ಬದುಕು, ಬರಹ ನಡೆ ನುಡಿ ಎಲ್ಲವನ್ನೂ ಒಟ್ಟಿಗೇ ಮೇಳೈಸಿ ಬದುಕಿದ ಹಿರಿಯ ಸಾಹಿತಿಗಳಲ್ಲಿ ಚಂಪಾ ಕೂಡ ಒಬ್ಬರು. ಸಾಹಿತ್ಯ ಲೋಕಕ್ಕೆ ಸಂಕ್ರಮಣ ಎಂಬ ಹೊಸ ಆಯಾಮವನ್ನೇ ಸೃಷ್ಟಿ ಮಾಡಿ ನಾಡಿನ ಅನೇಕ ಯುವ ಬರಹಗಾರರನ್ನು ಬರವಣಿಗೆಯ ಚಾಳಿ ಕಲಿಸಿದವರು. ಆ ಮೂಲಕ ಸಂಕ್ರಮಣ ಪತ್ರಿಕೆ ಸಂಪಾದಕರಾಗಿ ಇಡೀ ನಾಡಿನಲ್ಲಿ ಹೊಸ ಹೊಸ ಬಗೆಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟವರು ಚಂಪಾ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಚಂದ್ರಶೇಖರ್ ಪಾಟೀಲ್ ಅವರು ಕನ್ನಡ ಭಾಷಾ ಮಾಧ್ಯಮ ಕಲಿಕೆಗೂ ಒತ್ತು ನೀಡಿದವರು.

Champa – EESANJE / ಈ ಸಂಜೆ

ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಅವರ ಪಾರ್ಥಿವ ಶರೀರವನ್ನು ಕನಕಪುರ ಮುಖ್ಯರಸ್ತೆಯ ಯಲಚೇನಹಳ್ಳಿಯ ಮೆಟ್ರೋಸ್ಟೇಷನ್ ಬಳಿ ಇರುವ ಜ್ಯೋತಿ ಶಾಲೆಯ ಹಿಂಬದಿಯಲ್ಲಿ ಅವರ ನಿವಾಸಕ್ಕೆ ತರಲಾಗುತ್ತಿದೆ. ಇಂದು ಸಂಜೆ ವರೆಗೆ ಸಾರ್ವಜನಿಕರ ದರ್ಶನಕ್ಕೆ ಮನೆ ಮುಂದೆಯೇ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಸಂಜೆ ಅಂತ್ಯಸಂಸ್ಕಾರ ಮಾಡುವ ಸಾಧ್ಯತೆಯಿದ್ದು, ಇನ್ನೂ ಇದರ ಬಗ್ಗೆ ಕುಟುಂಬ ವಲಯ ನಿರ್ಧಾರ ಮಾಡಿಲ್ಲ ಎಂದು ತಿಳಿದು ಬಂದಿದೆ.ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಚಂದ್ರಶೇಖರ್ ಪಾಟೀಲ್ ಅವರು ಕನ್ನಡ ಭಾಷಾ ಮಾಧ್ಯಮ ಕಲಿಕೆಗೂ ಒತ್ತು ನೀಡಿದವರು.

ಹಾಸ್ಯದ ವಿಚಾರಕ್ಕೇ ಹೆಚ್ಚು ಪ್ರಚಲಿತವಾಗಿದ್ದ ಚಂಪಾ ತಮ್ಮ ಮೂಲ ಉತ್ತರ ಕರ್ನಾಟಕ ಭಾಷೆಯಲ್ಲಿಯೇ ಎಲ್ಲರನ್ನೂ ವಿಡಂಭನೆ ಮಾಡುತ್ತಲೇ ತಿದ್ದಿ ತೀಡಿದವರು. ಸರ್ಕಾರಗಳು ತಪ್ಪು ಮಾಡಿದಾಗಲೂ ಅದನ್ನೇ ನೇರಾನೇರವಾಗಿ ಹೇಳಿ ಏಟು ಕೊಟ್ಟು ನಿಷ್ಠೂರತೆ ಕಟ್ಟಿಕೊಂಡವರು. ತಮ್ಮ ಬರಹ ಗ ಳ ಮೂಲಕವೇ ಆಡಳಿತ ವರ್ಗವನ್ನು ತಿವಿದು ಬುದ್ದಿ ಹೇಳುತ್ತಿದ್ದ ಚಂಪಾ ಇನ್ನು ನೆನಪು ಮಾತ್ರ? ಅವರಿಗೆ ಕನ್ನಡಿಗರ ಋಣಿ ನಮನ