜ್ಞಾನ ಸುದ್ದಿಯ ಪುಟಗಳಿರುತ್ತದೆ. ಮಹಿಳಾ ಮತ್ತು ಮಕ್ಕಳ, ಯುವಕರ ಉದ್ಯೋಗದರ್ಶಿ, ನವಪ್ರಕಾಶನ, ಸಾದರಸ್ವೀಕಾರ, ಪುಸ್ತಕವಿಮರ್ಶೆ, ದಿನಭವಿಷ್ಯ, ನಗರದಲ್ಲಿ ಇಂದು, ಬೇಕಾಗಿದ್ದಾರೆ, ಹೆಸರುಬದಲಾವಣೆ, ಮನೆ/ಸೈಟು ಮಾರಾಟಕ್ಕಿದೆ, ಸಾರ್ವಜನಿಕ ತಿಳುವಳಿಕೆ, ಹರಾಜುನೋಟೀಸ್, ಇತ್ಯಾದಿ ಸಮಾಚಾರದ ಪುಟಗಳು ನಿಯಮಿತವಾಗಿ ಇರುತ್ತವೆ. ಇವೆಲ್ಲದರ ಜತೆಗೆ ಬಹು ಮುಖ್ಯವಾದ ಆರ್ಥಿಕ ಸಂಪನ್ಮೂಲದ ಜಾಹೀರಾತು/ಪ್ರಕಟಣೆ ಪುಟಗಳು ದಿನವೂ ಇರುತ್ತದೆ. ಪ್ರತಿ ಭಾನುವಾರ ಸಾಪ್ತಾಹಿಕ ಪುರವಣಿಯ ವಿಶೇಷ ಪುಟಗಳಲ್ಲಿ ಕತೆ, ಕವನ, ಕಲೆ, ನೃತ್ಯ, ಸಂಗೀತ, ರಸಗವಳ, ಮುಂತಾದ ಅತಿರಿಕ್ತ ಮಾಹಿತಿಗಳು ಲಭ್ಯ! ಈ ಉದ್ದಿಮೆಯಲ್ಲಿ ಏರಿಳಿತದ ಕಷ್ಟ ನಷ್ಟ ನಿಷ್ಠುರ ಸಹಜವಾಗಿ ಇದ್ದೇ ಇರುತ್ತದೆ. ಹಾಗಾಗಿ ಸಂಪಾದಕ/ಮಾಲೀಕ free-tension ತೆಗೆದುಕೊಳ್ಳುವ ಬದಲು tension-free ಆದರೆ ಮಾತ್ರ ಹೃದಯ/ಮಧುಮೇಹ/ಇನ್ನಿತರ ರೋಗದಿಂದ ಬಚಾವ್!

ಪ್ರಪಂಚದ ಮೊಟ್ಟಮೊದಲ ವೃತ್ತಪತ್ರಿಕೆ The Relation [weekly]] ಕ್ರಿ.ಶ.೧೬೦೫ರಲ್ಲಿ ಜೊಹಾನ್ ಕೊರೊಲಸ್ ಎಂಬುವನಿಂದ ಜರ್ಮನಿಯಲ್ಲಿ ಪ್ರಕಟಗೊಂಡಿತು. ಏಷ್ಯಾದ ಅತಿ ಪುರಾತನ ಪತ್ರಿಕೆ ‘ಬಾಂಬೆ ಸಮಾಚಾರ್’ ೧೮೨೨ರಲ್ಲಿ ಪ್ರಾರಂಭವಾಗಿ ಇವತ್ತಿಗೂ [ಗುಜರಾತಿ] ಪ್ರಕಟವಾಗುತ್ತಿದೆ! ಭಾರತದ ಪ್ರಪ್ರಥಮ ಇಂಗ್ಲಿಷ್ ನ್ಯುಸ್‌ಪೇಪರ್ ಹಿಕೀಸ್‌ಬೆಂಗಾಲ್‌ಗೆಜ಼ೆಟ್ ೧೭೮೦ರಲ್ಲಿ ಪ್ರಕಟಗೊಂಡಿತು. ಇದರ ಸಂಪಾದಕ ಪ್ರಕಾಶಕ-ಮುದ್ರಕ ಜೇಮ್ಸ್‌ಆಗಸ್ಟಸ್‌ಹಿಕೀ. ೧೮೨೬ರಲ್ಲಿ ಹಿಂದಿ ಭಾಷೆಯ ಪ್ರಪ್ರಥಮ ವಾರಪತ್ರಿಕೆ ಉದಂತ್‌ಮಾರ್ತಾಂಡ್ ಕಲ್ಕತ್ತಾದಲ್ಲಿ ಪ್ರಾರಂಭ. ಇದರ ಸಂಪಾದಕ-ಪ್ರಕಾಶಕ ಪಂಡಿತ್ ಜುಗಲ್‌ಕಿಶೋರ್ ಶುಕ್ಲ. ಕಾಲಕ್ರಮೇಣ ವಿಶ್ವದಾದ್ಯಂತ ಸುಮಾರು ೨೧೫ ಭಾಷೆಗಳಲ್ಲಿ ಪ್ರಕಟ ವಾಗುತ್ತಿರುವ ಅ(ನ)ಧಿಕೃತ ವೃತ್ತಪತ್ರಿಕೆಗಳ ಅಂದಾಜು ಸಂಖ್ಯೆ ೧೫೦೦೦ ಮೀರಿದೆ. ಸಣ್ಣ ಪತ್ರಿಕೆಗಳ ಸಂಖ್ಯೆ ೧೨೬೦ ಇದ್ದು, ನಿಯತಕಾಲಿಕೆಗಳ [periodicals] s] ಸಂಖ್ಯೆ ಅಂದಾಜು ೩೫೦೦ ಇರಬಹುದು?!

ಕರ್ನಾಟಕ[ಮೈಸೂರು] ರಾಜ್ಯದ ಮೊಟ್ಟಮೊದಲ ಕನ್ನಡ ವೃತ್ತಪತ್ರಿಕೆ [೪ಪುಟಗಳ ವಾರಪತ್ರಿಕೆ] ಮಂಗಳೂರ ಸಮಾಚಾರ ೧೮೪೩ರಲ್ಲಿ ಮಂಗಳೂರು ನಗರದಿಂದ ಪ್ರಕಟಗೊಂಡಿತು! ಜರ್ಮನಿ ಮೂಲದ ರೆ||ಹರ್ಮನ್ ಫ಼್ರೆಡ್ರಿಕ್ ಮೋಗ್ಲಿಂಗ್ ಇದರ ಸಂಸ್ಥಾಪಕ. ಚಪ್ಪಡಿ ಕಲ್ಲಂಟಿಂದ ಮುದ್ರಿಸುತ್ತಿದ್ದ ಈ ಪತ್ರಿಕೆಯ ಪ್ರಿಂಟರ್ & ಪಬ್ಲಿಶರ್ ಮಂಗಳೂರಿನ ಬೇಸಲ್ ಮಿಶನ್ ಪ್ರಿಂಟಿಂಗ್ ಪ್ರೆಸ್. ಮಂಗಳೂರ ಸಮಾಚಾರ ಪತ್ರಿಕೆಯು ಕರ್ನಾಟಕ/ಭಾರತದಲ್ಲಷ್ಟೆ ಅಲ್ಲ ಅರಬ್, ಆಫ಼್ಘಾನಿಸ್ತಾನ, ಜರ್ಮನಿ, ಮುಂತಾದ [ವಿ]ದೇಶಗಳಲ್ಲೂ ಪ್ರಸರಣ ಹೊಂದಿತ್ತು ಎಂಬುದು ಅಚ್ಚರಿ ಮತ್ತು ಹೆಮ್ಮೆಯ ಸಂಗತಿ!
