ಇಂದಿನಿಂದ 10 ನೇ ತರಗತಿಯ ಪರೀಕ್ಷೆಗಳು ಆರಂಭವಾಗಲಿದ್ದು ನಗರದ ಸೇಂಟ್ ಮೆರೀಸ್ ಶಾಲೆಯಲ್ಲಿ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು SSLC ವಿದ್ಯಾರ್ಥಿಗಳಿಗೆ ಸಿಹಿ ಹಾಗೂ ಪೆನ್ನನ್ನು ನೀಡಿ ಧೈರ್ಯ ತುಂಬುವ ಕಾರ್ಯಕ್ರಮ ಹಾಗೂ ವ್ಯವಸ್ಥೆ ಪರಿಶೀಲನೆ ದೃಷ್ಟಿಯಿಂದ ಭೇಟಿ ನೀಡಿದರು.
ಪರೀಕ್ಷೆ ಬರೆಯಲು ಬಂದಿದ್ದ 10 ನೆ ತರಗತಿ ವಿದ್ಯಾರ್ಥಿಗಳಿಗೆ ಸಿಹಿ ಹಾಗೂ ಪೆನ್ನನ್ನು ನೀಡಿ ಧೈರ್ಯದ ಮಾತನ್ನು ಮಾನ್ಯ ಶಾಸಕರು ಹೇಳಿದರು
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ರಾಜ್ಯಾದ್ಯಂತ ಪಬ್ಲಿಕ್ ಪರೀಕ್ಷೆಗೆ ಮಕ್ಕಳು ತೆರಳುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕ್ಷೇತ್ರದಲ್ಲಿ ಬರುವ 12 ಕೇಂದ್ರದಲ್ಲೂ ಕೂಡಾ ಅಲ್ಲಿರುವ 4 ಸಾವಿರಕ್ಕೂ ಅಧಿಕ ಮಕ್ಕಳಿಗೆ ಧೈರ್ಯ ಹಾಗೂ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಮಕ್ಕಳಿಗೆ ಶುಭ ಹಾರೈಸಿ ಪೆನ್ ಹಾಗೂ ಹೂವನ್ನು ನೀಡಿದ್ದೇವೆ, ಕೋವಿಡ್ ನ ನಂತರದಲ್ಲಿ ಮಕ್ಕಳಿಗೆ ಭಯವಿತ್ತು ಆದರೆ ಅವರಿಗೆ ಧೈರ್ಯವನ್ನು ನೀಡುವ ಕೆಲಸ ಸರ್ಕಾರ ಮಾಡಿದೆ. ನಾವೂ ಕೂಡಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹಾಗೂ ಮಕ್ಕಳ ಜೊತೆಗೆ ಸಂವಾದ ಕಾರ್ಯಕ್ರಮವನ್ನು ಮಾಡಿದ್ದೆವು, ನಮ್ಮ ಕಚೇರಿಯಿಂದ ದಿನಂಪ್ರತಿ 10 ನೆ ತರಗತಿ ವಿದ್ಯಾರ್ಥಿಗಳಿಗೆ ಫೋನ್ ಕರೆಯನ್ನು ಮಾಡಿ ಧೈರ್ಯ ತುಂಬುವ ಕೆಲಸವನ್ನೂ ಮಾಡಿದ್ದೇವೆ.

ಮುಖ್ಯವಾಗಿ ಜೀವನದ ಮೊದಲ ಪಬ್ಲಿಕ್ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆಯುತ್ತಿದ್ದಾರೆ, ಕಳೆದ ವರ್ಷ ಮೈಸೂರಿನಲ್ಲಿ ಉತ್ತಮ ಪ್ರಗತಿಯಾಗಿದೆ ಸುಮಾರು 6 ಜನ ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದಿದ್ದರು, ಅದರಲ್ಲಿ 5 ಜನ ನಮ್ಮ ಕ್ಷೇತ್ರದವರೇ ಆಗಿದ್ದಾರೆ ಎಂಬುದು ಸಂತಸದ ಸಂಗತಿ. ಈ ಬಾರಿ ನಮ್ಮ ಶಿಕ್ಷಣ ಅಧಿಕಾರಿಗಳು ಸಾಕಷ್ಟು ಶ್ರಮವನ್ನು ವಹಿಸಿ ಮಕ್ಕಳಿಗೆ ಉತ್ತಮವಾಗಿ ಪರೀಕ್ಷೆ ಎದುರಿಸುವಂತೆ ಸಜ್ಜು ಮಾಡಿದ್ದಾರೆ. ಯಾರು ಕೂಡಾ ಅನ್ನುತ್ತೀರ್ಣರಾಗದ ರೀತಿಯಲ್ಲಿ ತಯಾರು ಮಾಡಿದ್ದೇವೆ ಆದರೂ ಕೂಡಾ ಫೇಲ್ ಆದರೆ ಜೂನ್ ಪರೀಕ್ಷೆಗೆ ಬೇಕಾದಂತಹ ತರಬೇತಿ ನೀಡುತ್ತೇವೆ , ಅದರಲ್ಲೂ ಕೂಡಾ ಅನ್ನುತ್ತೀರ್ಣರಾದರೆ ಸ್ಕಿಲ್ ಅನ್ನು ನೀಡಿ ಜೀವನಕ್ಕೆ ಬೇಕಾದ ದಾರಿ ಮಾಡುವವರಿದ್ದೇವೆ .ಈ ಬಾರಿ ಮೈಸೂರಿಗೆ ಒಳ್ಳೆಯ ಫಲಿತಾಂಶ ಬರುತ್ತದೆ ಎಂಬ ಭರವಸೆ ಇದೆ ಎಂದರು.

ಸದರಿ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ರಾಮಚಂದ್ರ ರಾಜೇ ಅರಸ್, ಮೈಸೂರು ದಕ್ಷಿಣ ವಲಯದ ಬಿ.ಇ. ಓ ಆರ್ ರಾಮಾರಾಧ್ಯ, ನಗರಪಾಲಿಕಾ ಸದಸ್ಯರಾದ ಬಿ.ವಿ. ಮಂಜುನಾಥ್, ಭಾಜಪಾ ಕೆ.ಆರ್.ಕ್ಷೇತ್ರ ಪ್ರಧಾನಕಾರ್ಯದರ್ಶಿಗಳಾದ ಓಂ ಶ್ರೀನಿವಾಸ್, ಉಪಾಧ್ಯಕ್ಷರಾದ ಬಾಲಕೃಷ್ಣ ಎಂ.ಆರ್, ಸಂತೋಷ್ ಶಂಭು, ಆಶ್ರಯ ಸಮಿತಿಯ ಹೇಮಂತ್ ಕುಮಾರ್, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸೇಂಟ್ ಮೇರೀಸ್ ಶಾಲೆಯ ಶಿಕ್ಷಕ ಹಾಗೂ ಆಡಳಿತ ವೃಂದದವರು ಹಾಜರಿದ್ದರು.