ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲಪಟ್ಟಣದ ಓಲೈಟಿ ಸ್ಫೋರ್ಟ್ಸ್ ಅರೇನಾ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಿತು.
ಪಂದ್ಯಾವಳಿಯಲ್ಲಿ ೨೫ ತಂಡಗಳು ಭಾಗವಹಿಸಿದ್ದವು. ಈ ಪೈಕಿ ಚಾಮರಾಜನಗರ ತಂಡದ ಎಸ್. ಅಕ್ಷಯ್, ಉಲ್ಲಾಸ್ ಅವರು ಪ್ರಥಮಸ್ಥಾನಗಳಿಸಿ ೫ ಸಾವಿರ ನಗದು, ಟ್ರೋಫಿ ಪಡೆದರು.
ಕೊಳ್ಳೇಗಾಲದ ಪ್ರದೀಪ್ ಮತ್ತು ತೇಜು ದ್ವಿತೀಯಸ್ಥಾನಗಳಿಸಿದರು.
ಪ್ರಥಮಸ್ಥಾನಪಡೆದ ಎಸ್.ಅಕ್ಷಯ್, ಉಲ್ಲಾಸ್ ಅವರಿಗೆ ಓಲೈಟಿ ಸ್ಫೋರ್ಟ್ಸ್ ಅರೇನಾ ಒಳಾಂಗಣ ಸಂಸ್ಥಾಪಕ ಅಶೋಕ್ ಹಾಗೂ ಅದ್ವತ್ ಬಹುಮಾನ ವಿತರಣೆ ಮಾಡಿದರು.
ಕೊಳ್ಳೇಗಾಲಪಟ್ಟಣದ ಓಲೈಟಿ ಸ್ಫೋರ್ಟ್ಸ್ ಅರೇನಾ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನವಿತರಣೆ ನಡೆಯಿತು.