ಚಾಮರಾಜನಗರ: ನಗರಸಭೆ ವ್ಯಾಪ್ತಿಯ ೨೪ ನೇ ವಾರ್ಡಿನ ಜಾಲಹಳ್ಳಿಹುಂಡಿ, ಕುಲುಮೆರಸ್ತೆಯಲ್ಲಿ ಭಗೀರಥಮಹರ್ಷಿ ಜಯಂತಿ ಅಂಗವಾಗಿ ಭಗೀರಥಮಹರ್ಷಿ ರಾಜಬೀದಿ ನಾಮಫಲಕ ಅನಾವರಣ ಮಾಡಲಾಯಿತು.
ನಾಮಫಲಕ ಅನಾವರಣ ಮಾಡಿದ ಈಶ್ವರಿಸಂಗೀತಸಂಸ್ಥೆಯ ಅಧ್ಯಕ್ಷ ಸಿ.ಎಂ.ವೆಂಕಟೇಶ್ ಮಾತನಾಡಿ, ಸಾಧನೆಯ ಹಾದಿಯಲ್ಲಿ ಪ್ರಯತ್ನ ಇದ್ದರೆ ಮಾತ್ರ ಯಶಸ್ಸು, ಇದಕ್ಕೆ ಭಗೀರಥಮಹರ್ಷಿಗಳೇ ಪ್ರೇರಣೆಯಾಗಿದ್ದಾರೆ . ಎನ್ನಬಹುದು, ಸಮುದಾಯದವರು ತಮ್ಮ ಮಕ್ಕಳಿಗೆ ಉನ್ನತಶಿಕ್ಷಣ ಕೊಡಿಸುವ ಮೂಲಕ ಉನ್ನತಹುದ್ದೆಗೇರುವ ಮೂಲಕ ಸಮಾಜಮುಖಿ ಕಾರ್ಯಗಳ ಬಗ್ಗೆ ಗಮನ ನೀಡುವಂತೆ ಜಾಗೃತಿ ಮೂಡಿಸಬೇಕು, ಪ್ರತಿಯೊಬ್ಬರು ತಮ್ಮ ಮನೆಗಳ ಆವರಣದಲ್ಲಿ ಗಿಡಮರ ನೆಟ್ಟು ಪೋಷಣೆ ಮಾಡಬೇಕು, ಇದರಿಂದ ಆಮ್ಲಜನಕದ ಕೊರತೆ ನಿವಾರಣೆಯಾಗುತ್ತದೆ ಎಂದರು. ಇದೇವೇಳೆ ಗಿಡನೆಟ್ಟು ನೀರೆರೆಯಲಾಯಿತು. ಬಡಾವಣೆ ನಿವಾಸಿಗಳು, ಮುಖಂಡರು, ಯುವಕರು ಹಾಜರಿದ್ದರು.
