ಕೆನರಾಬ್ಯಾಂಕ್ ನಂಜುಮಳಿಗೆ ಶಾಖೆ ಲಕ್ಷೀಪುರಂ ಮೈಸೂರು.ಈ ಬ್ಯಾಂಕಿನ ಸಿಬ್ಬಂದಿ ಇಲ್ಲಿ ಬರುವಂತಹ ಬ್ಯಾಂಕಿನ ಗ್ರಾಹಕರಿಗೆ ವಾಹನ ನಿಲುಗಡೆಗೆ ತಮ್ಮಲ್ಲಿ ಸ್ಥಳಾವಕಾಶ ಇದ್ದರೂ ಅವಕಾಶ ಕೊಡದೆ ನಿರಾಕರಿಸಿರುವುದರಿಂದ.ಗ್ರಾಹಕರು ಬ್ಯಾಂಕಿನ ಮುಂಬದಿಯಲ್ಲಿ ರಸ್ತೆಗೆ ಬಹುಪಾಲು ಸೇರಿದಂತೆ ತಮ್ಮ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗಿದ್ದು.ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.ಇದು ಬಹಳ ತಿಂಗಳುಗಳಿ0ದಲೇ ತುಂಬಾ ದೊಡ್ಡ ಸಮಸ್ಯೆಯಾಗಿ ತಲೆದೋರಿದೆ ಆದರೆ ಇದಕ್ಕೆ ಸಂಬ0ಧಪಟ್ಟ ನಗರಪಾಲಿಕೆಯವರಾಗಲಿ ಹಾಗೂ ಪೋಲಿಸ್ ಇಲಾಖೆಯವರಾಗಲಿ ಯಾವುದೇ ಶಾಶ್ವತ ಪರಿಹಾರವನ್ನು ಒದಗಿಸಿಲ್ಲ. ಈ ಮುಂಚೆಯೂ ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ದೂರು ಸಲ್ಲಿಸಿದ್ದರೂ ಯಾರೂ ಕೂಡ ಸೂಕ್ತ ಕ್ರಮ ಕೈಗೊಂಡಿಲ್ಲ.ಈ ಶಾಖೆಯ ಕೆನರಾ ಬ್ಯಾಂಕಿನ ಮುಖ್ಯಸ್ಥರಿಗೆ ವಾಹನ ನಿಲುಗಡೆಯ ಸಮಸ್ಯೆಯ ಬಗ್ಗೆ ಗ್ರಾಹಕರು ಮತ್ತು ಸಾರ್ವಜನಿಕರು ದೂರು ನೀಡಿದರೂ ಕರೋನಾ ಎಂಬ ಕುಂಟು ನೆಪ ಹೇಳಿ ಮತ್ತಷ್ಟು ತೊಂದರೆಗೆ ದಾರಿಮಾಡುತ್ತಿದ್ದಾರೆ.ಬ್ಯಾಂಕಿನ ಪಕ್ಕದಲ್ಲೇ ಆಸ್ಪತ್ರೆ ಇದ್ದು ಇಲ್ಲಿ ದಿನನಿತ್ಯ ಬರುವ ರೋಗಿಗಳಿಗೆ ಈ ಮಾರ್ಗವಾಗಿ ತಿರುಗಾಡಲು ಬಹಳ ಸಮಸ್ಯೆ ಆಗುತ್ತಿದೆ.ಶಾಲಾ ಮಕ್ಕಳು ರಸ್ತೆಬದಿಯನ್ನು ದಾಟುವಾಗ ಕೆಲವೊಮ್ಮೆ ಅಪಘಾತಕ್ಕೆ ಒಳಗಾಗಿ ಕೂದಲೆಳೆಯಲ್ಲಿ ಪಾರಾಗಿರುವ ಹಲವು ಘಟನೆಗಳು ಜರುಗಿದೆ. ರಸ್ತೆಯು ಮೊದಲೇ ಚಿಕ್ಕದಾಗಿದ್ದು ಹೆಚ್.ಡಿ.ಕೋಟೆ ಮಾರ್ಗವಾಗಿ ಹೋಗುವ ಎಲ್ಲಾ ವಾಹನ ಸಂಚಾರರು ಬಹುಪಾಲು ಇಲ್ಲೇ ಹೋಗಬೇಕಾಗಿದೆ ಹೀಗಿರುವಾಗ ತುಂಬಾ ವಾಹನದಟ್ಟ ಸರಣಿಯೇ ಉಂಟಾಗಿ ಸುತ್ತಮುತ್ತಲ ನಿವಾಸಿಗಳಿಗೆ ಹಾಗೂ ವ್ಯಾಪರಸ್ಥರಿಗೆ ತೊಂದರೆ ಉಂಟಾಗುತ್ತಿದೆ.