ಪಾಕ್ಷಿಕ(fortnightly),
ಮಾಸಿಕ(fortnightly),
(ನಿಯತಕಾಲಿಕ ಪತ್ರಿಕೆ) periodical
ವಾರಪತ್ರಿಕೆ ( weeklym )
ದ್ವೈಮಾಸಿಕ(bimonthly),
ತ್ರೈಮಾಸಿಕ(quarterly),
ಅರ್ಧವಾರ್ಷಿಕ(halfyearly),),
ವಾರ್ಷಿಕ(yearly/annual),
ಸ್ಮರಣಸಂಚಿಕೆ(s souvenir),
ಪ್ರವಾಸಕಥನ(travelogue),
ಜೀವನಚರಿತ್ರೆ(biography),),
ಆತ್ಮಚರಿತ್ರೆ(autobiography),
ಕಥಾಸಂಕಲನ(s tales),),
ಕವನಸಂಕಲನ(poems),,
ಕಾದಂಬರಿ(novel),),
ನಿಘಂಟು(dictionary),
ಮಾರ್ಗದರ್ಶಿ(guide),
ವಿಳಾಸದರ್ಶಿ(directory),
ವೇಳಾಪಟ್ಟಿ(timetable),
ದಿನಚರಿಪುಸ್ತಕ(diary/calendar),
ಪಠ್ಯಪುಸ್ತಕ(textbook),
ಉದ್ಗ್ರಂಥ), epic
ವಿಶ್ವಕೋಶ encyclopedia)
ಮುಂತಾದವು ಇವತ್ತಿಗೂ ಮುದ್ರಣಮಾಧ್ಯಮದಲ್ಲೆ ಪ್ರಕಟಗೊಳ್ಳುತ್ತಿವೆ!
[೨]ಖಾಸಗಿ ಅಂಗ (Private Sector):-

ಆಹ್ವಾನ ಪತ್ರಿಕೆ:- ಲಗ್ನಪತ್ರಿಕೆ, ಗೃಹಪ್ರವೇಶ, ನಾಮಕರಣ, ಪೂಜಾ, ನೃತ್ಯ, ನಾಟಕ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭಾನ್ವೇಷಣೆ, ಉದ್ಘಾಟನೆ, ಸಮಾರೋಪ-ಸಮಾರಂಭ, ಶಂಕುಸ್ಥಾಪನೆ, ಪುಸ್ತಕಬಿಡುಗಡೆ/ಲೋಕಾರ್ಪಣೆ, ಮುಂತಾದ ಕಾರ್ಯಕ್ರಮಗಳ ಆಹ್ವಾನಪತ್ರಿಕೆ. ಗಣೇಶೋತ್ಸವ, ರಾಜ್ಯೋತ್ಸವ, ಗಣರಾಜ್ಯೋತ್ಸವ, ಸ್ವಾತಂತ್ರೋತ್ಸವ, ಶ್ರೀರಾಮನವಮಿ, ಶ್ರೀಕೃಷ್ಣಜನ್ಮಾಷ್ಟಮಿ, ಹನುಮಜ್ಜಯಂತಿ, ಬಸವ/ ಕೆಂಪೇಗೌಡ/ಕನಕ/ವಾಲ್ಮೀಕಿ/ಮುಂತಾದ ಜಯಂತಿ. ಚಂಡಿ/ಚಾಮುಂಡಿ/ಮಾರಿ ಹಬ್ಬದ ಆಹ್ವಾನ ಪತ್ರಿಕೆಗಳು ಈಗಲೂ ಮುದ್ರಣ ಮಾಧ್ಯಮ ಅವಲಂಬಿಸಿದೆ. ಅದೇವೇಳೆ ಮುದ್ರಣಮಾಧ್ಯಮ ಕ್ಷೇತ್ರವೂ ಸಹ ಇಂಥವುಗಳಿಂದಲೆ ಸರಾಗವಾಗಿ ಸಾಗುತ್ತಿದೆ?!
