ಮೈಸೂರು.೨೦ ನೂತನವಾಗಿ ಪ್ರಾರಂಭಗೊ0ಡಿರುವ ಫಾರ್ಮಾ ಫರ್ಸ್ಟ್ ಔಷಧಾಲಯ ಇಂದು ನಗರ ನ್ಯೂ ಕಾಂತರಾಜ್ ಅರಸ್ ರಸ್ತೆ ಅಪೋಲೊ ಅಸ್ಪತ್ರೆ ಹತ್ತಿರ ಇಂದು ವಿಧಾನ ಸಭಾ ಸದಸ್ಯರು ಕೆ.ಆರ್ ನಗರ. ಕ್ಷೇತ್ರ ಸಾರ ಮಹೇಶ್ ಉದ್ಘಾಟಿಸಿದರು. ನಂತರ ಮಾತಾನಾಡಿದ ಅವರು ನೂತನವಾಗಿ ತೆರೆಯಾಲಾದ. ಫಾರ್ಮಾ ಫರ್ಸ್ಟ್ ಔಷಧಾಲಯ.ಸುಧಾಕರ್ ಶೆಟ್ಟಿಯ ಪುತ್ರ ಶ್ರೀ ಪವನ ಕುಮಾರ್ ಶೆಟ್ಟಿ ಅವರು ಸುಧಾಕರ್ ಶೆಟ್ಟಿ ಅವರು ಮಾಡದೆ ಇರುವ ಉದ್ಯಮವಿಲ್ಲ ಅವರು ಎಲ್ಲ ಕ್ಷೇತ್ರದಲ್ಲು ಹೋಟಲ್ ಉದ್ಯಮ ಹಾಗಿದೆ ಶಾಲಾ ಕಾಲೇಜು ಎಲ್ಲಾದರಲ್ಲು ಕೂಡ ಅವರು ಯಶಸ್ಸುಗಳಿಸಿದ್ದಾರೆ. ಈಗ ಅವರು ಮೆಡಿಕಲ್ ಫಾರ್ಮಾ ಫರ್ಸ್ಟ್ ಔಷಧಾಲಯ ಪ್ರಾರಂಭ ಮಾಡಿದ್ದು ಇದರಲ್ಲು ಕೂಡ ಯಶಸ್ಸು ಕಾಣುತ್ತಾರೆ.ನಂಬಿಕೆ ಇದೆ ಎಂದು ಹೇಳಿದರು. ನಂತರ ಮಾತನಾಡಿದ ಫಾರ್ಮಾ ಫರ್ಸ್ಟ್ ಪವನ ಕುಮಾರ್ ಶೆಟ್ಟಿ ವ್ಯವಸ್ಥಾಪಕ ನಿದೇರ್ಶಕರು . ಫಾರ್ಮಫಸ್ಟ್ ಔಷಧಾಲಯ ;ವೈದ್ಯರಷ್ಟೇ ಔಷಧ ವಿತರಕರ ಪಾತ್ರವೂ ಮುಖ್ಯ”
ಸಮಾಜದಲ್ಲಿ ಆರೋಗ್ಯ ಸುಸ್ಥಿತಿ ಕಾಪಾಡಲು ವೈದ್ಯರಷ್ಟೇ ಔಷಧ ವಿತರಕರ ಪಾತ್ರವೂ ಮುಖ್ಯವಾಗಿದೆ.ಎಷ್ಟೋ ಬಾರಿ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಔಷಧ ಸಿಗದೇ ಪ್ರಾಣ ಬಿಟ್ಟಿರುವ ಉದಾಹರಣೆಗಳು ಅನೇಕ ಇವೆ.ಈ ರೀತಿಯ ತೊಂದರೆಗಳಿ0ದ ಜನರನ್ನು ರಕ್ಷಿಸಲು ಔಷಧಾಲಯಗಳು ಮುಖ್ಯವಾಗಿರುವುದರಿಂದ ಶ್ರೀ ಪವನ ಕುಮಾರ್ ಶೆಟ್ಟಿ ಫಾರ್ಮಫಸ್ಟ್ ಔಷಧಾಲಯದ ವ್ಯವಸ್ಥಾಪಕರು ,ನಿರ್ದೇಶಕರು ಮತ್ತು ಶ್ರೀ ಅಪೂರ್ವ ಪವನ ಶೆಟ್ಟಿ ಆಡಳಿತ ಅಧಿಕಾರಿ.ಇವರುಗಳು ಫಾರ್ಮಫಸ್ಟ್ ಔಷಧಾಲಯವನ್ನು ನ್ಯೂ ಕಾಂತರಾಜ್ ಅರಸ್ ರಸ್ತೆ ಅಪೋಲೋ ಆಸ್ಪತ್ರೆ ಹತ್ತಿರ ಮೈಸೂರು. ಇಲ್ಲಿ ಆರಂಭಿಸಿದ್ದಾರೆ.

