ಮೈಸೂರು, ಜನವರಿ. ವಿದ್ಯಾರ್ಥಿಗಳಾಗಿ ಓದುತ್ತಿರುವಾಗಲೇ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಯೋಚಿಸಬೇಕು ಎಂದು ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಟಿ.ಆರ್.ಸಿದ್ದರಾಜು ಅವರು ತಿಳಿಸಿದರು.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಕೇಂದ್ರ ಸರ್ಕಾರದ “ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ”ಯಡಿಯಲ್ಲಿ ಎನ್.ಆರ್.ಮೊಹಲ್ಲಾದ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಡಿದ ಅವರು, ಯಾವ ವಿದ್ಯಾರ್ಥಿಗಳು ಓದುತ್ತಿರುವಾಗಲೇ ಮುಂದಿನ ಭವಿಷ್ಯದ ಬಗ್ಗೆ ಯೋಚಿಸುವರೋ ಅಂತಹ ವಿದ್ಯಾರ್ಥಿಗಳಿಗೆ ಪೆÇೀಷಕರು ಬೆಂಬಲಿಸಬೇಕು ಹಾಗೂ ಓದುತ್ತಿರುವ ಸಂದರ್ಭದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಗಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಬೆರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳಬಾರದು ಹಾಗೂ ಪೆÇೀಷಕರು ಸಹ ತಮ್ಮ ಮಕ್ಕಳ ಕೆಲಸದ ಬಗ್ಗೆ ಹಾಗೂ ಓದಿನ ಬಗ್ಗೆ ಬೆರೆಯವರೊಂದಿಗೆ ಹೋಲಿಕೆ ಮಾಡಬಾರದು. ಪರೀಕ್ಷೆಗಳಲ್ಲಿ ಎಷ್ಟು ಅಂಕಗಳನ್ನು ಪಡೆದಿರುತ್ತೆವೆಯೋ ಅದು ಮುಖ್ಯವಲ್ಲ. ಓದಿನ ನಂತರ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಗುವುದರಿಂದ ಮುಖ್ಯವಾಗುತ್ತದೆ. ಓದಲು ಬಡತನ ಮುಖ್ಯವಲ್ಲ ಓದಲು ಯಾವುದು ಅಡ್ಡಿ ಬರಲ್ಲ. ಬಡ ಮಕ್ಕಳಲ್ಲೆ ಓದುವ ಆಸಕ್ತಿ ಹೆಚ್ಚಾಗಿರುತ್ತದೆ ಎಂದು ಕಿವಿಮಾತು ಹೇಳಿದರು.
ಯಾವುದೇ ಕೆಲಸಗಳು ನಮ್ಮ ಹಿಂದೆ ಬರಲ್ಲ, ನಾವು ಕೆಲಸಗಳನ್ನ ಬೆನ್ನಟ್ಟಿ ಹೋಗಬೇಕು ಹಾಗೂ ಯಾವುದೇ ಕೆಲಸ ಸಿಕ್ಕದರೂ ಮಾಡಬೇಕು. ಇಂದು ಈ ಉದ್ಯೋಗ ಮೇಳಕ್ಕೆ ಸುಮಾರು 40-45 ಕಂಪನಿಗಳು ಬಂದಿದ್ದು, ಸುಮಾರು 4 ಸಾವಿರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಿದ್ದಾರೆ ಎಂದರು.
ಓದಿನ ನಂತರ ಅಭ್ಯರ್ಥಿಗಳು ಮನೆಯಲ್ಲಿ ಇದ್ದು ಹೊರೆಯಾಗುವುದು ಬೇಡ. ಯಾವ ಕೆಲಸ ಸಿಕ್ಕಿದರೂ ಮಾಡಬೇಕು. ಕಳ್ಳತನ ಕೆಲಸ ಮಾಡಲು ಯೋಚಿಸಬೇಕು. ಆದರೆ ಸಿಕ್ಕ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ಕೆಲಸದಲ್ಲಿ ಸಂಬಳದ ಬಗ್ಗೆ ಯೋಚಿಸಬಾರದು. ಶ್ರದ್ಧೆಯಿಂದ ಸಿಕ್ಕ ಕೆಲಸವನ್ನು ಮಾಡುವುದರಿಂದ ತಾನಾಗೇ ಎಲ್ಲ ಸಿಗುತ್ತದೆ ಎಂದು ಹೇಳಿದರು.
ಈ ಉದ್ಯೋಗ ಮೇಳದಿಂದ ನಿರುದ್ಯೋಗದ ಸಂಖ್ಯೆ ಕಡಿಮೆಯಾಗಲಿ. ನಿರುದ್ಯೋಗದಿಂದ ಮಕ್ಕಳು ಅಡ್ಡ ದಾರಿಗಳನ್ನು ಹಿಡಿಯುವುದು ಬೇಡ, ಅಂತಹವರನ್ನು ಗರುತಿಸುವಲ್ಲಿ ನಾವು ವಿಫಲವಾಗುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕಿ ಡಿ.ಎಮ್.ರಾಣಿ, ಟಿ.ನರಸೀಪುರದ ಕೈಗಾರಿಕಾ ಸಂಸ್ಥೆಯ ಚಂದ್ರಿಕಾ, ಉದ್ಯೋಗಪತಿ ಸಂದೀಪ್ ಪಾಂಡೆ, ಇಲಿಯಾಸ್ ಬೇಗ್, ಜುಲ್ಫೀಕರ್ ಕಳ್ಳಿಗುಡಿ ಸೇರಿದಂತೆ ಇತರರು ಹಾಜರಿದ್ದರು.

By admin