ಪ್ರಕಟಣಾ ಪತ್ರಿಕೆಗಳು:- ಜಾಹಿರಾತು, ಭಿತ್ತಿಪತ್ರ, ವಾಲ್ಪೋಸ್ಟರ್, ಫ಼್ಲೆಕ್ಸ್ಬೋರ್ಡ್, ಪ್ರಾಸ್ಪೆಕ್ಟಸ್/ಪ್ರವೇಶಾತಿಅರ್ಜಿ, ಅಂಕಪಟ್ಟಿ, ವೇಳಾಪಟ್ಟಿ, ಚೀಟಿಪುಸ್ತಕ, ನೋಟ್ಪುಸ್ತಕ, ದಿನಚರಿಪುಸ್ತಕ, ಮಗ್ಗಿಪುಸ್ತಕ, ಚಿತ್ರಗೀತೆಪುಸ್ತಕ, ಜಾನಪದ[ಹಾಡಿನ]ಪುಸ್ತಕ, ಭಕ್ತಿಗೀತೆಪುಸ್ತಕ, ದಾಸರಪದಗಳು, ತರಾವರಿ ಕ್ಯಾಲೆಂಡರ್, ದೇವರಪಟ/ಫ಼ೋಟೊ ಇವೆಲ್ಲವೂ ಮುದ್ರಣ ಮಾಧ್ಯಮದ ನಿರಂತರ ಕೊಡುಗೆಯಾಗಿದೆ.
ಇವತ್ತಿಗೂ ಈಎಲ್ಲ ಪ್ರಾಕಾರಗಳು ಮುದ್ರಣ ಮಾಧ್ಯಮದ ಮೂಲಕವೆ ಪ್ರಕಾಶನಗೊಳ್ಳುತ್ತಿವೆ. ಏಕೆಂದರೆ, ಮುದ್ರಣದ ಪತ್ರಿಕೆ, ಪುಸ್ತಕ (ಸಂ)ಪುಟವನ್ನು ಸಾವಿರಾರು ವರ್ಷಗಳವರೆಗೆ ಸಂಗ್ರಹಿಸಿಡಬಹುದು. ಇದಕ್ಕೆ ಒಂದು ಚದರಡಿಯಿಂದ ಸಾವಿರಾರು ಚದರಡಿಯ ವಿಸ್ತೀರ್ಣವುಳ್ಳ ಗ್ರಂಥಾಲಯ ಕಟ್ಟಡ, ಅದನ್ನು ನಿರ್ವಹಿಸಬಲ್ಲ ವ್ಯಕ್ತಿ/ಗ್ರಂಥಪಾಲಕ/ಸಿಬ್ಬಂದಿವರ್ಗದ ಅವಶ್ಯಕತೆ ಇದೆ. ಆದರೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಈ ತರಹದ ಅನುಕೂಲ ಇರುವುದಿಲ್ಲ, ಈಬಗೆ ವ್ಯವಸ್ಥೆ ಅನ್ವಯಿಸುವುದೂಇಲ್ಲ. ಈ ಮೇಲ್ಕಂಡ ಎಲ್ಲ ಮುದ್ರಣ ಮಾಧ್ಯಮದ ಪ್ರತಿಫ಼ಲ/ಫ಼ಲಿತಾಂಶ ಸರ್ವಮಾನ್ಯ, ಸರ್ವವ್ಯಾಪಿ, ಸರ್ವಶ್ರೇಷ್ಠ, ಸಾರ್ವಕಾಲಿಕ ಹಾಗೂ ಸುಧೀರ್ಘಬಾಳಿಕೆ ಉಳ್ಳದ್ದಾಗಿದೆ! ಆದರೆ, ಇತ್ತೀಚಿನ ತಂತ್ರಜ್ಞಾನದಿಂದಾಗಿ ವಿದ್ಯುನ್ಮಾನ ಮಾಧ್ಯಮದ [ಟಿ.ವಿ,ಕಂಪ್ಯುಟರ್,ಲ್ಯಾಪ್‌ಟಾಪ್,ಟ್ಯಾಬ್ಲೆಟ್,ಸ್ಮಾರ್ಟ್(ಐ)ಫ಼ೋನ್,ಫ಼್ಲಾಪಿ,ಪೆನ್‌ಡ್ರೈವ್,ಹಾರ್ಡ್‌ಡ್ರೈವ್,ಡಿಸ್ಕ್,ಸಿ.ಡಿ.ಈ-ಮೈಲ್,ಇತ್ಯಾದಿ] ಮೂಲಕವೂ ಪ್ರಸಾರಗೊಳ್ಳುತ್ತಿವೆ. ವಿದ್ಯುನ್ಮಾನ ಗ್ರಂಥಾಲಯದಲ್ಲೂ ಸಂಗ್ರಹಿಸಿ ಜೋಪಾನ ಮಾಡಲಾಗುತ್ತಿದೆ. ಆದರೂ ಓಲ್ಡ್ ಈಸ್ ಗೋಲ್ಡ್! ಎಂಬುದನ್ನು ತಳ್ಳಿಹಾಕುವಂತಿಲ್ಲ?
