ಮೈಸೂರಿನ ವಿಜಯನಗರ ೪ನೇ ಹಂತದ ಎನ್.ಪಿ.ಎಸ್. ಶಾಲೆಯ ಹತ್ತಿರ ಇರುವ ಗೋಪಾಲಸ್ವಾಮಿ ಬ್ಯಾಡ್‌ಮೆಂಟನ್ ಅರೇನಾದಲ್ಲಿ ಮಕ್ಕಳಿಗೆ ಷೆಟಲ್ ಬ್ಯಾಡ್‌ಮೆಂಟನ್ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಈ ಅಕಾಡೆಮಿಯಲ್ಲಿ ಸುಸಜ್ಜಿತ ಆರು(೬) ಸಿಂಥೆಟಿಕ್ ಕೋರ್ಟ್‌ಗಳನ್ನು ಒಳಗೊಂಡಿದೆ. ಪ್ರಮಾಣಿತ ವೃತ್ತಿಪರ ತರಬೇತುದಾರರಿಂದ ತರಬೇತಿಯನ್ನು ನೀಡಲಾಗುವುದು ಹಾಗು ವೃತ್ತಿಪರ ಆಟಗಾರರಿಗೂ ತರಬೇತಿಯನ್ನು ನೀಡಲಾಗುವುದು. ಆದ್ದರಿಂದ ಕ್ರೀಡಾಸಕ್ತರು ಹಾಗು ಮಕ್ಕಳು ಈ ಶಿಬಿರದ ಪ್ರಯೋಜನವನ್ನು ಪಡೆಯಬೇಕಾಗಿ ಅಕಾಡೆಮಿಯ ವ್ಯವಸ್ಥಾಪಕರಾದ ನಂಜುಂಡಸ್ವಾಮಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮುಖ್ಯ ಕೋಚ್ ಆದ ಅರ್ಜುನ್‌ರವರನ್ನು ಸಂಪರ್ಕಿಸಬಹುದು. (ಮೊ: ).9743526835).