ಮೈಸೂರು, ನವೆಂಬರ್- ಮದ್ದು-ಗುಂಡುಗಳ ವಾರ್ಷಿಕ ತರಬೇತಿ ಕಾರ್ಯಾಗಾರ ಹಿನ್ನೆಲೆ ಯಲ್ಲಿ ಮೈಸೂರು-ಮಂಡ್ಯ ರೈಲ್ವೆ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಜನ ಹಾಗೂ ಸಾಕು ಪ್ರಾಣಿಗಳ ಸಂಚಾರವನ್ನು ನಿಷೇದ ಮಾಡಿದೆ.
ರೈಲ್ವೆ ರಕ್ಷಣಾದಳ ಮೈಸೂರು ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಬುಧವಾರ ದಿಂದ ಶುಕ್ರವಾರದ ರವರೆಗೆ ಮದ್ದು-ಗುಂಡುಗಳ
ವಾರ್ಷಿಕ ತರಬೇತಿ ಹಿನ್ನೆಲೆ ಯಲ್ಲಿ ಪ್ರಾಣಿಗಳ ಹಾಗೂ ಜನರ ಸಂಚಾರ ನಿಷಿದ್ಧ.
ಮೊದಲ ಹಂತದ ಮದ್ದು-ಗುಂಡುಗಳ ವಾರ್ಷಿಕ ತರಬೇತಿ ಕಾರ್ಯಾಗಾರವನ್ನು “ಪೋಲೀಸ್ ಫೈರಿಂಗ್ ರೇಂಜ್”, ದೊಡ್ಡ ಬ್ಯಾಡರಹಳ್ಳಿ, ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸಲಾಗಿರುವುದರಿಂದ ಈ ವ್ಯಾಪ್ತಿಯಲ್ಲಿ ಸಾಕು ಪ್ರಾಣಿ ಹಾಗೂ ಜನ ಸಂಚಾರವನ್ನು ನಿಷೇದ ಪಡಿಸಿದ್ದು, ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕಾಗಿ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಜನಸಂಪರ್ಕಾಧಿಕಾರಿ ಪ್ರಿಯಾಶೆಟ್ಟಿ ಮನವಿ ಮಾಡಿದ್ದಾರೆ.