ಇಲ್ಲಿನ ಸುಣ್ಣದಕೇರಿ ನಿವಾಸಿ ಶಿವುಕುಮಾರ್ ಅವರನ್ನು ಈ ಸಮಸ್ಯೆಯ ಕುರಿತಾಗಿ ಕೇಳಿದಾಗ ನಮ್ಮೊಂದಿಗೆ ಸಮಸ್ಯೆಯ ಬಗ್ಗೆ ವಿಷಯ ಹಂಚಿಕೊAಡದ್ದು ಹೀಗೆ .ಈ ಮುಖ್ಯ ರಸ್ತೆಯಲ್ಲಿ ವಾಹನಗಳ ನಿಲುಗಡೆಯನ್ನು ನೋಡಿದರೆ ತಲೆತಿರುಗುತ್ತದೆ ಆದರೆ ಪಾಲಿಕೆಯವರು ಹಾಗೂ ಪೋಲಿಸರು ಇಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಡುತ್ತಿಲ್ಲ.ನಗರದ ಮುಖ್ಯ ರಸ್ತೆಗಳನ್ನು ಅಗಲೀಕರಣ ಮಾಡಿ ನಗರವನ್ನು ಸ್ವಚ್ಛಂದವಾಗಿಡಲು ಮುಖ್ಯವಾಗಿ ನಗರಪಾಲಿಕೆಯವರು ಸಿದ್ಧವಾಗಬೇಕಾಗಿದೆ.ಆಗ ಮಾತ್ರ ವಾಹನ ನಿಲುಗಡೆ ಮತ್ತು ವಾಹನ ದಟ್ಟಣೆ ಸಮಸ್ಯೆಗೆ ಕಡಿವಾಣ ಹಾಕಬಹುದು ಎಂದು ಅಭಿಪ್ರಾಯ ತಿಳಿಸಿದರು. ವಾಹನ ಸಂಚಾರಿ ನಿಯಂತ್ರಣ ಪೋಲಿಸರು ಈ ಸ್ಥಳದಲ್ಲಿ ವಿರಳ ಹಾಗಾಗಿ ವಾಹನಗಳನ್ನು ಸಾಲು ಸಾಲಾಗಿ ನಿಲ್ಲಿಸಲಾಗುತ್ತಿದೆ. ಇದರಿಂದ ನಿತ್ಯ ಪಾದಚಾರಿಗಳಿಗೂ ಗಂಭೀರ ಸಮಸ್ಯೆಯಾಗಿದೆ.ಹೀಗಾಗಿ ಸ್ಥಳದ ಭೇಟಿಯಿತ್ತ ನಾವುಗಳು ಬ್ಯಾಂಕಿನ ಮುಖ್ಯಸ್ಥರಿಗೆ ಈ ಮೊದಲೇ ವಿಚಾರ ಮುಟ್ಟಿಸಿದ್ದೇವೆ ಆದರೆ ಅವರ ಉತ್ತರ ಸಮಸ್ಯೆಯಾಗಿಯೇ ಇದೆ.ಆದ್ದರಿಂದ ನಂಜುಮಳಿಗೆ ಲಕ್ಷಿö್ಮಪುರಂ ವ್ಯಾಪ್ತಿಯ ಪೋಲಿಸ್ ಅವರಿಗೆ ದೂರು ನೀಡಿ ಮತ್ತಷ್ಟು ವೇಗವಾಗಿ ಪರಿಹಾರ ಸಿಗಲೆಂದು ವರದಿ ಮಾಡಿ ಪ್ರಕಟಿಸುತ್ತಿದ್ದೇವೆ.ಆದಷ್ಟು ಬೇಗ ಬ್ಯಾಂಕಿನ ಸಿಬ್ಬಂದಿಗಳ ವಿರುಧ್ಧ ಕಟ್ಟುನಿಟ್ಟಿನ ಕ್ರಮಕೈಗೊಂಡು ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಬೇಕೆಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸದರು

 

 

By admin