ಮುದ್ರಣ ಮಾಧ್ಯಮದ ಗುಣಾವಗುಣಗಳು[scope, merits, de-merits of print media, ಪುರಾತನ, ಪರಂಪರಾನುಗತ, ನಿರುದ್ಯೋಗ ನಿವಾರಣೆ, ಅವಿದ್ಯಾವಂತಿಕೆ ನಿರ್ಮೂಲನ, ಎಲ್ಲೆಡೆ ಸಲ್ಲುವ, ಸದಾ ಗೆಲ್ಲುವ, ಶಾಶ್ವತ ದಾಖಲೆ, ಧೀರ್ಘ ಬಾಳಿಕೆ, ಲಘು ಬಂಡವಾಳ, ಸತ್ಯ ಸಂದೇಶ, ನಿತ್ಯ ಆದಾಯ, ಸಾಂವಿಧಾನಿಕ ಸಂಪತ್ತು, ಕೈಗೆಟಕೊ ಬೆಲೆ, ಅನುಮಾನ ಸ್ಪಷ್ಟೀಕರಣ, ಬಹೋಪಯೋಗಿ ಸಾಧನ, ಸಾರ್ಥಕ ಪುನರಾವರ್ತನೆ, ಅಗ್ಗ ನಿರ್ವಹಣೆ, ಸುಲಭ ಸಾಗಣೆ, ಜ್ಞಾನಾರ್ಜನೆ, ಮಾನವ ಚಾಲನೆ, ನಿಸರ್ಗ ಪಾಲನೆ, ಸಾಕ್ಷ್ಯಾಧಾರ ಪೂರ್ಣ, ಸಾಹಿತ್ಯ-ಸಂಗೀತ-ಕಲಾ-ಸೃಷ್ಠಿವೃದ್ಧಿ, ನ್ಯಾಯಾನ್ಯಾಯ ರುಜುವಾತು, ಜೀವನಾರ್ಥಿಕ ಗಳಿಕೆ, ಅಷ್ಟಾಂಗ ಆರೋಗ್ಯ, ನಿತ್ಯಹಿತಕರ, ತಾಯಿ-ತಂದೆ-ಗುರು-ಹಿರಿಯರ ಸೇತುಬಂಧ, ಕಾಯಕ ಸಿಂಧೂರ, ಸಮತೋಲನ ಕಷ್ಟ-ನಷ್ಟ, ಸಾಮಾಜಿಕ ಕಳಕಳಿ, ಜೀವನ ಕೌಶಲ್ಯ, ಸರ್ವಶಿಕ್ಷಣ-ಸಕಲಮುದ್ರಣ-ಪ್ರಸರಣ, ನಾಡು-ನುಡಿ ರಕ್ಷಣೆ ರಾಷ್ಟ್ರಾಭಿವೃದ್ಧಿ ಯೋ(ಚ)ಜನೆ, ಸುಧೀರ್ಘ ಜೀವನ, ಪುನರುತ್ಥಾನ ವಸ್ತು[À[re-cycling stuff]ಇವೆಲ್ಲವೂ ಪ್ಲಸ್ ಪಾಯಿಂಟ್ಸ್?!

ಕುಮಾರಕವಿ ಬಿ.ಎನ್.ನಟರಾಜ್(೯೦೩೬೯೭೬೪೭೧)
ಬೆಂಗಳೂರು-೫೬೦೦೭೨
ಮುಂದುವರೆಯುತ್ತದೆ……..