ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಬ್ರಾಹ್ಮಣ ಯುವ ವೇದಿಕೆ ವತಿಯಿಂದ
ಚಾಮುಂಡಿಪುರಂನಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರರು ಜಮ್ನಾಲಾಲ್ ಪ್ರಶಸ್ತಿ ಪುರಸ್ಕೃತರಾದ ಮತ್ತು ತಗಡೂರು ಗಾಂಧಿ ಎಂದು ಪ್ರಖ್ಯಾತರಾದ ದಿವಂಗತ ತಗಡೂರು ರಾಮಚಂದ್ರ ರಾವ್ 31ನೇ ಪುಣ್ಯಸ್ಮರಣೆಯ ಅಂಗವಾಗಿ ಅವರ ಪ್ರತಿಮೆಗೆ ಮೈಸೂರು ನಗರಾಭಿವೃದ್ಧಿ ಪಗರಾಧಿಕಾರದ ಅಧ್ಯಕ್ಷರಾದ ಹೆಚ್.ವಿ ರಾಜೀವ್ ರವರು ಮಾಲಾರ್ಪಣೆ ಮಾಡುವ ಮೂಲಕ ” ಸ್ವಾತಂತ್ರ ಹೋರಾಟದಲ್ಲಿ ಮೈಸೂರು” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,

ನಂತರ ಮಾತನಾಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ ರಾಜೀವ್ ರವರು ಮಾತನಾಡಿ ರಾಷ್ಟ್ರಪಿತ
ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ಚಳವಳಿಯನ್ನು ದೇಶಾದ್ಯಂತ ತೀವ್ರಗೊಳಿಸಿದ್ದ ಸಂದರ್ಭದಲ್ಲಿ ಕರ್ನಾಟಕದ ಗಾಂಧಿ ಎಂದೇ ಪ್ರಖ್ಯಾತರಾಗಿದ್ದ ಶ್ರೀ ತಗಡೂರು ರಾಮಚಂದ್ರರಾವ್ ಅವರು ಪ್ರಮುಖರು. ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ತಗಡೂರನ್ನು ತಮ್ಮ ಕಾರ್ಯ ಕ್ಷೇತ್ರವನ್ನಾಗಿ ಮಾಡಿಕೊಂಡಿದ್ದ ಅವರು ಅಲ್ಲಿಯೇ ಖಾದಿ ಗ್ರಾಮೋದ್ಯೋಗ ಮಂಡಳಿಯನ್ನು ಸ್ಥಾಪಿಸಿ ಚರಕಗಳ ಮೂಲಕ ಖಾದಿ ಬಟ್ಟೆಗಳನ್ನು ತಯಾರಿಸಲು ಆರಂಭಿಸಿದ್ದರು, ಇಂದು ಖಾದಿ ಬಟ್ಟೆ ಧರಿಸುವ ಕಡೆ ವಿದೇಶಿಗರೇ ಹೆಚ್ಚು ಆಸಕ್ತಿ ತೋರುತ್ತಿರುವುದು ನಮ್ಮ ಭಾರತೀಯ ಸಂಸ್ಕೃತಿಯನ್ನು ಹೆಚ್ಚಿಸಿದೆ, ರಾಮಚಂದ್ರ ರಾವ್ ರವರು ಸ್ವತಂತ್ರ ಪೂರ್ವದಲ್ಲೇ ಬಡವರು ಹಾಗೂ ದೀನ ದಲಿತರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದರು. 1934 ರಲ್ಲಿ ಗಾಂಧೀಜಿಯವರು ಮೈಸೂರಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಎಲ್ಲ ಅಡೆತಡೆಗಳ ನಡುವೆ ಅವರನ್ನು ತಗಡೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಗಾಂಧೀಜಿಯವರಿಂದ ಭಾಷಣ ಮಾಡಿಸಿ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದರು. ತಾತಯ್ಯನವರ ಸಹಕಾರದಿಂದ ಮೈಸೂರಿನ ಲ್ಯಾನ್ಸ್ ಡೌನ್ ಕಟ್ಟಡದಲ್ಲಿ ಖದ್ದರ್ ಕೋಆಪರೇಟಿವ್ ಸೊಸೈಟಿಯನ್ನು ಆರಂಭಿಸಿ ಖಾದಿ ಬಟ್ಟೆಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದರು. 1917 ಮತ್ತು 1934 ರಲ್ಲಿ ಎರಡು ಬಾರಿ ಭಾರತ ಪ್ರವಾಸ ಕೈಗೊಂಡು ಗಾಂಧೀಜಿ ಅವರ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಆ ಕಾಲಕ್ಕೇ ಸ್ವದೇಶಿ ಆಂದೋಲನವನ್ನು ಆಯೋಜಿಸಿ ಗಾಂಧೀಜಿ ಅವರ ಪ್ರೇರಣೆಯಿಂದ ಪ್ರತಿಯೊಬ್ಬರೂ ಖಾದಿ ಉಡುಗೆ ತೊಟ್ಟು ದೇಶಪ್ರೇಮ ಮೆರೆಯುವಂತೆ ಪ್ರೋತ್ಸಾಹ ನೀಡುತ್ತಿದ್ದರು. ಎಂದರು

