ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಂಗಳವಾರ ನಡೆದ ‘ಶಕ್ತಿ ಕೇಂದ್ರ ಪ್ರಮುಖ್ ಸಮ್ಮೇಳನ’ದಲ್ಲಿ ಕರ್ನಾಟಕದ ಬಿಜೆಪಿ ಕಾರ್ಯಕರ್ತರ ಉತ್ಸಾಹಭರಿತ ಸಭೆಯನ್ನು ಉದ್ದೇಶಿಸಿ ಸಮ್ಮೋಹಕ ಭಾಷಣ ನೀಡಿದರು. ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸಾಧನೆಯನ್ನು ಒತ್ತಿಹೇಳಿದ ಶಾ, ‘ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿಯವರ ನಾಯಕತ್ವದಲ್ಲಿ ಭಾರತೀಯ ಜನತಾ ಪಾರ್ಟಿಯ ಮೈತ್ರಿಕೂಟವು ಎಲ್ಲಾ 28 ಸ್ಥಾನಗಳನ್ನು ಗೆಲ್ಲಲ್ಲಿದ್ದು, ಕಾಂಗ್ರೆಸ್ಸಿಗೆ ಖಾತೆ ತೆರೆಯಲು ಬಿಡುವುದಿಲ್ಲ ಎಂದು ತುಂಬು ವಿಶ್ವಾಸದಿಂದ ಘೋಷಿಸಿಸುತ್ತಾ ಮುಂಬರುವ ಚುನಾವಣೆಯಣೆಗೆ ಮಹತ್ವಾಕಾಂಕ್ಷೆಯ ಉದ್ಘೋಷವನ್ನು ಹೊರಡಿಸಿದರು.

ಭ್ರಷ್ಟಾಚಾರದ ವಿರುದ್ಧ ಹೋರಾಡಲು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯಲು ಬಿಜೆಪಿಯ ಬದ್ಧತೆಯನ್ನು ಪುನರುಚ್ಚರಿಸುತ್ತಾ, ವಿರೋಧ ಪಕ್ಷಗಳನ್ನು, ವಿಶೇಷವಾಗಿ ಕಾಂಗ್ರೆಸ್ ನೇತೃತ್ವದ INDI ಮೈತ್ರಿಕೂಟವನ್ನು ಕಟುವಾಗಿ ಟೀಕಿಸಿದರು. ಅವರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಸೋಗಿನಲ್ಲಿ ತಮ್ಮ ಭ್ರಷ್ಟಾಚಾರವನ್ನು ರಕ್ಷಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಖಂಡಿಸಿದರು.
ಈ ಚುನಾವಣೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿಯ ಸ್ವಚ್ಛ ಆಡಳಿತ ಮತ್ತು ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟದ ಕೋಟ್ಯಂತರ ರೂಪಾಯಿಗಳ ಬೃಹತ್ ಭ್ರಷ್ಟಾಚಾರ ಹಗರಣಗಳ ನಡುವಿನ ತೀವ್ರ ವೈರುಧ್ಯದ ವಿಷಯವಾಗಿದೆ. ಮೋದಿಯವರ 23 ವರ್ಷಗಳ ಸಮಗ್ರತೆಯ ದಾಖಲೆಯನ್ನು ಎತ್ತಿ ಹೇಳಿದ ಶಾ, ಇದು ಕಾಂಗ್ರೆಸ್ ನಾಯಕರ ವಿರುದ್ಧದ ಭ್ರಷ್ಟಾಚಾರದ ಆರೋಪಗಳಿಗೆ ವ್ಯತಿರಿಕ್ತವಾಗಿದೆ ಎಂದರು. ಮುಂದುವರೆಸಿ, ಈಗ ಎಲ್ಲಾ ಭ್ರಷ್ಟರು ಅಮಾಯಕ ನಾಗರಿಕರನ್ನು ಶೋಷಿಸುವ ಒಂದೇ ಗುರಿಯತ್ತ ಕೈಜೋಡಿಸಿದ್ದಾರೆ ಎಂದರು.
ತಮ್ಮ ಕಠೋರ ಭಾಷಣವನ್ನು ಮುಂದುವರಿಸಿದ ಶಾ,ಪ್ರಜಾಸತ್ತಾತ್ಮಕ ಮೌಲ್ಯಗಳ ಕೊಲೆಯಾಗುತ್ತಿದೆ ಎಂದು ಬೊಬ್ಬೆ ಹೊಡೆಯುವ ಅವರ ಒಕ್ಕೂಟವು ಭ್ರಷ್ಟರನ್ನು ರಕ್ಷಿಸುವ ಒಂದು ಮುಖವಾಡ ಎಂದು ಟೀಕಿಸಿದರು. ಭ್ರಷ್ಟಾಚಾರ ನಿರ್ಮೂಲನೆಗೆ ಬಿಜೆಪಿಯ ಅಚಲ ಬದ್ಧತೆಯನ್ನು ಒತ್ತಿ ಹೇಳಿದ ಅವರು, ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿಯವರ ಸಂದೇಶವನ್ನು ಕರ್ನಾಟಕದ ಪ್ರತಿಯೊಂದು ಮನೆಮನೆಗೂ ವೈಯಕ್ತಿಕವಾಗಿ ತಲುಪಿಸಲಿದ್ದಾರೆ ಎಂದು ಪ್ರತಿಜ್ಞೆ ಮಾಡಿದರು.
