ನಿನ್ನೆ, ನಾಗರಾಜಾಚಾರಿ ಪಿ., ೬೬, ನಿವೃತ್ತ ಆರ್ ಪಿ ಐ (ಚಾಮರಾಜನಗರ) ಮ್ತತು ಸಿಡಿಐ (ಚನ್ನಪಟ್ಟಣ) ಮೈಸೂರು ಮತ್ತು ರಘು, ೪೩ ವರ್ಷ ಅವರ ಅಂಗಾಂಗಗಳನ್ನು ಅಪೊಲೊ ಬಿಜಿಎಸ್ ಹಾಸ್ಪಿಟಲ್ಸ್, ಮೈಸೂರು ನಲ್ಲಿ ಯಶಸ್ವಿಯಾಗಿ ಕಸಿ ಅಗತ್ಯ ಇರುವ ರೋಗಿಗಳಿಗೆ ಕಸಿ ಮಾಡಲಾಗಿದೆ. ಇಬ್ಬರೂ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರು ಮತ್ತು ಮೆದುಳು ನಿಷ್ಕ್ರಿಯವಾಗಿದೆ ಎಂದು ಘೋಷಿಸಲ್ಪಟ್ಟವರಾಗಿದ್ದಾರು.
ಅಪೊಲೊ ಬಿಜಿಎಸ್ ಹಾಸ್ಪಿಟಲ್ಸ್, ಮೈಸೂರು ನಲ್ಲಿ ಮಾನವ ಅಂಗಾಂಗ ಕಸಿ ಕಾಯಿದೆ ೧೯೯೪ರ ಅನ್ವಯ ರಚಿಸಲಾಗಿರುವ ವೈದ್ಯರ ಸಮಿತಿಯು ಇಬ್ಬರ ಸ್ಥಿತಿಯನ್ನೂ ಮೌಲ್ಯಮಾಪನ ಮಾಡಿದೆ. ಈ ಪ್ರಕ್ರಿಯೆಯನ್ನು ಜೀವ ಸಾರ್ಥಕತೆಯ ಅಂಗಾಂಗ ದಾನ ಶಿಷ್ಟಾಚಾರದ ಅನುಸಾರವಾಗಿಯೇ ನೆರವೇರಿಸಲಾಗಿದೆ.


ಅಪೊಲೊ ಬಿಜಿಎಸ್ ಹಾಸ್ಪಿಟಲ್ಸ್, ಮೈಸೂರು ಈ ಪ್ರಾಂತದಲ್ಲಿ ಪರವಾನಗಿ ಪಡೆದಿರುವ ಅಂಗಾಂಗ ಕಸಿ ಕೇಂದ್ರ (ಒಟಿಸಿ)ವಾಗಿದೆ. ಇಲ್ಲಿ ಮೂತ್ರಪಿಂಡ, ಯಕೃತ್ತು, ಮೆದೋಜ್ಜೀರಕ ಗ್ರಂಥಿ (ಪ್ಯಾಂಕ್ರಿಯಾಸ್) ಮತ್ತು ಸಣ್ಣ ಕರುಳಿನ ಕಸಿಗಳನ್ನು ನಡೆಸಬಹುದಾಗಿದೆ. ಡಾ.ರಾಜ್ ಕುಮಾರ್ ಪಿ. ವಾಧ್ವಾ, ಮುಖ್ಯಸ್ಥರು, ಅಂಗಾಂಗ ಕಸಿ ಸಂಸ್ಥೆ, ಅಪೊಲೊ ಬಿಜಿಎಸ್ ಹಾಸ್ಪಿಟಲ್ಸ್ ಅವರು ಹೇಳಿದರು.ನಾವು ಅಪೊಲೊ ಬಿಜಿಎಸ್ ಹಾಸ್ಪಿಟಲ್ಸ್ ನಲ್ಲಿ ೨೯೦ ಅಂಗಾಂಗ ಕಸಿ ನೆರವೇರಿಸಿದ್ದು, ಯಶಸ್ಸಿನ ಪ್ರಮಾಣವೂ ಗರಿಷ್ಠ ಮಟ್ಟದಲ್ಲಿದೆ. ಅಂಗಾಂಗ ಕಸಿ ಸಂಖ್ಯೆಯಲ್ಲಿ ಪ್ರತಿ ವರ್ಷ ಹೆಚ್ಚಳ ಕಾಣುತ್ತಿರುವುದು ಕೋವಿಡ್-೧೯ ಸಾಂಕ್ರಾಮಿಕದ ನಡುವೆಯೂ ಅಂಗಾಂಗ ಕಸಿಗಾಗಿ ಕಾಯುತ್ತಿರುವವರಿಗೆ ಭರವಸೆ ಮೂಡಿಸಿದೆ.