ನಂತರ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್ ರವರು ಮಾತನಾಡಿ ತಗಡೂರಿನಲ್ಲಿ ಸ್ವರಾಜ್ಯ ಮಂದಿರ ಸ್ಥಾಪಿಸಿ ಜನರಲ್ಲಿ ಸ್ವಾತಂತ್ರ್ಯ ಚಳವಳಿಯ ಬಗ್ಗೆ ಅರಿವು ಮೂಡಿಸುತ್ತಿದ್ದರು. ತಮ್ಮ ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದಿದ್ದ ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಅನೇಕ ಬಾರಿ ಸೆರೆಮನೆ ವಾಸ ಅನುಭವಿಸಿದ್ದರು. ಮುಂದಿನ ದಿನದಲ್ಲಿ ಸರ್ಕಾರದ ವತಿಯಿಂದ ತಗಡೂರು ರಾಮಚಂದ್ರರಾಯರ ಸ್ವಾತಂತ್ರ್ಯ ಹೋರಾಟಕ್ಕಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಯುವಪೀಳಿಗೆಗೆ ಮಾದರಿಯಾಗುವ ಕಾರ್ಯಕ್ರಮವನ್ನು ಆಯೋಜಿಸಬೇಕು ಮತ್ತು ಮುಖ್ಯವಾಗಿ ಅಂಚೆ ಇಲಾಖೆ ತಗಡೂರು ರಾಮಚಂದ್ರರಾವ್ ಅಂಚೆ ಚೀಟಿ ಬಿಡುಗಡೆ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಬೇಕು ಎಂದು ಕರೆ ನೀಡಿದರು

ನಂತರ ಮೂಗರು ಕರ್ನಾಟಕ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ವಿಶ್ವನಾಥಯ್ಯ ರವರು ಮಾತನಾಡಿ ಸ್ವತಂತ್ರಪೂರ್ವ ರಾಮಚಂದ್ರರಾಯರ ಹೋರಾಟ ಅಪಾರ ಅದನ್ನ ಸ್ಮರಿಸುವ ದಿನವನ್ನಾಗಿ ಸರ್ಕಾರ ಆಚರಿಸಬೇಕಿದೆ ಮೈಸೂರಿನಲ್ಲಿ ಸೈಮನ್ ಕಮಿಷನ್ ಬಹಿಷ್ಕಾರ, ಬೆಂಗಳೂರಿನಲ್ಲಿ ಗಣಪತಿ ವಿಗ್ರಹ ರಕ್ಷಣೆಗೆ ಹೋರಾಟ, ಸ್ವರಾಜ್ಯ ನನ್ನ ಆಜನ್ಮ ಸಿದ್ಧ ಹಕ್ಕು ಹೋರಾಟ, ಬೆಂಗಳೂರಿನ ಸುಲ್ತಾನ್ ಪೇಟೆ ಸ್ವದೇಶಿ ಭಂಡಾರದ ಮುಂಭಾಗದಲ್ಲಿ ಖಾದಿ ಮಾರಾಟಕ್ಕಾಗಿ ಇಪ್ಪತ್ತೊಂದು ದಿನ ಉಪವಾಸ, ಹ್ಯಾಮಿಲ್ಟನ್ ಬಿಲ್ಡಿಂಗ್ ಸತ್ಯಾಗ್ರಹ, ಶಿವಪುರದಲ್ಲಿ ಧ್ವಜ ಸತ್ಯಾಗ್ರಹ ಸೇರಿದಂತೆ ಅನೇಕ ಚಳವಳಿಗಳಲ್ಲಿ ಭಾಗವಹಿಸಿ ಬ್ರಿಟಿಷರ ವಿರುದ್ಧ ಹೋರಾಡಿ ಸೆರೆಮನೆ ವಾಸ ಅನುಭವಿಸಿದ್ದರು ಇಂತಹ ಮಹಾತ್ಮರ ಪುಣ್ಯಸ್ಮರಣೆ ಮುಂದಿನ ವರ್ಷದಲ್ಲಿ ರಾಮಚಂದ್ರ ರಾಯರ ನೆನಪಿನಲ್ಲಿ ಅವರ ಹೋರಾಟಗಳನ್ನು ಮುಂದಿನ ಪೀಳಿಗಗೆ ತಲುಪಿಸಲು ರಾಜ್ಯ ಸರ್ಕಾರ ಕರ್ನಾಟಕ ಗಾಂಧಿ ತಗಡೂರು ರಾಮಚಂದ್ರರಾಯರ ಜೀವನ ಆದರ್ಶಗಳ ಪುಸ್ತಕವನ್ನ ಬಿಡುಗಡೆ ಮಾಡಬೇಕು
ಎಂದು ಸ್ಮರಿಸಿಕೊಂಡರು.

