ಮೈಸೂರು, ನವಂಬರ್- (ತುಳಸೀದಾಸ್) ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿದ ಮಾನ್ಯ ಶಾಸಕರಾದ ಎಸ್.ಎ. ರಾಮದಾಸ್ ಅವರು ಅಲ್ಲಿದ್ದ ಗರ್ಭಿಣಿ ಸ್ತ್ರೀಯರ ಸಮಸ್ಯೆಗಳನ್ನು ಆಲಿಸಿದರು, ಅಲ್ಲದೇ ಅವರಿಗೆಲ್ಲ ಕೂರಲು ಸರಿಯಾದ ವ್ಯವಸ್ಥೆ ಮಾಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ನೂತನವಾಗಿ ನಿರ್ಮಾಣವಾಗುತ್ತಿರುವ SMT ಹೆರಿಗೆ ಆಸ್ಪತ್ರೆಯ ಕಟ್ಟಡ ಕಾಮಗಾರಿಯನ್ನು ವೀಕ್ಷಣೆ ಮಾಡಿ, ನಂತರ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿದರು.
ಆಸ್ಪತ್ರೆ ಕಟ್ಟಡ ಉದ್ಘಾಟನೆ ಮಾಡುವುದಲ್ಲ ಸುಸಜ್ಜಿತವಾಗಿ ನಿರ್ಮಾಣವಾದಮೇಲೆ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿ ಅಂದಿನಿಂದಲೇ ಜನತೆಯ ಸೇವೆಗೆ ತೆರೆದಿಡಬೇಕು ಎಂದು ಮಾನ್ಯ ಶಾಸಕರಾದ ಎಸ್.ಎ. ರಾಮದಾಸ್ ಅವರು ಇಂದು ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ತಾಕೀತು ಮಾಡಿದರು.
ಹೊಸ ಕಟ್ಟಡದ ಪ್ರಾರಂಭೋತ್ಸವಕ್ಕೂ ಮೊದಲು ಬೇಕಾಗಿರುವ ಮಾನವ ಸಂಪನ್ಮೂಲ, ವೈದ್ಯಕೀಯ ಯಂತ್ರೋಪಕರಣಗಳು, ವೈದ್ಯಕೀಯ ಉಪಯೋಗಿ ಪದಾರ್ಥಗಳನ್ನು, ಫಲಾನುಭವಿಗಳಿಗೆ ಉಪಯೋಗವಾಗುವಂತೆ ಕ್ಯಾOಟಿನ್ ಅನ್ನು ನಿರ್ಮಾಣ ಮಾಡಬೇಕೆಂದು ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾನ್ಯ ಶಾಸಕರೂ ಹಾಗೂ ರಕ್ಷಾ ಸಮಿತಿಯ ಅಧ್ಯಕ್ಷರಾದ ಎಸ್.ಎ. ರಾಮದಾಸ್ ಅವರಲ್ಲಿ ರಕ್ಷಾ ಸಮಿತಿಯ ಸದಸ್ಯರುಗಳು ಮನವಿ ಮಾಡಿದರು
2 ನೆ ಹಂತದ ಪ್ರಗತಿಯಾಗಿ ವೈದ್ಯರು ಮತ್ತು ಅಟೆಂಡರ್ ಗಳಿಗೆ ಉಪಯೋಗವಾಗುವ ರೀತಿಯಲ್ಲಿ ನಿರ್ಮಾಣ ಮಾಡುವ ಕ್ವಾಟ್ರಸ್ ಸೌಲಭ್ಯ ಒದಗಿಸಲು 2 ವಾರದ ಒಳಗೆ ನಕ್ಷೆ ಮತ್ತು ಎಸ್ಟಿಮೇಟ್ ಅನ್ನು ನೀಡಬೇಕೆಂದು ನಿರ್ಧರಿಸಿ ಸೂಚಿಸಲಾಯಿತು.
ರೋಗಿಗಳೊಂದಿಗೆ ಬಂದ ಸಂಬಂಧಿಗಳಿಗೆ ಶೌಚ ಗೃಹ ನಿರ್ಮಾಣ ಹಾಗೂ ವಿಶ್ರಾಂತಿ ಕೊಠಡಿಗಳ ನಿರ್ಮಾಣಕ್ಕೂ ಸೂಚನೆ ನೀಡಿದರು.
ವಿಶೇಷವಾಗಿ ವೈದ್ಯರು, ಅರೆ ವೈದ್ಯರು, ಅವಶ್ಯಕ ಸಿಬ್ಬಂಧಿಗಳಿಗೆ 24/7 ಕೆಲಸ ಮಾಡುವ ಅವರಿಗಾಗಿ shelter ನೀಡುವ ಕೆಲಸಕ್ಕೂ ಅನುಮೋದನೆ ನೀಡಿ ಸಂಬಂಧಪಟ್ಟ ವಿವರವನ್ನು ಸರ್ಕಾರಕ್ಕೆ ನೀಡಿ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಅನುಮೋದನೆ ಪಡೆದು ಹೆಚ್ಚುವರಿ 67 ಲಕ್ಷ ರೂ ಗಳನ್ನು ಬಿಡುಗಡೆ ಮಾಡಲು ACS ಜಾವೇದ್ ಅಕ್ತರ್ ಅವರಲ್ಲಿ ಕೋರಲು ರಕ್ಷಾ ಸಭೆಯಲ್ಲಿ ನಿರ್ಧರಿಸಲಾಯಿತು
ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಹಾಗೂ ನಗರ ಪಾಲಿಕಾ ಸದಸ್ಯರಾದ ಪಲ್ಲವಿ ಬೇಗಂ, ಸಮಿತಿ ಸದಸ್ಯರ ಶಿವಪ್ಪ, ಪಿ.ಟಿ ಕೃಷ್ಣ, ಗಿರೀಶ್ , ಸಂತೋಷ್ ವಿಜಯ ಕುಮಾರಿ ಅವರು, ಸಂಬಂಧಪಟ್ಟ ವೈದ್ಯಾಧಿಕಾರಿಗಳಾದ ಸೋಮಶೇಖರ್ , ಚಂದ್ರಶೇಖರ್ ,ಗುತ್ತಿಗೆದಾರರು ಮತ್ತು ಆರೋಗ್ಯ ಇಲಾಖೆಯ ಅಭಿಯಂತರರಾದ ಶ್ರೀನಿವಾಸ್ ಅವರು ಉಪಸ್ಥಿತರಿದ್ದರು.

By admin