ಚಾಮರಾಜನಗರ: ಇತಿಹಾಸ ಪ್ರಸಿದ್ದ ನಗರದ ಶ್ರೀ ಚಾಮರಾಜೇಶ್ವರ ನೂತನ ಬ್ರಹ್ಮರಥವನ್ನು ಇಂದು ನಗರದ ಆದಿಶಕ್ತಿ ದೇವಸ್ಥಾನದ ಭಕ್ತಿ, ಆದರ, ಗೌರವದಿಂದ ಚಾಮರಾಜನಗರಕ್ಕೆ ಬರಮಾಡಿಕೊಳ್ಳಲಾಯಿತು.
ಬೆಂಗಳೂರಿನ ಕಾಮಾಕ್ಷಿ ಪಾಳ್ಯದಲ್ಲಿ ಸುಮಾರು ೧.೨೦ ಕೋಟಿ ರೂ. ವೆಚ್ಚದಲ್ಲಿ ಅನುದಾನ ನಿರ್ಮಾಣವಾಗಿರುವ ಹೊಸ ಬ್ರಹ್ಮರಥಕ್ಕೆ ನಗರದ ಆದಿಶಕ್ತಿ ದೇವಸ್ಥಾನದ ಬಳಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಧಾರ್ಮಿಕ ವಿಧಿ ವಿಧಾನದಂತೆ ಪೂಜೆ ಸಲ್ಲಿಸಿ ಸಂಭ್ರಮದಿಂದ ಸ್ವಾಗತಿಸಿದರು.
ಬಳಿಕ ಬ್ರಹ್ಮರಥವು ಕಲಾತಂಡದೊಂದಿಗೆ ಮೆರವಣಿಗೆ ಹೊರಟು ನಗರದ ಪ್ರಮುಖ ರಸ್ತೆಗಳಾದ ಸಂತೇಮರಹಳ್ಳಿ ವೃತ್ತ, ಡಿವಿಯೇ?ನ್ ರಸ್ತೆ, ಪಚ್ಚಪ್ಪ ವೃತ್ತ (ಜೈ ಭುವನೇಶ್ವರಿ ವೃತ್ತ) ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣ, ಗುಂಡ್ಲುಪೇಟೆ ವೃತ್ತ, ಚಿಕ್ಕಂಗಡಿ ಬೀದಿ ಮೂಲಕ ಸಾಗಿ ಚಾಮರಾಜೇಶ್ವರ ದೇವಾಲಯದ ಮುಂಭಾಗದ ರಸ್ತೆ ಮೂಲಕ ದೇವಾಲಯಕ್ಕೆ ಆಗಮಿಸಿತು. ದೇವಾಲಯದ ಸುತ್ತಲು ಪ್ರದಕ್ಷಿಣೆ ಹಾಕಿದ ನಂತರ ಪೂಜೆ ಸಲ್ಲಿಸಿ ದೇವಸ್ಥಾನದ ಆವರಣದಲ್ಲಿ ರಥವನ್ನು ನಿಲ್ಲಿಸಲಾಯಿತು.
ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾನಟರಾಜು, ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಎಸ್. ಕಾತ್ಯಾಯಿನಿದೇವಿ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ರಾಮಚಂದ್ರು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್, ಡಿ,ವೈ.ಎಸ್.ಪಿ. ಪ್ರಿಯದರ್ಶಿಣಿ ಸಾಣೆಕೊಪ್ಪ, ನಗರಸಭೆ ಸದಸ್ಯರು ಹಾಗೂ ಎಲ್ಲಾ ಕೋಮಿನ ಮುಖಂಡರುಗಳು ಶಾಸಕರೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು
ಮೇರವಣಿಗೆಯಲ್ಲಿ ಎಲ್ಲಾ ಸಮುದಾಯ ಕೋಮಿನ ಯಜಮಾನರು, ವಿವಿಧ ಸಂಘಟನೆಗಳ ಮುಖಂಡರು, ಭಕ್ತರು, ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಕಲ ಜನತೆ ಪಾಲ್ಗೊಂಡಿದ್ದರು.