1950 ರಿಂದ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬದಲಾಯಿಸಿಲ್ಲ ಎಂದು ಕಾಂಗ್ರೆಸ್ ಅಪಹಾಸ್ಯ ಮಾಡುತ್ತಿತ್ತು. ಇದಕ್ಕೆ ಕಾರಣ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಬಿಜೆಪಿಯ ಅಚಲ ಸಂಕಲ್ಪ, ವಿಶೇಷವಾಗಿ ಭ್ರಷ್ಟ ವ್ಯಕ್ತಿಗಳನ್ನು ನ್ಯಾಯಾಂಗಕ್ಕೆ ತರುವ ಅದರ ಪ್ರತಿಜ್ಞೆ. 2024 ರಲ್ಲಿ ದಾಖಲೆ ಜನಾದೇಶದೊಂದಿಗೆ ಬಿಜೆಪಿ ಮರಳಿ ಅಧಿಕಾರಕ್ಕೆ ಬರಲು ಸಜ್ಜಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ದೂರದೃಷಿಯ ನಾಯಕತ್ವ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಸಮರ್ಥ ದಕ್ಷತೆಯಲ್ಲಿ ಭಾರತೀಯ ಜನತಾ ಪಕ್ಷವು ಭಾರತದ ಅಭಿವೃದ್ಧಿಯಲ್ಲಿ ಸದಾ ಮಿನುಗುವ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಆಧುನಿಕ ಭಾರತೀಯ ರಾಜಕೀಯದ ಚಾಣಕ್ಯ ಅಮಿತ್ ಶಾ ಅವರ ಗಮನವು ಯಾವಾಗಲೂ ‘ ಕೆಳಹಂತದ ಮನುಷ್ಯನ’ ಅಭಿವೃದ್ಧಿ ಮತ್ತು ಉನ್ನತಿಯ ಮೇಲೆ ಕೇಂದ್ರೀಕೃತವಾಗಿದೆ. ಹೀಗಾಗಿ, ‘ನರೇಂದ್ರ ಮೋದಿ ಮತ್ತು ಅಮಿತ್ ಶಾ’ ವಿಜಯಶಾಲಿ ಜೋಡಿಗೆ ಕೇವಲ ಜನಾದೇಶದ ಬೆಂಬಲ ಮಾತ್ರವಲ್ಲದೇ, ವಿಕಸಿತ ಭಾರತದೆಡೆಗೆ ಒಲವು ಹೊಂದಿರುವ ಜನರ ಹೃದಯಗಳು ಸಾಥ್ ನೀಡಲಿವೆ.
ಶಾ ಅವರ ಈ ಭಾಷಣವು ಕೇವಲ ಕ್ರಿಯಾತ್ಮಕ ಕರೆಯಲ್ಲ; ಇದು ರಾಷ್ಟ್ರ ಸೇವೆಯೆಡೆಗಿನ ಬಿಜೆಪಿಯ ಸಮರ್ಪಣೆಯ ಹೃದಯಪೂರ್ವಕ ಪುನರುಚ್ಚರಣೆಯಾಗಿದೆ. ಎನ್‌ಡಿಎಗೆ ಬೆಂಬಲವನ್ನು ನೀಡುವಂತೆ ವಿನಂತಿಸುತ್ತಾ, ಕರ್ನಾಟಕದಲ್ಲಿ ಮೈತ್ರಿಕೂಟಕ್ಕೆ ಅಭೂತಪೂರ್ವ ಗೆಲುವು ನೀಡುವಂತೆ ಒತ್ತಾಯಿಸಿದರು. ಬಿಜೆಪಿ, ಜೆಡಿಎಸ್ ಜೊತೆಗಿನ ಮೈತ್ರಿಯೊಂದಿಗೆ ಕರ್ನಾಟಕದ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಅಚಲ ವಿಶ್ವಾಸ ವ್ಯಕ್ತಪಡಿಸುತ್ತಾ, ಕಾಂಗ್ರೆಸ್ಸಿಗೆ ನೆಲೆ ನಿಲ್ಲಲು ಬಿಡುವುದಿಲ್ಲ ಎಂದು ಶಾ ಪ್ರತಿಪಾದಿಸಿದರು.
ಶಾ ಅವರ ಮಾತುಗಳು ಕರ್ನಾಟಕದೆಡೆಗಿನ ಬಿಜೆಪಿಯ ಭ್ರಷ್ಟಾಚಾರ ಮುಕ್ತ, ಸಮಗ್ರ ಮತ್ತು ಪ್ರಗತಿಪರ ದೃಷ್ಟಿಕೋನವನ್ನು ಸಮರ್ಪಿಸಿದವು. ಚುನಾವಣಾ ಕದನ ಸಮೀಪಿಸುತ್ತಿರುವಂತೆಯೇ, ಕರ್ನಾಟಕದಲ್ಲಿ ಹೊಸ ಆಡಳಿತಕ್ಕೆ ನಾಂದಿ ಹಾಡುವ ಮೂಲಕ ಬಿಜೆಪಿ ಭರ್ಜರಿ ಗೆಲುವು ಸಾಧಿಸಲು ಸನ್ನದ್ಧವಾಗಿದೆ.