ನೆಚ್ಚಿನ ನಟನ ಮನೆಯಲ್ಲಿರುವ ವಸ್ತುಗಳ ಬಗ್ಗೆ ಅವರ ಅಭಿಮಾನಿಗಳಿಗೆ ಯಾವತ್ತಿಗೂ ಕುತೂಹಲ. ಇವತ್ತು ಕಿಚ್ಚ ಸುದೀಪ್ ಅವರ ಮನೆಯ ವಿಶೇಷ ಟೇಬಲ್ ವೊಂದು ಫೋಟೋ ರೂಪದಲ್ಲಿ ಆಚೆ ಬಂದಿದೆ. ಸದ್ಯ ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಅಷ್ಟಕ್ಕೂ ಈ ಟೇಬಲ್ ವಿಶೇಷ ಅಂದರೆ, ಸ್ಕೂಟರ್ ಮೇಲೆ ತಯಾರಾದ ಟೇಬಲ್ ಅದಾಗಿದ್ದು, ಸುಸಜ್ಜಿತ ಸ್ಕೂಟರ್ ನಲ್ಲಿ ಸೀಟ್ ಬದಲಾಗಿ ಟೇಬಲ್ ಅಳವಡಿಸಿದ್ದಾರೆ. ಸ್ಕೂಟರಿನ ವ್ಹೀಲ್ ಜತೆಗೆ ಟೇಬಲ್ ಗೂ ನಾಲ್ಕು ಚಕ್ರಗಳನ್ನು ಹಾಕಲಾಗಿದೆ. ಆರಾಮಾಗಿ ಕುಳಿತುಕೊಳ್ಳುವಂತೆ ಹೊಸ ಅವಿಸ್ಕಾರ ಮಾಡಲಾಗಿದೆ.

ಸದ್ಯ ಹರಿದಾಡುತ್ತಿರುವ ಆ ಫೋಟೋದಲ್ಲಿ ಕಿಚ್ಚ ಸುದೀಪ್ ಕಾಫಿ ಕಪ್ ಜತೆ ಟೇಬಲ್ ಮೇಲೆ ಕೂತಿದ್ದಾರೆ. ನಿರ್ದೇಶಕ ಅನೂಪ್ ಭಂಡಾರಿ ಟೇಬಲ್ ಗೆ ಪಕ್ಕದಲ್ಲಿ ನಿಂತುಕೊಂಡು ಎದ್ದು ನಿಂತಿದ್ದಾರೆ. ಈ ಫೋಟೋವನ್ನು ಸುದೀಪ್ ಅವರ ಫೇವರೆಟ್ ಕಿಚನ್ ಮುಂದೆಯೇ ತಗೆಯಲಾಗಿದೆ.