ಅಂಗಾಂಗ ಕಸಿಯು ಅತ್ಯಂತ ಸವಾಲಿನ ಮತ್ತು ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿರುವ ಶಸ್ತ್ರಚಿಕಿತ್ಸೆಯಾಗಿದೆ.
ಅದರಲ್ಲಿಯೂ ಏಕಕಾಲದಲ್ಲಿ ಬಹು ಅಂಗಾಂಗ ಕಸಿಯನ್ನು ನೆರವೇರಿಸುವುದು ಅತ್ಯಂತ ಕ್ಲಿಷ್ಟಕರವಾಗಿದೆ. ಕಳೆದ ಒಂದು ದಶಕದಲ್ಲಿ ಅಂಗಾಂಗ ಕಸಿಯ ಹೊಸ ವಿಧಾನಗಳಿಂದಾಗಿ ಅಂಗಾಂಗ ಕಸಿಯ ಫಲಿತಾಂಶ ಗಣನೀಯವಾಗಿ ಸುಧಾರಿಸಿದ್ದು ರೋಗಿಗಳಲ್ಲಿ ಹೊಸ ಆಶಾಭಾವ ಮೂಡಿದೆ’ ಎಂದು ಅವರು ಹೇಳಿದರು.

ಅಪೊಲೊ ಬಿಜಿಎಸ್ ಹಾಸ್ಪಿಟಲ್ಸ್, ಗರಿಷ್ಠ ಸಂಖ್ಯೆಯ ಯಕೃತ್ತು ಮತ್ತು ಮೂತ್ರಪಿಂಡ ಕಸಿ ನೆರವೇರಿಸುವ ಮೂಲಕ ಈ ಪ್ರಾಂತ್ಯದಲ್ಲಿ ಅಂಗಾಂಗ ಕಸಿಗಾಗಿ ಕಾಯುತ್ತಿರುವ ರೋಗಿಗಳ ಬದಕಿನ ದಾರಿದೀಪ ಮತ್ತು ಭರವಸೆಯ ಆಶಾಕಿರಣವಾಗಿದೆ. ಆಸ್ಪತ್ರೆಯು ೨೦೨೧ರಲ್ಲಿ ೩೫ ಅಂಗಾಂಗ ಕಸಿಗಳನ್ನು ಯಶಸ್ವಿಯಾಗಿ ನೆರವೇರಿಸಿದೆ. ಅದರಲ್ಲಿ ಏಕಕಾಲದಲ್ಲಿ ನೆರವೇರಿಸಿದ ಎರಡು ಅಪರೂಪದ ಮೂತ್ರಪಿಂಡ ಮತ್ತು ಮೇದೋಜ್ಜೀರಕ ಗ್ರಂಥಿ ಕಸಿ (ಪ್ಯಾಂಕ್ರಿಯಾಸ್) (ಎಸ್ಕೆಪಿಟಿ) ಸೇರಿವೆ ಎಂದು ಶ್ರೀ ಭರತೀಶ ರೆಡ್ಡಿ, ವೈಸ್ ಪ್ರೆಸಿಡೆಂಟ್ ಮತ್ತು ಯೂನಿಟ್ ಹೆಡ್, ಅಪೊಲೊ ಬಿಜಿಎಸ್ ಹಾಸ್ಪಿಟಲ್ಸ್, ಮೈಸೂರು ಅವರು ತಿಳಿಸಿದರು.
,