ಮೈಸೂರು. ನವೆಂಬರ್: ತೋಟಗಾರಿಕೆ ಇಲಾಖೆ ವತಿಯಿಂದ 2020-21 ನೇ ಸಾಲಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಮಾವು ಬೆಳೆ ವಿಮೆ ಮಾಡಿಸಲು ಅವಕಾಶ ನೀಡಲಾಗಿದ್ದು, ಪ್ರತಿ ಹೆಕ್ಟೇರ್ಗೆ ವಿಮೆ ಮೊತ್ತ 80,000 ರೂ. ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ 4,000 ರೂ ಆಗಿರುತ್ತದೆ.
ವಿಮಾ ಮೊತ್ತವನ್ನು Agriculture insurance company of india ಎಂಬ ವಿಮಾ ಸಂಸ್ಥೆಯಲ್ಲಿ ನವೆಂಬರ್ 15 ರೊಳಗೆ ಪಾವತಿಸಬಹುದು.
ಕರ್ನಾಟಕ ರೈತ ಸೂಕ್ಷ್ಮ ಪ್ರಧಾನ ಮಂತ್ರಿ ಫಸಲ್ ಭಿಮಾ ಯೊಜನೆಯಡಿಯಲ್ಲಿ ಹಿಂಗಾರು 2020-21ರ ಹಾಂಗಾಮಿಗೆ ಟಮ್ಯೊಟೊ ಬೆಳೆಗೂ ಅವಕಾಶವಿದ್ದು, ಪ್ರತಿ ಹೆಕ್ಟೇರ್ಗೆ ವಿಮಾ ಮೊತ್ತ 1.18 ಲಕ್ಷ ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತು 5,900 ರೂ. ಆಗಿರುತ್ತದೆ.
ವಿಮೆಯನ್ನು ಹತ್ತಿರದ ಆರ್ಥಿಕ ಸಂಸ್ಥೆಗಳಲ್ಲಿ ನಿಗದಿತ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಪಹಣಿ, ಬ್ಯಾಂಕ್ ಪಾಸ್ಪುಸ್ತಕ, ಆಧಾರ್ ಕಾರ್ಡ್ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಪಾವತಿಸಬಹುದು ಅಥವಾ ರೈತರು ಬೆಳೆವಾರು ವಿಮೆಗಾಗಿ online portal: samrakshane.nic.in ಮೂಲಕನೊಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಭಾರತಿ ಎಕ್ಸ್ ಜೆ.ಐ.ಸಿ. ಲಿಮಿಟೆಡ್ ಮೊದಲನೇ ಮಹಡಿ #2951/ಎ, ಡಿ29/1, ಟೆಂಪಲ್ ರಸ್ತೆ, ವಾಣಿ ವಿಲಾಸ ಮೊಹಲ್ಲಾ, ದೂರವಾಣಿ ಸಂಖ್ಯೆ: 0821-4261600 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಪಂಚಾಯತ್ನ ಹಿರಿಯ ಸಹಾಯಕ ತೋಟಗಾರಿಕೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.