ಮೇಷ: ನೀವು ಮಾಡುವ ಕೆಲಸಗಳು, ವ್ಯಾಪಾರ, ವಹಿವಾಟುಗಳಲ್ಲಿ ಉತ್ತಮ ಪ್ರಗತಿ. ಮಕ್ಕಳ ಕಡೆಯಿಂದ ಉತ್ತಮ ಸಹಾಯ ಸಹಕಾರಗಳು ದೊರೆಯಲಿದೆ. ಕೆಲಸ ಕಾರ್ಯಗಳು ಉತ್ತಮವಾಗಿ ನೆರವೇರುವುದು. ಮನೆ ಖರೀದಿ ಸಾಧ್ಯತೆಯಿದೆ.

ವೃಷಭ
ಕಾನೂನು ಸಂಬಂಧಿಸಿದ ವ್ಯವಹಾರಗಳಲ್ಲಿ ಜಯದ ಹಾದಿ. ಆಹಾರದ ವ್ಯತ್ಯಯದಿಂದಾಗಿ ಅನಾರೋಗ್ಯದ ಸಮಸ್ಯೆ ತಲೆದೋರಬಹುದು. ಮಾದಕ ಪದಾರ್ಥದಿಂದ ದೂರ ಉಳಿಯಿರಿ. ಹಣಕಾಸಿನ ಅನುಕೂಲತೆಯಾಗಬಹುದು.

ಮಿಥುನ
ನಿರೀಕ್ಷೆಗೆ ತಕ್ಕ ಪ್ರತಿಕ್ರಿಯೆಯಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಮನೆಯವರೊಂದಿಗೆ ಚರ್ಚೆಯ ಮೂಲಕ ಕುಟುಂಬದಲ್ಲಿದ್ದ ಭಿನ್ನಾಭಿಪ್ರಾಯ ನಿವಾರಣೆ ಸಾಧ್ಯತೆ. ದ್ರವ್ಯ ಪದಾರ್ಥಗಳ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆಯಿದೆ.

ಕಟಕ
ಹೊಸ ಹೊಸ ಜನರ ಪರಿಚಯದೊಂದಿಗೆ ನೂತನ ಉದ್ಯಮವನ್ನು ಪ್ರಾರಂಭ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಆರ್ಥಿಕ ಸದೃಢತೆಯಿಂದ ಹಿಡಿತ ಸಾಧಿಸುವಿರಿ. ಹಿರಿಯರೊಂದಿಗಿನ ಸಮಾಲೋಚನೆಯಿಂದ ಕಾರ್ಯಸಿದ್ಧಿಯಾಗಲಿದೆ.

ಸಿಂಹ
ಹದಗೆಟ್ಟ ಆರೋಗ್ಯದಲ್ಲಿ ಚೇತರಿಕೆ. ಹೊಸ ಹೊಸ ಯೋಜನೆಗಳಿಗೆ ಚಾಲನೆ ದೊರಕಲಿದೆ. ಆಸ್ತಿ, ಆಭರಣಗಳ ಖರೀದಿ ಸಾಧ್ಯತೆ. ಕ್ರೀಡಾಪಟುಗಳಿಗೆ ಅವಕಾಶ ಪ್ರೋತ್ಸಾಹಗಳು ದೊರೆತು ಗೌರವಾದರಗಳು ಲಭಿಸುವವು.

ಕನ್ಯಾ
ಉದ್ಯೋಗದ ಉನ್ನತಿಯ ನಿಮಿತ್ತ ತರಬೇತಿಯಲ್ಲಿ ಭಾಗವಹಿಸಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಸಿಗುತ್ತದೆ. ಪ್ರೀತಿಪಾತ್ರರಿಂದ ನಿಮ್ಮ ವ್ಯವಹಾರಗಳಿಗೆ ಅನುಕೂಲಕರ ಬಂಡವಾಳ ಹರಿದುಬರುವ ನಿರೀಕ್ಷೆ ಹೆಚ್ಚಾಗಿದೆ.