ಈ ಔಷಧಾಲಯದ ವಿಶೇಷತೆಗಳ ಬಗ್ಗೆ ಶ್ರೀ ಅಪೂರ್ವ ಪವನಶೆಟ್ಟಿ ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.ಸಾರ್ವಜನಿಕರ ಸೇವೆ ಮಾಡಲು ಹಲವಾರು ಕ್ಷೇತ್ರಗಳಿವೆ ಅದರಲ್ಲಿ ವೈದ್ಯಲೋಕ ಬಹುಮುಖ್ಯ. ಹಾಗಾಗಿ ನಾವುಗಳು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇವೆ.ಗ್ರಾಹಕರಿಗೆ ಅಗತ್ಯವಿರುವ ಔಷಧಗಳನ್ನು ಮತ್ತು ಸೇವೆಯನ್ನು ಸೂಕ್ತ ಸಮಯದಲ್ಲಿ ನೀಡಬೇಕೆನ್ನುವುದು ನಮ್ಮ ಔಷಧಾಲಯದ ಉದ್ದೇಶ.ಭಾರತದಲ್ಲಿ ಎಲ್ಲಾ ರೀತಿಯ ಜನರು ಇದ್ದಾರೆ ಪ್ರತಿಯೊಬ್ಬರಿಗೂ ಒಂದೊ0ದು ರೀತಿಯ ಆರೋಗ್ಯ ಸಮಸ್ಯೆ ಇರುತ್ತದೆ ಹಾಗಾಗಿ ಅವರ ಆರೋಗ್ಯ ಸಮಸ್ಯೆಗೆ ಅನುಗುಣವಾಗಿ ಎಲ್ಲಾ ವರ್ಗದವರಿಗೂ ಸಮಾನವಾಗಿ ಸೇವೆ ಒದಗಿಸುವ ಯೋಜನೆ ಇದಾಗಿದೆ.ಮನೆ ಮನೆಗೆ ಔಷಧಿಗಳನ್ನು ತಲುಪಿಸುವ ಕೆಲಸವನ್ನು ಹಾಗೂ ಇತ್ತೀಚಿಗೆ ದೇಶವು ಡಿಜಿಟಲೀಕರಣಗೊಂಡಿರುವುದರಿ0ದ ತಾಂತ್ರಿಕ ವ್ಯವಸ್ಥೆಯನ್ನು ಬಳಸಿಕೊಂಡು ಔಷಧಿಗಳನ್ನು ರೋಗಿಗಳಿಗೆ ಸೂಕ್ತ ಸಮಯಕ್ಕೆ ತಲುಪಿಸುವ ಮಹದಾಸೆ ಇದೆ ಎಂದು ಹೇಳಿದರು. ಗ್ರಾಹಕರಿಗೆ ಒಂದು ಘಂಟೆಯಲ್ಲಿ ಔಷಧವನ್ನು ತಲುಪಿಸುವ ಕೆಲಸವನ್ನು ಮಾಡಲು ಮುಂದಾಗಿದ್ದೇವೆ.ಮುಖ್ಯ ಔಷಧ ವಿತರಕರು ಒಬ್ಬ ರೋಗಿಯನ್ನು ಶಿಕ್ಷಿತನನ್ನಾಗಿ ಮಾಡುತ್ತಾರೆ.ಹಾಗಾಗಿ ನಮ್ಮಲ್ಲಿ ಉತ್ತಮ ದರ್ಜೆಯ ಔಷಧ ವಿತರಕರನ್ನು ನೇಮಕ ಮಾಡಿಕೊಂಡಿದ್ದೇವೆ.