ಚಾಮರಾಜನಗರ, ನವೆಂಬರ್- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2019-20ನೇ ಸಾಲಿನ ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ ಪರೀಕ್ಷೆಗೆ ಸಂಬಂಧಿಸಿದ ಪರೀಕ್ಷಾ ಶುಲ್ಕವನ್ನು ಪಾವತಿಸಲು ತಿಳಿಸಿದೆ.
ಜನವರಿ ಅವೃತ್ತಿಯಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷಕ್ಕೆ ಪ್ರವೇಶಾತಿ ಪಡೆದಿರುವ ಬಿ.ಎ, ಬಿ.ಕಾಂ, ಎಂ.ಎ, ಎಂ.ಕಾಂ ಮತ್ತು ಪ್ರಥಮ ವರ್ಷದ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಯ ಎಂ.ಎಸ್ಸಿ, ಪ್ರಥಮ ಸೆಮಿಸ್ಟರ್ ಎಂ.ಬಿ.ಎ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಡಿಸೆಂಬರ್ 17 ರೊಳಗೆ ಪಾವತಿಸಬೇಕು. ದಂಡ ಶುಲ್ಕದೊಂದಿಗೆ ಡಿಸೆಂಬರ್ 28ರೊಳಗೆ ಪಾವತಿಸಬೇಕು.
ಹೆಚ್ಚಿನ ಮಾಹಿತಿಗಾಗಿ www.ksoumysuru.ac.in ಅನ್ನು ಸಂಪರ್ಕಿಸುವಂತೆ ನಗರದ ಪ್ರದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By admin