ಮೈಸೂರು-ಆ. 1 ಸುಣ್ಣದಕೇರಿ 50.ನೇ ವಾರ್ಡ್‌ನ ಗಂಗಾಮತಸ್ಥರ ಬೀದಿ ಸುಧಾರಿತ ಬೀಟ್ ವ್ಯವಸ್ಥೆ ಕುರಿತು ಸಮಸ್ಯೆಗಳು ನೂರಾರು, ಪರಿಹಾರ ಒಂದೇ ಉಪ ನಿರೀಕ್ಷಕರು.ಕೆ ಆರ್ ಪೊಲೀಸ್ ಠಾಣೆ ರಾಚಯ್ಯ ಬೀಟ್ ಪೊಲೀಸ್ ಕಾನ್ಸ್‌ಟೆಬಲ್ ಸಭೆಯಲ್ಲಿ ಮಾತನಾಡಿದರು.ಸಾರ್ವಜನಿಕರ ಸಹಕಾರ ದೊರೆಯದಿದ್ದರೆ ಪೊಲೀಸರು ಕಾರ್ಯ ನಿರ್ವಹಿಸುವುದು ಕಷ್ಟ. ಸಾರ್ವಜನಿಕರು ನೀಡುವ ಸುಳಿವಿನಿಂದ ಅಪರಾಧ ಪ್ರಕರಣ ನಿಯಂತ್ರಿಸಬಹುದಾಗಿದೆ. ಇದರಿಂದ ಸಮಾಜದಲ್ಲಿ ಅಪರಾಧ ಕೃತ್ಯಗಳು ನಿಯಂತ್ರಣಗೊಳ್ಳಲಿವೆ ಎಂದರು.

ಪೊಲೀಸರು ಹಗಲಿರುಳೆನ್ನದೆ ಸಾಮಾಜಿಕ ಶಾಂತಿ, ನೆಮ್ಮದಿಗೆ ಸಾಕಷ್ಟು ಶ್ರಮಿಸುತ್ತಾರೆ. ವೈಯಕ್ತಿಕ ಹಿತಕ್ಕಿಂತ ಸಾಮಾಜಿಕ ಹಿತ ಬಯಸುವ ಪೊಲೀಸರಿಗೆ ಪ್ರತಿಯೊಬ್ಬರೂ ಅಗತ್ಯ ಸಹಕಾರ ನೀಡುವುದು ಅಗತ್ಯ ಎಂದರು.ಇದೇ ಸಂಧರ್ಭದಲ್ಲಿ ಗಂಗ ಮತಸ್ಥರ ಯಜಮಾನರು ಮಾತಾನಾಡಿ ಮೊಹಲ್ಲಾದಲ್ಲಿ ತಿಂಗಳಿಗೊಮ್ಮೆ ರಾತ್ರಿಯ ವೇಳೆಯಲ್ಲಿಯುವಕರ ಗುಂಪು ಸೇರಿ ಹುಟ್ಟ ಹಬ್ಬ ಆಚರಸಿಕೊಂಡು ಪಟಾಕಿ ಸಿಡಿಸಿ ಅಲ್ಲಿನ ನಿವಾಸಿಗಳಿಗೆ ಕಿರಿ.ಕಿರಿ.ಉಂಟಾಗುತ್ತಿದ್ದು ಪೋಲಿಸರಿಗೆ ತಮ್ಮ ಅಳಲು ತೋಡಿಕೊಂಡರು.
ಕೆ.ಆರ್.ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದೀಗ ಬೀಟ್ ವ್ಯವಸ್ಥೆ ಜಾರಿಯಲ್ಲಿದ್ದು ಎರಡು ಕ್ರಾಸ್,ಗೆ ಒಬ್ಬಬ್ಬರಂತೆ ನಿಯೋಜಿಸಿಪೊಲೀಸ್ ವ್ಯವಸ್ಥೆಯ ಯಶಸ್ವಿ ಅನುಷ್ಠಾನಕ್ಕೆ ಅಲ್ಲಿನ ನಿವಾಸಿಗಳು ಸಹಕಾರ ಕೋರಿದರು.ಪೊಲೀಸ್ ಕಾನ್ಸ್‌ಟೆಬಲ್ ರವಿ, ನಾಗೇಶ್, ಗಂಗಾ ಮತಸ್ಥರ ಸಂಘದ ಅಧ್ಯಕ್ಷರು ಗೋಪಣ್ಣ,ಯಜಮಾನರು ಜೋಗಪ್ಪ ಮುಖ್ಯಶ್ಥರಾದ ಅಶ್ವಥ್, ದಾಸಿ,ಮಹೇಶ್,ವಿಜಯ್, ನಾಗೇಶ್, ಗಂಗು,ಉಪಸ್ಥಿತರಿದ್ದರು.