ಈ ಹುಡುಗ ಪಕ್ಕ ಹಳ್ಳಿ ಹೈದನ ರೀತಿ ಕಂಡ್ರೂ ಪ್ರತಿಭಾವಂತ ಅಂತ ನಿರೂಪಿಸಿಬಿಟ್ಟ! ಹೌದು, ಈತನ ಹೆಸರು ಸಿ.ಎಚ್. ನಾಯಕ, ಬಿಸಿಲನಾಡು ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ನಾರಬಂಡೆ ಎಂಬ ಪುಟ್ಟ ಹಳ್ಳಿಯಿಂದ ಬಂದ ಈ ಹೈದ ಬೆಂಗಳೂರಿನ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟು 8 ವರ್ಷದಿಂದ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದಾನೆ.
ನೋಡೋಕೆ ಗಡ್ಡ ಬಿಟ್ಟು, ಕಪ್ಪಗಿದ್ದೀನಿ ಅಂತ ಗಾಂಧಿನಗರದ ಬಣ್ಣದ ಜಗತ್ತಿನಿಂದ ದೂರ ಬಂದವರೇ ಹೆಚ್ಚು ಆದರೆ ಈತ ಹಠ ಬಿಡದ ತ್ರಿವಿಕ್ರಮ. ಪೂರ್ಣ ಹೆಸರು ಚೆನ್ನಬಸವ ನಾಯಕ. ಯಾವಾಗ ಗಾಂಧಿನಗರಕ್ಕೆ ಕಾಲಿಟ್ಟನೋ ಆಗಿನಿಂದ ಸಿ.ಎಚ್. ನಾಯಕ ಆದ. ಹಿರೋ ಆಗಬೇಕೆಂಬ ಹಂಬಲವೂ ಇವನಿಗಿರಲಿಲ್ಲ. ಈತ ನಿರ್ದೇಶಕನಾಗಬೇಕು ಡಂದು ಹೊರಟವನು. ಮುಂದಿನ ದಾರಿ ಕಲ್ಲುಮುಳ್ಳುಗಳ ಹಾದಿ ಎಂದು ಅರಿವಿದ್ದೂ ಬೆವರು ಸುರಿಸುತ್ತಲೇ ಹೊರಟ, ಅನುಭವ ಗಳಿಸಿದ, ಸಿನಿಮಾ ಹೇಗೆ ಮಾಡೋದು ಅನ್ನೋದನ್ನ ಕಲಿತ. ಈತ ಒಬ್ಬ ಪ್ರತಿಭಾವಂತ ಎಂಬದನ್ನ ಗಾಂಧಿನಗರಕ್ಕೆ ಸಹ ನಿರ್ದೇಶಕನಾಗಿಯೇ ಪರಿಚಯಿಸಿಕೊಂಡ. ಸಾಕಷ್ಟು ಹಿರಿಯ ನಿರ್ದೇಶಕರು, ನಿರ್ಮಾಪಕರು, ನಟರ ಜೊತೆಗೆ ಕೆಲಸ ಮಾಡಿ ಕುಲುಮೆಯಲ್ಲಿ ಬೆಂದ! ಈಗ ಸಹನಿರ್ದೇಶಕನಾಗಿಯೇ ಕೆಲಸ ಮಾಡಲು ಸಾಕಷ್ಟು ಆಫರ್ ಗಳು ಬಂದವು. ದೊಡ್ಡ ದೊಡ್ಡ ಬ್ಯಾನರ್ ಗಳು ಅವಕಾಶ ಕೊಡ್ತೀವಿ ಎಂದವು! ಆದರೆ ಈ ನಾಯಕ ಅವೆಲ್ಲವನ್ನು ಮೆಲುವಾಗಿಯೇ ತಿರಸ್ಮರಿಸಿ ಸ್ವತಂತ್ರ ನಿರ್ದೇಶಕನಾಗಬೇಕು; ಏನನ್ನಾದರೂ ಸಾಧಿಸಬೇಕು ಎಂದು ಹೊರಟ. ಮೊದಲ ಪ್ರಯತ್ನದಲ್ಲೇ ಅದನ್ನ ಸಾಧಿಸಿಯೂ ತೋರಿಸಿಬಿಟ್ಟ.
