ಗುಂಡ್ಲುಪೇಟೆ: ಪಟ್ಟಣದ ಪೆÇಲೀಸ್ ಠಾಣೆ ಎದುರು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ವತಿಯಿಂದ ಶ್ರೀ ಪುಣ್ಯಾನಂದಪುರಿ ಮಹಾ ಸ್ವಾಮೀಜಿ 15ನೇ ವರ್ಷದ ಪುಣ್ಯ ಸ್ಮರಣೆ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಭಾದ ಅಧ್ಯಕ್ಷ ನಾಗೇಂದ್ರ ನಾಗೇಂದ್ರ ಮಾತನಾಡಿ, ಶ್ರೀ ಪುಣ್ಯಾನಂದಪುರಿ ಮಹಾ ಸ್ವಾಮೀಜಿ ನಾಯಕ ಸಮಾಜದ ಏಳಿಗೆಗೆ ಅನೇಕ ಕೆಲಸಗಳನ್ನು ಮಾಡುವ ಮೂಲಕ ಸಮಾಜಕ್ಕೆ ಜಾಗೃತಿ ಮೂಡಿಸಿದ್ದಾರೆ. ಅವರ ಅಕಾಲಿಕ ಮರಣದಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ತಿಳಿಸಿದರು.
ಗೋವಿಂದರಾಜು ಮಾತನಾಡಿ, ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿ ನಾಯಕ ಸಮುದಾಯ 7.5 ಮೀಸಲಾತಿ ಹೆಚ್ಚಳಕ್ಕಾಗಿ ಬೆಂಗಳೂರಿನ ಪ್ರೀಡಂ ಪಾರ್ಕ್‍ನಲ್ಲಿ ಉಪವಾಸ ಸತ್ಯಾಗ್ರಹವನ್ನು ಕಳೆದ 54 ದಿನದಿಂದ ನಡೆಸುತ್ತಿದ್ದರು ಸಹ ಸರ್ಕಾರ ಅವರ ಮನವಿಗೆ ಸ್ಪಂದಿಸದಿರುವುದು ವಿಷಾದನೀಯ. ಆದ್ದರಿಂದ ಈ ಕೂಡಲೇ ಸರ್ಕಾರ 7.5 ಮೀಸಲಾತ ಘೋಷಣೆ ಮಾಡಬೇಕು. ಇಲ್ಲದಿದ್ದರೆ ರಾಜ್ಯದ ಎಲ್ಲಾ ತಾಲೂಕು ಕಚೇರಿ ಎದುರು ಸಮುದಾಯದ ವತಿಯಿಂದ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಹಾ ಸಭಾದ ಖಜಾಂಚಿ ಪ್ರದೀಪ್, ಪುರಸಭಾ ಸದಸ್ಯ ಶ್ರೀನಿವಾಸ್ ಕಣ್ಣಪ್ಪ, ಕಿರಣ್, ಮಾನವ ಬಂಧುತ್ವ ವೇದಿಕೆ ಸುಭಾಷ್ ಮಾಡ್ರಹಳ್ಳಿ, ಛಲವಾದಿ, ಸೋಮಣ್ಣ, ಹಂಗಳ ಸುಬ್ರಹ್ಮಣ್ಯ, ಕ್ರೇಜಿ ನಾಗರಾಜು, ಅಂಬೇಡ್ಕರ್ ಸೇನೆಯ ತಾಲ್ಲೂಕು ಅಧ್ಯಕ್ಷ ದೀಪಕ್, ವೇಣು ಸೇರಿದಂತೆ ಇತರರು ಹಾಜರಿದ್ದರು.
ವರದಿ: ಬಸವರಾಜು ಎಸ್.ಹಂಗಳ