ವೃಕ್ಷಾಸನ ಇಡಿಯ ದೇಹಕ್ಕೆ ಮತ್ತು ಮನಸ್ಸಿಗೆ ಶಕ್ತಿ ಮತ್ತು ಆತ್ಮವಿಶ್ವಾಸ ಮೂಡಿಸುತ್ತದೆ
ವೃಕ್ಷಾಸನದ ಉಪಯೋಗ:
* ಬೆನ್ನು ಮೂಳೆಯನ್ನು ಬಲಪಡಿಸುತ್ತದೆ.
* ನರಗಳು ಬಲವಾಗುತ್ತವೆ.
* ಕಾಲಿನ ಮಂಡಿ ಹಾಗೂ ಸೊಂಟ ಬಲವಾಗುವುದು
* ಕಣ್ಣುಗಳ ದೃಷ್ಟಿಗೆ ತುಂಬಾ ಒಳ್ಳೆಯದು.
* ತಾಳ್ಮೆ ಹೆಚ್ಚಿಸುವುದು,ಏಕಾಗ್ರತೆ ಹೆಚ್ಚಿಸುವುದು.
ಈ ಭಂಗಿಯಲ್ಲಿ ನಿಲ್ಲುವುದರಿಂದ ನರಗಳ ಸಮತೋಲನ ಕಾಪಾಡಲು ತುಂಬಾ ಸಹಕಾರಿ. ದೃಷ್ಟಿಯನ್ನು ಒಂದು ಕಡೆ ನೆಟ್ಟು, ದೇಹವನ್ನು ಬ್ಯಾಲೆನ್ಸ್ ಮಾಡುವುದರಿಂದ ನರಗಳು ಬಲವಾಗುತ್ತವೆ, ಮಾನಸಿಕ ಒತ್ತಡ ಕಡಿಮೆಯಾಗುವುದೆಂದು ವಿಜ್ಞಾನ ಹೇಳಿದೆ.