ನಾದಬ್ರಹ್ಮ ಸಂಗೀತಸಂತ ಸದ್ಗುರು ಶ್ರೀತ್ಯಾಗರಾಜರ 175ನೇ ಆರಾಧನಾ ಅಂಗವಾಗಿ ಮೈಸೂರಿನ ರಾಮಕೃಷ್ಣನಗರದ
ಎಚ್ ಬ್ಲಾಕ್ ನಲ್ಲಿರುವ ಶನಿಮಹಾತ್ಮ ದೇವಸ್ಥಾನದ ಆವರಣದಲ್ಲಿ “ಸಾಂಸ್ಕೃತಿಕ ಸಂಗೀತ ಕ್ಷೇತ್ರದಲ್ಲಿ ಶ್ರೀತ್ಯಾಗರಾಜರು” ಆರಾಧನೆ ಕಾರ್ಯಕ್ರಮವನ್ನು ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ ಹಾಗೂ ಮೈಸೂರು ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಆಯೋಜಿಸಲಾಯಿತು.


ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್.ಮಾತನಾಡಿಸಂಗೀತ ಕ್ಷೇತ್ರದಲ್ಲಿ ಧಾರ್ಮಿಕತೆಯ ಭಕ್ತಿ ಬೆಳೆಯಲು ತ್ಯಾಗರಾಜರ ಕೀರ್ತನೆಗಳು ಹೆಚ್ಚು ಪರಿಣಾಮಕಾರಿಯಾಗಿದೆ, ದೇಶವಿದೇಶದಲ್ಲೂ ಸಹ ತ್ಯಾಗರಾಜರ ಆರಾಧನಾ ಪಂಚರತ್ನ ಕೀರ್ತನೆಗಳ ಸಮೂಹ ಗಾಯನಕ್ಕೆ ಸಹಸ್ರಾರು ಮಂದಿ ಸೇರುತ್ತಾರೆ ಎಂದರು ಮುಂದಿನ ದಿನದಲ್ಲಿ ತ್ಯಾಗರಾಜ ಆರಾಧನಾ ಕಾರ್ಯಮವನ್ನು ತ್ಯಾಗರಾಜ ರಸ್ತೆಯಲ್ಲೇ ನೂರಾರು ಕಲಾವಿದರ ಸಮ್ಮುಖದಲ್ಲಿ ಆಯೋಜಿಸಲು ಮುಂದಾಗೋಣ ಎಂದು ಹೇಳಿದರು,ನಂತರ ಮಾತನಾಡಿದ ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್ ಬಿ ವಾಸುದೇವ್ ಮೂರ್ತಿತ್ಯಾಗರಾಜರು ಶ್ರೀರಾಮದೇವರ ಪ್ರೇರಣೆಯಿಂದ ಸಂಗೀತ ಕ್ಷೇತ್ರದಲ್ಲಿ ಸಾಮ್ರಾಟರಾಗಿ ಪಂಚರತ್ನ ಕೀರ್ತನೆ ಸೇರಿದಂತೆ ಸಾವಿರಾರು ಕೀರ್ತನೆ ವಾಗ್ಮೇಯಕಾರಾದರು,

ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಆಧಾರಸ್ಥಂಭವಾಗಿ ಮತ್ತು ಸಂಗೀತ ಕ್ಷೇತ್ರದಲ್ಲಿ ಧಾರ್ಮಿಕತೆಯ ಮನೋಭಾವ ಬೆಳಸುವಲ್ಲಿ ತ್ಯಾಗರಾಜರ ಕೊಡುಗೆ ಬಹಳಷ್ಟಿದೆ, ಬಹುಮುಖ್ಯವಾಗಿ ಕಲಾಪ್ರದರ್ಶನ ಅಂದರೆ ಸಂಭಾವನೆ ಮುಖ್ಯ ಎನ್ನುವ ಇತ್ತಿಚಿನ ದಿನದಲ್ಲಿ ಆರಾಧ್ಯದೈವ ಶ್ರೀರಾಮನ ಪ್ರೇರಣೆಯಿದ್ದರೆ ಮಾತ್ರ ಕೀರ್ತನೆ ಹಾಡುಗರಿಕೆ ಪ್ರದರ್ಶನ ಎನ್ನುತ್ತಿದ್ದರು ತ್ಯಾಗರಾಜರು ಇಂದಿನ ಕಲಾವಿದರಿಗೆ ಆದರ್ಶ, ತಮಿಳುನಾಡಿನ ರಾಜನೊಬ್ಬ ತ್ಯಾಗರಾಜರನ್ನು ಕರೆಸಿ ಆಸ್ಥಾನದಲ್ಲಿ ಹಾಡಬೇಕೆಂದು ಹಣ ಜಮೀನು ಕೊಡುತ್ತೇನೆ ಎಂದು ಪಟ್ಟು ಹಿಡಿದಾಗ ಯಾವುದೇ ಆಮಿಷಕ್ಕೆ ಒಳಗಾಗದೆ ತ್ಯಾಗರಾಜರು ಹೊರಬಂದರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ,ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ ಅಧ್ಯಕ್ಷರಾದ ಎಸ್.ಬಿ. ವಾಸುದೇವ್ ಮೂರ್ತಿ ,ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಅಜಯ್ ಶಾಸ್ತ್ರಿ ,ವಿನಯ್ ಕಣಗಾಲ್ ,ಶ್ರೀನಿವಾಸ್ ಪ್ರಸಾದ್ ,ರಂಗರಾಜು ,ಡಾ ನರಕೇಸರಿ ,ಕಾರ್ಯದರ್ಶಿ ಅಂಬಿಕಾ ,ಟ್ರಸ್ಟಿಗಳಾದ ಶ್ರೀಮತಿ ವಿಜಯಾ ,ವಿವೇಕ್ ಕಶ್ಯಪ್ , ಹಾಗೂ ಇನ್ನಿತರರು ಹಾಜರಿದ್ದರು