ಮಾನಸಿಕ ಮತ್ತು ದೈಹಿಕ ನ್ಯೂನ್ಯತೆ ಉಳ್ಳವರಿಗೆ ಸೇವೆಯಲ್ಲಿ ಮೊದಲನೆಯ ಆದ್ಯತೆ ನೀಡುತ್ತೇವೆ.ಔಷಧಾಲಯದ ಹತ್ತಿರ ಇವರು ಬಂದರೆ ಇವರ ಬಳಿಯೇ ಖುದ್ದಾಗಿ ಹೋಗಿ ಅವರಿಗಿರುವ ಔಷದ ಅಗತ್ಯತೆಯನ್ನು ಪೂರೈಸುತ್ತೇವೆ.ಯಾರೇ ಸಾರ್ವಜನಿಕರು ನಮ್ಮ ಔಷಧಾಲಯಕ್ಕೆ ಬಂದು ಮಾಹಿತಿ ಪಡೆಯಬಹುದು ಹಾಗೂ ನಮ್ಮಲ್ಲೇ ಔಷಧ ತೆಗೆದುಕೊಳ್ಳಬೇಕೆನ್ನುವ ಕಡ್ಡಾಯ ಕಟ್ಟುಪಾಡುಗಳಿಲ್ಲ ಗ್ರಾಹಕರಿಗೆ ಒಳ್ಳೆಯದಾದರಷ್ಟೇ ನಮಗೆ ಸಂತೋಷ.ಬೇರೆ ಬೇರೆ ಪ್ರದೇಶಗಳಲ್ಲಿ ನಮ್ಮ ಶಾಖೆಗಳನ್ನು ಮುಂದಿನ ದಿನಗಳಲ್ಲಿ ತೆರೆಯಲ್ಪಡುತ್ತೇವೆ.ನಾನು ಮೈಸೂರಿಗನಾಗಿರುವುದರಿಂದ ಮೈಸೂರಿಗೆ ಮೊದಲ ಆದ್ಯತೆ ನೀಡಿದ್ದೇವೆ.ಮೈಸೂರಿನಲ್ಲಿ ಇನ್ನೂ ನಾಲ್ಕು ಶಾಖೆಗಳನ್ನು ತೆರೆಯುವ ಯೋಜನೆ ಇದೆ. ಔಷದಾಲಯದ ವಿತರಣಾ ಸಮಯವೂ ೨೪ ಘಂಟೆಯವರೆಗೆ ಇರುತ್ತದೆ ಆದರೆ ಈ ಮೊದಲ ಮೂರು ತಿಂಗಳು ಮಾತ್ರ ೮ ರಿಂದ ೧೧ ರವರೆಗೆ ತೆರೆಯುತಿದ್ದೇವೆ.ಎಂದು ಶ್ರೀ ಪವನ ಶೆಟ್ಟಿಯವರು ತಮ್ಮ ಔಷಧಾಲಯದ ಮಹತ್ತರ ಒಳ್ಳೆಯ ಸೇವೆಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿಷಯ ಹಂಚಿಕೊoಡರು. ಸಾರ್ವಜನಿಕರು ಈ ಸೇವೆಯನ್ನು ಸದುಪಯೋಗಪಡಿಸಿಕೊಂಡು ಉತ್ತಮ ಆರೋಗ್ಯ ಸ್ಥಿತಿಯನ್ನು ಹೊಂದಲಿ ಕಾರ್ಯಕ್ರಮದಲ್ಲಿ ಎಲ್ ನಾಗೇಂದ್ರ ನಗರ ಪಾಲಿಕೆ ಸದಸ್ಯ ಶಿವುಕುಮಾರ್ ಮುಂತಾದವರು ಹಾಜರಿದ್ದರು.

By admin