ತುಲಾ
ಬರಹಗಾರರು, ಕಲಾವಿದರುಗಳಿಗೆ ಉತ್ತೇಜನ. ಪ್ರಕಾಶಕರಿಂದ ಪ್ರಶಂಸೆ. ಹೊಸ ಕೃತಿಗಳ ಬಗ್ಗೆ ವಿಮರ್ಶೆ ಮಾತುಕತೆ. ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಿಗೆ ಉತ್ತಮ ಲಾಭ. ದಾಂಪತ್ಯ ಜೀವನದಲ್ಲಿ ಸಂತಸ.

ವೃಶ್ಚಿಕ
ವಾಣಿಜ್ಯ ಬೆಳೆಗಳ ವ್ಯವಹಾರದಿಂದಾಗಿ ಸಂಪನ್ಮೂಲ ವೃದ್ಧಿಸುತ್ತದೆ. ಗೃಹಬಳಕೆ ಸಾಮಗ್ರಿಗಳ ವ್ಯಾಪಾರದಲ್ಲಿ ತೊಡಗಿದವರಿಗೆ ಹೆಚ್ಚಿನ ಲಾಭ ದೊರೆಯುತ್ತಿದೆ. ಧಾನ್ಯಗಳಿಂದ ಹೆಚ್ಚಿನ ಆರ್ಥಿಕ ದೃಢತೆ ಒದಗಿ ಬರುತ್ತದೆ.

ಧನು
ನೂತನ ಯೋಜನೆಗಳಿಗೆ ಸರ್ಕಾರದಿಂದ ಸಹಾಯಧನ ಸಿಗಲಿದೆ. ಕೆಲಸ ಕಾರ್ಯದ ನಿಮಿತ್ತ ನೀಡಿರುವ ಆಶ್ವಾಸನೆಗಳು ವಿಫಲಗೊಳ್ಳುವುದರಿಂದ ಅನಾವಶ್ಯಕವಾದ ಖರ್ಚು ವೆಚ್ಚಗಳು ಹೆಚ್ಚು. ಮಾನಸಿಕವಾಗಿ ಗೊಂದಲ ಉಂಟಾಗುವ ಸಾಧ್ಯತೆಯಿದೆ.

ಮಕರ
ಸರ್ಕಾರಿ ಆಫೀಸುಗಳಲ್ಲಿ ಕೆಲಸ ಮಾಡುವವರಿಗೆ ಅನುಕೂಲ. ರಾಜಕಾರಣದಲ್ಲಿರುವವರಿಗೆ ಗೊಂದಲಮಯ ಸನ್ನಿವೇಶ ಸೃಷ್ಟಿಯಾಗಲಿದೆ. ಅಬಕಾರಿ, ಆರಕ್ಷಕ ಇಲಾಖಾ ನೌಕರರಿಗೆ ಬಿಡುವಿಲ್ಲದ ಕೆಲಸ ಕಾರ್ಯ ಹೆಚ್ಚಾಗಿರುತ್ತದೆ.

ಕುಂಭ
ಅನಿರೀಕ್ಷಿತವಾಗಿ ಹಣಕಾಸು ಸಿಗಲಿದೆ. ವಿದ್ವಾಂಸರು, ಕಲಾವಿದರುಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿವೆ. ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ,

ಮೀನ
ಉನ್ನತ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲ ಅನುಕೂಲತೆಗಳು ಕೂಡಿಬರಲಿವೆ. ಹಲವು ದಿನಗಳಿಂದ ಉಳಿಕೆಯಾಗಿರುವ ಕೆಲಸಗಳು ತ್ವರಿತಗತಿಯನ್ನು ಪಡೆದುಕೊಳ್ಳುವುದರಿಂದ ಹೆಚ್ಚಿನ ಅನುಕೂವಿದೇಶ ಪ್ರಯಾಣ ಯೋಗವು ಕೂಡಿ ಬರಲಿದೆ.

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಜ್ಯೋತಿಷ್ಯಶಾಸ್ತ್ರದಿಂದ ಶಾಶ್ವತ ಪರಿಹಾರಕ್ಕಾಗಿ ಒಮ್ಮೆ ಸಂಪರ್ಕಿಸಿ
ಶ್ರೀನಿವಾಸ ಆಚಾರ್ಯ
ಪ್ರಸಿದ್ಧ ಜ್ಯೋತಿಷ್ಯರು, ಪ್ರಧಾನ್ ತಾಂತ್ರಿಕರು
ಮೊ: 9611732144