ಮೈಸೂರು-೮ ಕೊರೊನಾ ರಾಜ್ಯದ ಜನರನ್ನು ಮನೆಯೊಳಗೆ ಬಂಧಿಯಾಗಿಸಿದೆ. ದಿನೇದಿನೇ ಸೋಂಕು ಹರಡುತ್ತಲೇ ಇದ್ದು, ಸಾರ್ವಜನಿಕರು ಮನೆಬಿಟ್ಟು ಹೊರಬರಲು ಹೆದರುತ್ತಿದ್ದಾರೆ. ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಸ್ತಬ್ಧವಾಗಿವೆ. ಒಂದೆಡೆ, ಬಡವರು, ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರೆ, ಮತ್ತೊಂದೆಡೆ ಬೀದಿ ನಾಯಿಗಳ ಸ್ಥಿತಿಯೂ ಅಯೋಮಯವಾಗಿದೆ.
ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಹಾರಾಜ ಮೈದಾನ ,ವಸ್ತುಪ್ರದರ್ಶನ ಆವರಣ ,ಚಾಮುಂಡಿಬೆಟ್ಟ ತಪ್ಪಲು ,ಹಾಗೂ ಪ್ರಮುಖ ಉದ್ಯಾನವನದಲ್ಲಿ ೨೦೦ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ
ಆಹಾರ ವಿತರಿಸಲಾಯಿತು,

ಕೊರೊನಾ ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಸರ್ಕಾರವು ಈಗಾಗಲೇ ವಾರಾಂತ್ಯದ ಕರ್ಫ್ಯೂ ಮಾರ್ಗಸೂಚಿ ಜಾರಿಗೆ ತಂದಿದ್ದು, ವೀಕೆಂಡ್ ಕರ್ಫ್ಯೂ ಮುಗಿಯವರಿಗೂ ನಿರಂತರವಾಗಿ ಬೀದಿ ನಾಯಿಗಳಿಗೆ ನಮ್ಮ ಟ್ರಸ್ಟ್ ಆಹಾರ ನೀಡಲು ಮುಂದಾಗುತ್ತೇವೆ ಎಂದು ಹೇಳಿದರು ಈ ಹಿಂದೆ ಲಾಕ್ ಡೌನ್ ಸಂದರ್ಭದಲ್ಲೂ ಸಹ ನಿರಂತರವಾಗಿ ಬೀದಿನಾಯಿಗಳು ಹಾಗೂ ಕೋತಿಗಳಿಗೆ ಮತ್ತು ಬೀದಿ ಬದಿಯ ದನಕರುಗಳಿಗೆ ಆಹಾರ ನೀಡುತ್ತ ಬಂದಿದ್ದೇವೆ ,
ಭೂಮಿ ಮೇಲಿನ ಪ್ರತಿ ಜೀವಿಗೂ ಬದುಕುವ ಹಕ್ಕಿದೆ. ಕೊರೊನಾ ಭೀತಿಯಿಂದ ವೀಕೆಂಡ್ ಕರ್ಫ್ಯೂ ಇಂದ ನಗರ ಬಂದ್ ಆಗಿರುವುದರಿಂದ ನಾಯಿಗಳಿಗೆ ಆಹಾರ ಸಿಗದೆ ಹಸಿವೆಯಿಂದ ಕಂಗೆಟ್ಟಿವೆ. ಹಲವೆಡೆ ಮನುಷ್ಯನ ಮೇಲೆ ದಾಳಿ ಮಾಡುತ್ತಿರುವ ಘಟನೆಗಳೂ ನಡೆಯುತ್ತಿವೆ. ಹಾಗಾಗಿ, ಅವುಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ಟ್ರಸ್ಟ್ ನ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ತಿಳಿಸಿದರು.

ಟ್ರಸ್ಟ್‌ನ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಫೇಸ್‌ಬುಕ್ ಹಾಗೂ ಜಾಲತಾಣಗಳನ್ನು ಬಳಸಿಕೊಂಡು ಬೀದಿ ನಾಯಿಗಳಿಗೆ ಆಹಾರ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಕೊರೊನಾ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಸಂಕಷ್ಟ ತಂದಿದೆ. ಇಂತಹ ಕಠಿಣ ಸಮಯದಲ್ಲಿ ಸಾರ್ವಜನಿಕರು ಪ್ರಾಣಿಗಳ ಮೇಲೆ ಅನುಕಂಪ ಹಾಗೂ ದಯೆ ತೋರಬೇಕು ಎಂದು ಮನವಿ ಮಾಡಿದ್ದಾರೆ.
ಬೀದಿ ನಾಯಿಗಳು, ಬೀದಿ ದನಗಳು, ಪ್ರಾಣಿ ಪಕ್ಷಿಗಳು ನೀರು ಆಹಾರ ಇಲ್ಲದೆ ಪರಿತಪಿಸುತ್ತಿವೆ. ಹಾಗಾಗಿ, ಸಾರ್ವಜನಿಕರು ನಿತ್ಯ ಒಂದು ಪ್ಲೇಟ್ ಆಹಾರ ಹಾಗೂ ನೀರನ್ನು ಗೇಟ್‌ನಿಂದ ಹೊರಗೆ ಇಡುವಂತೆ ಮನವಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ,ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೊಳ ಜಗದೀಶ್ ,ರಾಕೇಶ್ ಕುಂಚಿಟಿಗ ,ಸೇರಿದಂತೆ ಇನ್ನಿತರರು ಹಾಜರಿದ್ದರು