ಗವಿಸಿದ್ದೇಶ್ವರ ಬೆಟ್ಟವನ್ನುಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸರ್ಕಾರದ ಅನುದಾನ ಪಡೆಯದೆ ವಂತಿಕೆ ಹಾಕಿಕೊಂಡು ರಸ್ತೆ ನಿರ್ಮಿಸಲು ಮುಂದಾದ ಬೆಟ್ಟದ ತಪ್ಪಲಿನ ಸುತ್ತಮುತ್ತಲಿನ ಗ್ರಾಮಸ್ಥರು
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಮೇಗಳಕೊಪ್ಪಲು ಗ್ರಾಮದ ಶ್ರೀ ಸಿಡಿಲು ಮಲ್ಲಿಕಾರ್ಜುನ ಬೆಟ್ಟದ ತಪ್ಪಲಿನಲ್ಲಿ ಗವಿ ಸಿದ್ದೇಶ್ವರ ಬೆಟ್ಟಕ್ಕೆ ರಸ್ತೆ ನಿರ್ಮಿಸಲು ಬೆಟ್ಟದತುಂಗ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗನಹಳ್ಳಿ ದೇವರಾಜ್ ಗುದ್ದಲಿ ಪೂಜೆ ನೆರವೇರಿಸಿದರು ಮಾಧ್ಯಮದೊಂದಿಗೆ ಮಾತನಾಡಿ ಗವಿಸಿದ್ಧೇಶ್ವರ ಬೆಟ್ಟದ ರಸ್ತೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ಮಾಡಲು ಗ್ರಾಮ ಪಂಚಾಯಿತಿ ಸಭೆಯಲ್ಲಿ ಚರ್ಚಿಸಿ ಅನುದಾನ ನೀಡಲಾಗುವುದು ಎಂದರು.
ಗವಿಸಿದ್ದೇಶ್ವರ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಮುಖಂಡ ಟಿ. ಎಸ್. ಯಶೋಧರ ಮಾತನಾಡಿ ಶ್ರೀ ಸಿಡಿಲು ಮಲ್ಲಿಕಾರ್ಜುನ ಬೆಟ್ಟದ ಹೃದಯಭಾಗದಲ್ಲಿರುವ 12 ನೇ ಶತಮಾನದ ಪ್ರಾಕೃತಿಕ ಬಂಡೆಯ ಒಳಗಡೆ ನಿರ್ಮಿಸಿರುವ ಶ್ರೀ ಗವಿಸಿದ್ಧೇಶ್ವರ ಬೆಟ್ಟದ ದೇವಾಲಯದಲ್ಲಿ 6 ಅಡಿ ಉದ್ದದ ಸುಂದರವಾದ ವೀರಭದ್ರನ ವಿಗ್ರಹ ಇದೆ. ಇದ್ದು ಹಿಂಭಾಗದಲ್ಲಿ ನೂರೊಂದು ಜಡೆಯ ಕೆತ್ತನೆಯು ಇದೆ .ದೇವಾಲಯದಲ್ಲಿ ಬೆಳ್ಳಿ ಬಸಪ್ಪನ ಪ್ರತಿಮೆ ಶಿವನ ಪ್ರತಿಮೆಯು ಇದೆ ಪುರಾತನ ಶಿವನ ವಿಗ್ರಹವೂ ಇದೆ. ಈ ದೇವಾಲಯವನ್ನು ಅಭಿವೃದ್ಧಿ ಪಡಿಸಲು ಕಬ್ಬಿಣ ಸಿಮೆಂಟು ಸಲಕರಣಿಗಳನ್ನು ಸಾಗಿಸಲು ಬೆಟ್ಟದ ತಪ್ಪಲಿನಲ್ಲಿರುವ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಸಮಾನವಾಗಿ ವಂತಿಕೆ ಹಾಕಿಕೊಂಡು ರಸ್ತೆ ನಿರ್ಮಿಸುತ್ತಿದ್ದೇವೆ. 1ಕೋಟಿ ರೂಪಾಯಿ ಬೇಕಾಗಿರುವುದರಿಂದ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಶಾಸಕರು, ಸಂಸದರು ,ದಾನಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು .

ಈ ಸಂದರ್ಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಟಿ ಸಿ ವಸಂತ್ ರಾಜ್ ರವರ ಪುತ್ರ ಅರುಣ್ ರಾಜ್ ಅರಸ್ ,ಕೈಗಾರಿಕಾ ಉಗ್ರಾಣ ನಿಗಮದ ನಿವೃತ್ತ ಅಧಿಕಾರಿ ತಿಪ್ಪೇಗೌಡ ,ಗ್ರಾಮ ಪಂಚಾಯಿತಿ ಸದಸ್ಯ ಸಣ್ಣಪ್ಪ ಜಿ ಗೌಡ ,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹದೇವ್ ದೇವಾಲಯ ಸಮಿತಿ ಮುಖಂಡರಾದ ಕೆಳಗಿನ ಕೊಪ್ಪಲು ಕೃಷ್ಣೇಗೌಡ , ಅಪ್ಪಾಜಿಗೌಡ ,ಮಹದೇವ್,ಅರ್ಚಕರಾದ ಕಾರ್ತಿಕ್, ಚಿಕ್ಕಣ್ಣ ಯ್ಯ, ಸಣ್ಣಸ್ವಾಮಿಗೌಡ , ದೊಡ್ಡೆಕೊಪ್ಪಲು ಜವರೇಗೌಡ , ಯಜಮಾನ್ ಸಿದ್ದರಾಮೇಗೌಡ,ತಮ್ಮೇಗೌಡ, ಲಿಂಗರಾಜ್ , ಅಪ್ಪಾಜಿಗೌಡ,ಕೆರೆಗೆ ಶಾರದಮ್ಮ ಗೌರಮ್ಮ ‘ಸುಮ, ಗ್ರಾಮಸ್ಥರು ಹಾಜರಿದ್ದರು .