ಶಿವರಾತ್ರಿ ಅಂಗವಾಗಿ ಇಂದು ಶಿವನಿಗೆ ವಿಶೇಷ ಆಭರಣ, ಅಲಂಕಾರ ಮಾಡಲಾಗಿದೆ. ತ್ರಿನೇಶ್ವರನಿಗೆ ವಿಶೇಷ ಪೂಜೆ, ಅಭಿಷೇಕ ವಿಶೇಷ ಪೂಜೆ ಮಾಡಲಾಗಿದೆ. ಇಂದು ಮಧ್ಯರಾತ್ರಿ ೧೨ ಗಂಟೆ ವರೆಗೆ ಭಕ್ತರಿಗೆ ಚಿನ್ನದ ಮುಖವಾಡ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಮಹಾಶಿವರಾತ್ರಿ ಸಂಭ್ರಮ ಆರಂಭವಾಗಿದೆ. ಮೈಸೂರು ಅರಮನೆಯ ತ್ರಿನೇಶ್ವರ ದೇಗುಲದಲ್ಲಿ ಸಡಗರ ಸಂಭ್ರಮ ಮನೆಮಾಡಿದೆ. ಮಹಾಶಿವರಾತ್ರಿ ಅಂಗವಾಗಿ ತ್ರಿನೇಶ್ವರ ದೇವರಿಗೆ ಚಿನ್ನದ ಮುಖವಾಡ ತೊಡಿಸಲಾಗಿದೆ. ೧೧ ಕೆಜಿ ತೂಕದ ಚಿನ್ನದ ಮುಖವಾಡವನ್ನು ಶಿವ ದೇವರಿಗೆ ತೊಡಿಸಲಾಗಿದೆ. ಈ ಮುಖವಾಡವನ್ನು ೧೯೫೨ ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಮಾಡಿಸಿದ್ದರು. ಪುತ್ರ ಸಂತಾನಕ್ಕಾಗಿ ಹರಕೆ ಹೊತ್ತಿದ್ದ ಒಡೆಯರ್ ತ್ರಿನೇಶ್ವರ, ಶ್ರೀಕಂಠೇಶ್ವರ, ಮುಡುಕೊತೊರೆ ಮಲ್ಲಿಕಾರ್ಜುನೇಶ್ವರನಿಗೆ ಮೂರು ಚಿನ್ನದ ಮುಖವಾಡ ಮಾಡಿಸಿದ್ದರು.

ಶಿವರಾತ್ರಿ ಅಂಗವಾಗಿ ಶಿವನಿಗೆ  ಇಂದು ವಿಶೇಷ ಆಭರಣ, ಅಲಂಕಾರ ಮಾಡಲಾಗಿದೆ. ತ್ರಿನೇಶ್ವರನಿಗೆ ವಿಶೇಷ ಪೂಜೆ, ಅಭಿಷೇಕ ವಿಶೇಷ ಪೂಜೆ ಮಾಡಲಾಗಿದೆ. ಇಂದು ಮಧ್ಯರಾತ್ರಿ ೧೨ ಗಂಟೆ ವರೆಗೆ ಭಕ್ತರಿಗೆ ಚಿನ್ನದ ಮುಖವಾಡ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಇದೆ. ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ, ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