ಗುಂಡ್ಲುಪೇಟೆ: ತಾಲೂಕಿನ ಹಂಗಳ ಗ್ರಾಮದಿಂದ ಹಂಗಳಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಪುನೀತ್ ರಾಜಕುಮಾರ್ ಹುಟ್ಟಹಬ್ಬದ ಹಿನ್ನೆಲೆ ಡಾ.ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಯಿತು.

ಹಂಗಳ ಗ್ರಾಮದ ಬಾಬುಜಗಜೀವನ್ ರಾಂ ಬಡಾವಣೆಯ ಯುವಕರು ಹಾಗು ಮುಖಂಡರು ಗ್ರಾಪಂನಿಂದ ಅನುಮತಿ ಪಡೆದು ಹಂಗಳಪುರ ರಸ್ತೆಗೆ ಡಾ.ಪುನೀತ್ ರಾಜಕುಮಾರ್ ರಸ್ತೆ ಎಂದು ಹೆಸರಿಡುವ ಮೂಲಕ ನೆಚ್ಚಿನ ನಟನಿಗೆ ನಮನ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮಲ್ಲಪ್ಪ, ಮಾಜಿ ಅಧ್ಯಕ್ಷ ಮಹೇಶ್, ಸದಸ್ಯರಾದ ಎಚ್.ಎಂ.ನಂದೀಶ್, ವೃಷಬೇಂದ್ರ, ನಾಗರಾಜು, ದೊರೆಸ್ವಾಮಿ, ಕಾಡಾ ಮಾಜಿ ಅಧ್ಯಕ್ಷ ಹೆಚ್.ಎಸ್.ನಂಜಪ್ಪ, ವಕೀಲ ರಾಜೇಶ್, ಮುಖಂಡರಾದ ಗೋವಿಂದನಾಯಕ್, ಪರಮೇಶ್, ಮಾದೇಶ್, ಸಿದ್ದು ಸೇರಿದಂತೆ ಅಪ್ಪು ಅಭಿಮಾನಿಗಳು ಇದ್ದರು.

ವರದಿ: ಬಸವರಾಜು ಎಸ್.ಹಂಗಳ