ನಿಜ, ನಾಯಕ ಹೆಸರಿಗೆ ಮಾತ್ರ ನಾಯಕನಾಗಲಿಲ್ಲ. ನಿಜವಾದ ನಾಯಕ ಎಂಬುದನ್ನು ತೋರಿಸಿದ್ದಾನೆ. “ಹರೇ ರಾಮ ಹರೇ ಕೃಷ್ಣ”, “ಅಂಬಾಸಿಡರ್” ಸಿನಿಮಾದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮುಗಿಸಿದ ಬಳಿಕ ಸ್ವತಂತ್ರವಾಗಿ “ಗುರುತಿಸದ ಶಾಹಿ” ಎಂಬ ಕಿರುಚಿತ್ರ ನಿರ್ದೇಶಿಸಿ, ತಾನೇ ನಾಯಕನಾಗಿ ನಟಿಸಿದ! ಈ ಕಿರು ಚಿತ್ರ ಈಗ ಯೂಟ್ಯೂಬ ನಲ್ಲಿ ಬಾರೀ ಸದ್ಧು ಮಾಡಿತು. ಜನರಿಗೆ ಅರ್ಥವೇ ಆಗದ ರೆವಿನ್ಯೂ ಆಕ್ಟ್ 94CC” ಯನ್ನ ಈ “ಗುರುತಿಸದ ಶಾಹಿ” ಮೂಲಕ ಸಾಮಾನ್ಯ ಜನರಿಗೆ ಅರ್ಥ ಮಾಡಿಸಿದ; ಅದ್ಭುತ ನಟನೆಯನ್ನೂ ಮಾಡಿದ. ಆದರ ಬೆನ್ನಲ್ಲೇ ಈಗ ಒಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಎಂಬ ಹಂಬಲದಿಂದ “XXXL” ಚಿತ್ರವನ್ನ ಕೈಗೆತ್ತಿಕೊಂಡು ನಿರ್ದೇಶನಕ್ಕೆ ಇಳಿದಿದ್ದಾರೆ.

ಈಗ ನಿರ್ದೇಶಕರಾಗಿರುವ ನಾಯಕ, ಒಂದು ವಿಭಿನ್ನ ಕಥಾ ಹಂದರವನ್ನು ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದು, ಪಾತ್ರಗಳಿಗೆ ಸೂಕ್ತ ಅಭ್ಯರ್ಥಿಗಳ ತಲಾಷ್ ನಡೆಸಿದ್ದಾರೆ. ಈ ಕುರಿತು ಈಗಾಗಲೇ ಸ್ಟಾರ್ ನಟರ ಜೊತೆಗೆ ಕೂಡ ಮಾತುಕತೆ ನಡೆಸಿರುವ ನಾಯಕ ಸಿನಿಮಾ ತಯಾರಿಯಲ್ಲಿರುವಾಗಲೇ Best Director award ಬಂದಿದೆ. ನಿಜ ಇದು ಈ ಮುಗ್ದ ಹಳ್ಳಿ ಹುಡುಗನ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದರೂ ತಪ್ಪಾಗಲಾರದು. “ರೆವಿನ್ಯೂ ಆಕ್ಟ್ 94CC” ಯನ್ನು ಜನ ಸಾಮಾನ್ಯರಿಗೆ ಅರ್ಥ ಮಾಡಿಸಲು ಮಾಡಿದ ಕಿರುಚಿತ್ರವೇ ಇವನಿಗೆ Best Director ಹಾಗೂ Best Making of short move ಪ್ರಶಸ್ತಿಗಳು ಆತನ ಮುಡಿಗೇರಿವೆ. 8 ವರ್ಷಗಳ ಕಾಲ ಪಟ್ಟ ಪರಿಶ್ರಮ ಈಗ ಖುಷಿ ತಂದಿದೆ ಎನ್ನುವ ಸಿ.ಎಚ್. ನಾಯಕ್, ಅದೇ ಗುಂಗಿನಲ್ಲಿ ಯಶಸ್ಸನ್ನು ತಲೆ ಹಚ್ಚಿಕೊಳ್ಳದೆ ಒಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಎಂಬ ಹಠ ಹಿಡಿದು ಕುಳಿತಿದ್ದಾನೆ. ಅದಕ್ಕಾಗಿ ವರ್ಕ್ ಕೂಡ ಶುರು ಮಾಡಿದ್ದಾನೆ. ಬೆಳಗಾವಿಯ ಮತ್ತೊಬ್ಬ ಪ್ರತಿಭಾವಂತ ಯುವಕ ರಾಜಶೇಖರ್ ಈತನಿಗೆ ಸಹ ನಿರ್ದೇಶಕನಾಗಿ ಸಾಥ್ ನೀಡುತ್ತಿದ್ದು, ಇಬ್ಬರೂ ಕೂಡ XXXL ಸಿನಿಮಾದ ಫ್ರೇಮ್ ಟು ಫ್ರೇಮ್ ಕಥೆ, ಚಿತ್ರಕಥೆ ಹೆಣೆಯುತ್ತಿದ್ದಾರೆ. ಹಳ್ಳಿಯಿಂದ ಬಂದ ಹುಡುಗ ಯಾರ ಹಂಗೂ ಇಲ್ಲದೇ, ಯಾರ ಬೆಂಬಲದ ನೆರಳೂ ಇಲ್ಲದೆ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವುದು ನಿಜಕ್ಕೂ ಮೆಚ್ಚುವಂಥದ್ದೆ.
ಏನೇ ಆಗಲಿ ಅನೇಕ ಯುವ ಪ್ರತಿಭೆಗಳಿಗೆ ಗಾಂಧಿ ನಗರ ಅವಕಾಶ ನೀಡಿದ್ದು,ಈ ಹುಡುಗನ್ನೂ ತನ್ನ ತೆಕ್ಕೆಯಲ್ಲಿರಿಸಿಕೊಂಡ ಗಾಂಧಿನಗರದಿಂದ ಈತನ ಪ್ರತಿಭೆ ಜಗತ್ತಿಗೆ ಪರಿಚಯವಾಗಲೆಂದು ಆಶಿಸೋಣ…
All the Best Mr Director….