ನಂತರ ಬ್ರಾಹ್ಮಣ ಸಂಘದ ಗ್ರಾಮಾಂತರ ಅಧ್ಯಕ್ಷರಾದ ಗೋಪಾಲ್ ರಾವ್ ರವರು ಮಾತನಾಡಿ ರಾಮಚಂದ್ರ ರಾಯರು ಹಾಸನದ ಸೆರೆಮನೆಯಲ್ಲಿ ಇಪ್ಪತ್ತೊಂದು ದಿನ ಉಪವಾಸ ಸತ್ಯಾಗ್ರಹ ನಡೆಸಿದ್ದರು. ತಗಡೂರಿನಲ್ಲಿ ಖಾದಿ ಗ್ರಾಮೋದ್ಯೋಗ ಮಂಡಳಿ ಸ್ಥಾಪನೆ ಜೊತೆಗೆ ಪ್ರೌಢಶಾಲೆ ಸ್ಥಾಪನೆಯೂ ಸೇರಿದಂತೆ ಮೈಸೂರಿನಲ್ಲಿ ತಾತಯ್ಯನವರ ಶಿಲಾಪ್ರತಿಮೆ ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅನೇಕ ಜನಪರ ಯೋಜನೆಗಳನ್ನು ರೂಪಿಸಿದ ತಗಡೂರು ರಾಮಚಂದ್ರರಾಯರು ಮೈಸೂರು ಭಾಗದ ಪ್ರಮುಖ ಪ್ರಭಾವಿ ಸ್ವಾತಂತ್ರ್ಯ ಹೋರಾಟಗಾರರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಎಂದರು,
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ ರಾಜೀವ್, ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ.ಪ್ರಕಾಶ್, ಗ್ರಾಮಾಂತರ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಗೋಪಾಲ್ ರಾವ್, ಮೂಗುರು ಕರ್ನಾಟಕ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ವಿಶ್ವನಾಥಯ್ಯ, ನಗರಪಾಲಿಕೆ ಸದಸ್ಯ ಮಾವಿ. ರಾಂಪ್ರಸಾದ್, ಪತ್ರಕರ್ತರಾದ ಗೋಪಿನಾಥ್, ಹೊಮ್ಮ ಮಂಜುನಾಥ್, ಎಂ.ಡಿ ಪಾರ್ಥಸಾರಥಿ, ಅಪೂರ್ವ ಸುರೇಶ್, ಬ್ರಾಹ್ಮಣ ಯುವ ವೇದಿಕೆಯ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಹೆಚ್.ವಿ ಭಾಸ್ಕರ್, ವಿನಯ್ ಕಣಗಾಲ್, ಜಯಸಿಂಹ, ಶ್ರೀನಿವಾಸ್ ಪ್ರಸಾದ್, ಚಕ್ರಪಾಣಿ, ನಾಗಶಯನ, ಮುಂತಾದವರು ಇದ್ದರು.

By admin