ಗುಂಡ್ಲುಪೇಟೆ: ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷರಾಗಿ ನೇಮಕವಾದ ಎನ್. ಮಲ್ಲೇಶ್ ಅವರಿಗೆ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅಧಿಕೃತ ಆದೇಶ ಪತ್ರ ನೀಡಿ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ನೂತನ ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷರಾಗಿ ಎನ್. ಮಲ್ಲೇಶ್ ಮಾತನಾಡಿ, ಬಿಜೆಪಿಯಲ್ಲಿ ನಾಯಕ ಸಮುದಾಯದವರಿಗೆ ಹೆಚ್ಚಿನ ಮಾನ್ಯತೆ ಸಿಗುತ್ತಿದ್ದು, ನನ್ನನ್ನು ಗುರುತಿಸಿ ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಸ್ಥಾನ ನೀಡಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಇನ್ನು ಹೆಚ್ಚಿನ ಕಡೆ ಪಕ್ಷ ಅಧಿಕಾರ ಹಿಡಿಯುವಂತೆ ಶ್ರಮ ವಹಿಸಲಾಗುವುದು ಎಂದರು.
ಚಾಮರಾಜನಗರ ಜಿಲ್ಲಾ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಸುಂದರ್, ನಿವೃತ್ತ ಅಧಿಕಾರಿ ಚಿನ್ನಸ್ವಾಮಿ, ಮಹದೇವ ನಾಯಕ, ಕಾಳನಾಯಕ, ಪಡುವಾರಳ್ಳಿ ಟೆನ್ನಿಸ್ ಗೋಪಿ, ಗ್ರಾಪಂ ಸದಸ್ಯರಾದ ಚಿಕ್ಕಾಟಿ ಶಿವಣ್ಣನಾಯಕ್, ಜಿಲ್ಲಾ ಎಸ್ಟಿ ಮೋರ್ಚಾ ಮಾಜಿ ಅಧ್ಯಕ್ಷ ರಮೇಶನಾಯಕ್, ತೆರಕಣಾಂಬಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುನಿಲ್ ರಾಜು, ಪಿಎಚ್ಡಿ ಮಣಿಕಂಠ ನಾಯಕ್ ಸೇರಿದಂತೆ ಇತರರು ಹಾಜರಿದ್ದರು.
ವರದಿ: ಬಸವರಾಜು ಎಸ್ ಹಂಗಳ