ಮೈಸೂರು, ನವೆಂಬರ್-ನಮ್ಮ ವೈದ್ಯಕೀಯ ವಿದ್ಯಾರ್ಥಿಗಳು ಈ ಶಿಥಿಲಗೊಂಡಿರುವ ವೈದ್ಯಕೀಯ ನಿಲಯಗಳಲ್ಲಿರುವುದು ಬಹಳ ಶೋಚನೀಯ, ಬೇಸರ ಹಾಗೂ ದುಃಖದ ಸಂಗತಿಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ನೊಂದು ನುಡಿದರು.
ಮೈಸೂರಿನ ಸರಕಾರಿ ಮೆಡಿಕಲ್ ಕಾಲೇಜಿನ ಪುರುಷರ ವಿದ್ಯಾರ್ಥಿ ನಿಲಯಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಮಾನ್ಯ ಡಾ. ಕೆ. ಸುಧಾಕರ್ ಅವರು ಬುಧವಾರ ಭೇಟಿ ನೀಡಿ ಕಟ್ಟಡದ ದುಸ್ಥಿತಿ ಮತ್ತು ಕೈಗೊಳ್ಳಬೇಕಿರುವ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡುತ್ತಾ, ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳು ಇರುವ ಈ ಕಟ್ಟಡ ಇದು 58-60 ವರ್ಷದ ಕಟ್ಟಡವಾಗಿದೆ ಇದಕ್ಕೆ ನಮ್ಮ ಹಿಂದಿನ ಸರ್ಕಾರದವರು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಿತ್ತು, ಆದರೆ ನಮ್ಮ ಸರ್ಕಾರ ಇದರ ಬಗ್ಗೆ ಇನ್ನೆರಡು ಮೂರು ದಿನಗಳಲ್ಲೇ ಒಂದು ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಿದರು.
ಇಂದು ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿ ವಸತಿ ನಿಲಯಕ್ಕೆ ಭೇಟಿ ನೀಡಿದ್ದ ಅವರು ಸ್ಥಳೀಯ ಶಾಸಕರಾದ ನಾಗೇಂದ್ರ ಮತ್ತು ರಾಜೀವ್ ಗಾಂಧಿ ಆರೋಗ್ಯ ಆಸ್ಪತ್ರೆಯ ಉಪಕುಲಪತಿಗಳು, ನಿರ್ದೇಶಕರು ಮತ್ತು ಇನ್ನಿತರೇ ಎಲ್ಲಾ ಅಧಿಕಾರಿಗಳ ಜೊತೆ ಕಟ್ಟಡದ ದುಸ್ಥಿತಿಯ ಬಗ್ಗೆ ವಿಶೇಷ ಸಭೆ ನಡೆಸಿ ಅವರ ನೀಡುವ ಸಲಹೆ ಮೇರೆಗೆ ಈ ವೈದ್ಯಕೀಯ ವಿದ್ಯಾರ್ಥಿ ವಸತಿ ನಿಲಯವನ್ನು ನವೀಕರಣ ಮಾಡಬೇಕೋ ಅಥವಾ ಹೊಸಕಟ್ಟಡ ನಿರ್ಮಿಸಬೇಕೋ ಎಂಬ ತೀರ್ಮಾನವನ್ನು ಇನ್ನೆರಡು-ಮೂರು ದಿನಗಳಲ್ಲಿ ತೀರ್ಮಾನಿಸುವುದಾಗಿ ಹೇಳಿದರು.
ಪಂಚಲಿಂಗ ದರ್ಶನದ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂಬ ಪತ್ರಕರ್ತರೊಬ್ಬರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಅದಕ್ಕೆ ಇನ್ನೂ ಸಮಯವಿದ್ದು, ನಮ್ಮ ತಾಂತ್ರಿಕ ಮತ್ತು ಸಲಹಾ ಸಮಿತಿಯವರು ಸಭೆ ನಡೆಸಿ ಏನು ತೀರ್ಮಾನಕ್ಕೆ ಬರುತ್ತಾರೆ ಅದರ ಮೇಲೆ ಐತಿಹಾಸಿಕ ಪಂಚಲಿಂಗ ದರ್ಶನ ವ್ಯವಸ್ಥೆಯ ಬಗ್ಗೆ ತಿರ್ಮಾನಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮುಂದೆ ಬರುವ ಚಳಿಗಾಲದಲ್ಲಿ ಕೋವಿಡ್-19 ಹರಡದಂತೆ ಜನರು ಜನರು ಎಚ್ಚರಿಕೆಯಿಂದ ಇರಬೇಕು, ಅದರ ಬಗ್ಗೆ ಎಲ್ಲಾ ಆಸ್ಪತ್ರೆಗಳನ್ನು ಏನೇನು ಕ್ರಮ ತೆಗೆದುಕೊಂಡಿದ್ದಾರೆಂಬ ಬಗ್ಗೆ ಈಗ ನಾನು ಪರೀಶಿಲಿಸಿದ್ದೇನೆ ಎಂದರು.