ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಅಲೆಯ ವ್ಯಾಪಕತೆಯ ಈ ಸಮಯದಲ್ಲಿ ಶ್ರೀಮಂತರು , ಕೋಟ್ಯಧಿಪತಿ ಸಿನಿಮಾ ನಟರು , ಯುವಜನರು ಮನೆಯೊಳಗೆ ಉಳಿದು ಆನ್‌ಲೈನ್ ಗೇಮಿಂಗ್ , ಸಿನಿಮಾ ನೋಡುವುದರಲ್ಲಿ ಬ್ಯುಸಿಯಾಗಿದ್ದರೆ , ಈ ವಿದ್ಯಾರ್ಥಿನಿಯರಿಬ್ಬರು ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ . ಬೆಂಗಳೂರಿನ ಕಾಲೇಜು ವಿದ್ಯಾರ್ಥಿನಿಯರಿಬ್ಬರು ಸೋಂಕಿನಿಂದ ಮೃತಪಟ್ಟವರ ಮೃತದೇಹಗಳನ್ನು ಹೊಸೂರು ಮುಖ್ಯರಸ್ತೆಯಲ್ಲಿರುವ ಚಿತಾಗಾರಕ್ಕೆ ಸಾಗಿಸಿ ಗೌರವಯುವ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ . ಈ ಮೂಲಕ ಶವ ಎಂದರೆ ಸಾವಿರ ಅಡಿ ದೂರ ನಿಲ್ಲುವ ಹೆಣ್ಣುಮಕ್ಕಳ ಪೈಕಿ ಇವರು ವಿಭಿನ್ನವಾಗಿ ಕಾಣುತ್ತಿದ್ದಾರೆ . ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್’ಡಬ್ಲ್ಯೂ  ಓದುತ್ತಿರುವ ನಿಕೊಲೆ ಪೊರ್ಟಾಡೋ ( 20 ) , ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಟೀನಾ ಚೆರಿಯನ್ ( 21 )ಸ್ಮಶಾನಗಳ ಎದುರು ಸಾಲಾಗಿ ನಿಂತ ಆಂಬುಲೆನ್ಸ್‌ಗಳಿಂದ ಮೃತದೇಹಗಳನ್ನು ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ . ಕೊರೋನಾ ಮೃತದೇಹಗಳನ್ನು ಅಂತ್ಯಸಂಸ್ಕಾರ ಮಾಡುವ ಒಂದು ತಂಡದೊಂದಿಗೆ ಇಬ್ಬರು ಯುವತಿಯರು ಮೃತರ ಕುಟುಂಬಕ್ಕೆ ನೆರವಾಗುತ್ತಿದ್ದಾರೆ ಸದ್ಯ ಕಾಲೇಜುಗಳು ಮುಚ್ಚಿದ್ದು , ಪಾಠಗಳು ನಡೆಯುತ್ತಿಲ್ಲ . ಹೀಗಾಗಿ , ಸಮಾಜ ಸೇವೆ ಮಾಡುವ ಉದ್ದೇಶದಿಂದ ಈ ಕೆಲಸಕ್ಕೆ ಇಳಿದಿದ್ದಾಗಿ ಹೇಳಿದ್ದಾರೆ . ಮೊದಲ ದಿನ ಆಂಬುಲೆನ್ಸ್‌ಗಳಿಂದ ಮೃತದೇಹವನ್ನು ಇಳಿಸಿ ತೆಗೆದುಕೊಂಡು ಹೋಗಲು ಕೊಂಚ ಹೆದರಿಕೆಯಾಗಿತ್ತು . ದಿನಗಳು ಕಳೆಯುತ್ತಾ ಅಭ್ಯಾಸವಾಯ್ತು . ಕಳೆದ ವಾರ ಸಾವಿನ ಸಂಖ್ಯೆ ದ್ದು , ಒಂದೇ ದಿನ ಹೆಚ್ಚು ಮೃತದೇಹಗಳ ಅಂತ್ಯಸಂಸ್ಕಾರ ನಡೆಸಿದ್ದನ್ನು ನೆನಪಿಸಿಕೊಳ್ಳುತ್ತಾರೆ , ನಿಕೋಲೆ ಹಾಗೂ ಟೀನಾ .

By admin