ಮೈಸೂರು: ಪ್ರಾಧ್ಯಾಪಕರಾಗಲು ಮೊದಲು ಬೋಧನೆಯಲ್ಲಿ ಒಲವುವಿರಬೇಕು. ಆಗ ಮಾತ್ರ ಒಬ್ಬ ಯಶಸ್ವಿ ಪ್ರಾಧ್ಯಾಪಕನಾಗಲು ಸಾಧ್ಯ. ಬೋಧನಾ ವೃತ್ತಿ ಬ್ಯಾಂಕ್, ಅಂಚೆಕಚೇರಿ ಹಾಗೂ ಇತರ ವೃತ್ತಿಗಳಂತೆ ಯಾಂತ್ರಿಕವಲ್ಲ. ಬದಲಾಗಿ ಇದೊಂದು ಸೃಜನಶೀಲತೆಯನ್ನು ಬೇಡುವ ವೃತ್ತಿ ಇದಾಗಿದೆ. ಅಧ್ಯಾಪಕರು ನಿರಂತರ ಕಲಿಕಾರ್ಥಿಯಾಗಿದ್ದರೆ ಮಾತ್ರ ಹುದ್ದೆಗೆ ಘನತೆ ಮತ್ತು ಬೆಲೆ ಬರುತ್ತದೆ. ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಲು ವೃತ್ತಿಯ ಬಗ್ಗೆ ಒಲವು, ಸಬ್ಜೆಕ್ಟ್ ಬಗ್ಗೆ ಪ್ರೀತಿ ಜೊತೆಗೆ ಎಲ್ಲದಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳನ್ನು ಪ್ರೀತಿಸುವ ಗುಣ ಬಹು ಮುಖ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಜಿ. ಹೇಮಂತ್ ಕುಮಾರ್ ಅಭಿಪ್ರಾಯಪಟ್ಟರು.
ಜ್ಞಾನಬುತ್ತಿ ಸಂಸ್ಥೆವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ?ಜ್ಞಾನಭಂಡಾರ? ಅಧ್ಯಯನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಪ್ರತಿ ವರ್ಷ ಮೈಸೂರು ವಿಶ್ವವಿದ್ಯಾನಿಲಯದಿಂದ ಸುಮಾರು ಮೂರು ಸಾವಿರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ನಾತಕೋತ್ತರ ಪದವಿ ಪಡೆದು ಹೊರಜಗತ್ತಿಗೆ ಬರುತ್ತಿದ್ದಾರೆ. ಅವರಲ್ಲಿ ಕನಿಷ್ಠ ಎರಡು ಸಾವಿರ ಮಂದಿಗಾದರೂ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ?ಕೆರಿಯರ್ ಹಬ್? ಸ್ಥಾಪನೆ ಮಾಡುವುದರ ಮೂಲಕ ಅವರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ.
ಕಾಲ ಬದಲಾಗಿದೆ, ಅಧ್ಯಾಪಕರು ನಿರಂತರ ಚಲಾವಣೆಯಾಗುವ ನಾಣ್ಯವಾಗಬೇಕು. ಅಂದರೆ ಅಧ್ಯಾಪಕರು ಕಾಲಕ್ಕೆ ತಕ್ಕ ಹಾಗೆ ತಮ್ಮ ವಿದ್ವತ್ತು ಮತ್ತು ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತಿರಬೇಕು ಎಂದು ಪ್ರೊ. ಎಂ.ಕೃಷ್ಣೇಗೌಡ ಅಭಿಪ್ರಾಯಪಟ್ಟರು. ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನಡೆಯುವ ಪರೀಕ್ಷೆಯು ವಸ್ತುನಿಷ್ಠವಾಗಿದ್ದು, ವಿದ್ಯಾರ್ಥಿಗಳು ಏಕಾಗ್ರತೆಯಿಂದ ನಿರಂತರ ಅಧ್ಯಯನ ಮಾಡುವುದರ ಮೂಲಕ ಯಶಸ್ಸುಗಳಿಸಲು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಎ. ಬಾಲಸುಬ್ರಮಣ್ಯ ತಿಳಿಸಿದರು.
ಇದೇ ಸಂದರ್ಭದಲ್ಲಿ ಜ್ಞಾನಬುತ್ತಿ ಸಂಸ್ಥೆಯ ಉಪಾಧ್ಯಕ್ಷರೂ ಹಿರಿಯ ಸಹಕಾರಿಗಳೂ ಆದ ವೈ.ಎನ್. ಶಂಕರೇಗೌಡ ಅವರಿಗೆ ಇತ್ತೀಚೆಗೆ ಡಾ. ಎಚ್. ನರಸಿಂಹಮಯ್ಯ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ನಿಮಿತ್ತ ಗೌರವಿಸಲಾಯಿತು. ಸಮಾರಂಭದಲ್ಲಿ ಜೈನಹಳ್ಳಿ ಸತ್ಯನಾರಾಯಣಗೌಡ, ಪ್ರೊ. ವಿ ಜಯಪ್ರಕಾಶ್, ಪ್ರೊ. ಹೊನ್ನಯ್ಯ, ಡಾ.ಎಸ್.ಬಿ.ಎಂ. ಪ್ರಸನ್ನ,. ಪ್ರೊ. ಕೃ.ಪ. ಗಣೇಶ, ಕಾರ್ಯದರ್ಶಿ ಎಚ್. ಬಾಲಕೃಷ್ಣ, ಡಾ. ಈ. ಶಿವಪ್ರಸಾದ್, ಪ್ರೊ. ಹೊನ್ನಯ್ಯ, ಪ್ರೊ. ವಿ. ಜಯಪ್ರಕಾಶ್, ಮಂದಾರ, ನವೀನ್ ಪ್ರಸಾದ್, ರೋಹನ್ ರವಿಕುಮಾರ್ ಮತ್ತಿತ್ತರು ಇದ್ದರು.
?ಜ್ಞಾನಬುತ್ತಿ? ಸಂಸ್ಥೆಯವರು ಆಯೋಜಿಸಿದ್ದ ಕಾಲೇಜು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಯನ ಪುಸ್ತಕವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಜಿ. ಹೇಮಂತ್ ಕುಮಾರ್ ಬಿಡುಗಡೆಗೊಳಿಸಿದರು. ಚಿತ್ರದಲ್ಲಿ ಪ್ರೊ. ಎಂ. ಕೃಷ್ಣೇಗೌಡ, ಪ್ರೊ. ಎ. ಬಾಲಸುಬ್ರಹ್ಮಣ್ಯಂ, ಹಿರಿಯ ಸಹಕಾರಿ ಶ್ರೀ ವೈ.ಎನ್. ಶಂಕರೇಗೌಡ, ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಎಚ್. ಬಾಲಕೃಷ್ಣ, ಪ್ರೊ. ಕೃ.ಪ. ಗಣೇಶ, ಡಾ. ಎಸ್.ಬಿ.ಎಂ. ಪ್ರಸನ್ನ, ಪ್ರೊ. ಹೊನ್ನಯ್ಯ, ಇತರರು ಇದ್ದರು.