ರಾಮಾಯಣ ಮಹಾಭಾರತವನ್ನ ಕೇವಲ ಓದಿ ತಿಳಿದುಕೊಂಡ ಭಾರತೀಯರನ್ನ ಜೈಹಿಂದ್ ಘೋಷಣೆ ಅಜಾದ್ ಹಿಂದ್ ಮೂಲಕ ಯುವಕರನ್ನ ಯುದ್ಧ ಸೇನಾನಿಗಳಂತೆ ನಿರ್ಮಿಸಿದವರು ಸುಭಾಷ್ ಚಂದ್ರಬೋಸ್ ರವರು,ಡಿ ದೇವರಾಜ ಅರಸು ಹಿಂದುಳಿದ ವರ್ಗದ ನಿಗಮದ ಅಧ್ಯಕ್ಷರಾದ ಆರ್ ರಘು ಕೌಟಿಲ್ಯ

ಜೈಹಿಂದ್ ಯುವಸಂಘಟನೆ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125ನೇ ಜಯಂತಿಯ ವರ್ಷಾಚರಣೆ ಅಂಗವಾಗಿ ಮಹರ್ಷಿ ಶಿಕ್ಷಣ ಸಂಸ್ಥೆಯಲ್ಲಿರುವ ಸಭಾಂಗಣದಲ್ಲಿ ಜೈಹಿಂದ್ ದೇಶಭಕ್ತಿಗೀತೆಗಳ ಗಾಯನ, ಸ್ವಾತಂತ್ರ್ಯ ಪೂರ್ವ ಭಾರತ ವಿಚಾರಸಂಕಿರಣ, ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಜೈಹಿಂದ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು,

ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಭಾವಚಿತ್ರಕ್ಕೆ ಕಾಮಾಕ್ಷಿ ಆಸ್ಪತ್ರೆಯ ಮಹೇಶ್ ಶೆಣೈ ರವರು ಪುಷ್ಪನಮನ ಸಲ್ಲಿಸಿ ಉದ್ಘಟಿಸಿದರು ನಂತರ ಮಹೇಶ್ ಶೆಣೈ ರವರು ಮಾತನಾಡಿ ಬ್ರಿಟಿಷರನ್ನ ಭಾರತ ಬಿಟ್ಟು ತೊಲಗಿಸಲು ಸ್ವಾತಂತ್ರ್ಯ ಪಡೆಯಲು 565 ಸಣ್ಣಪುಟ್ಟ ಸಂಸ್ಥಾನಗಳಲ್ಲಿ ಶಾಂತಿಯುತವಾಗಿ ಹೋರಾಟ ನಡೆಯುತ್ತಿದ್ದಾಗ ಯುವಕರೇ ರಕ್ತವನ್ನ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಜೈಹಿಂದ್ ಎನ್ನುವ ಮೂಲಕ ಇಡೀ ರಾಷ್ಟ್ರದಲ್ಲಿ ಯುವಕರನ್ನ ಸಂಘಟಿಸಿ ಭಾರತೀಯ ಭೂಸೇನೆ ಸ್ಥಾಪಿಸಿದರು ಎಂದರು,

ಸ್ವಾತಂತ್ರ್ಯ ಪೂರ್ವಭಾರತ ಅಧ್ಯಕ್ಷತೆ ವಹಿಸಿದ್ದ ಡಿ.ದೇವರಾಜ ಅರಸ್ ಹಿಂದುಳಿದ ವರ್ಗದ ನಿಗಮದ ಅಧಧ್ಯಕ್ಷರಾದ ಕೌಟಲ್ಯ ರಘುರವರು ಮಾತನಾಡಿ ಸ್ವತಂತ್ರಪೂರ್ವ ಭಾರತದಲ್ಲಿ ಬ್ರಿಟಿಷರ ದಬ್ಬಾಳಿಕೆ ದೌರ್ಜನ್ಯಗಳು ಹೆಚ್ಚಾದಾಗ ಕೇವಲ ಅಹಿಂಸೆ ಮಾರ್ಗದಿಂದ ಭಾಷಣದಿಂದ ಸ್ವಾತಂತ್ರ್ಯ ಪಡೆಯಲು ಆಗದೇ ಇದ್ದಾಗ ತಾಂತ್ರಿಕ ಶಕ್ತಿಯ ಮುಂದೆ ಯುದ್ಧಕ್ರಾಂತಿ ಅವಶ್ಯಕವಿತ್ತು ರಾಮಾಯಣ ಮಹಾಭಾರತವನ್ನ ಕೇವಲ ಓದಿ ತಿಳಿದುಕೊಂಡ ಭಾರತೀಯರನ್ನ ಜೈಹಿಂದ್ ಘೋಷಣೆ ಅಜಾದ್ ಹಿಂದ್ ಮೂಲಕ ಯುವಕರನ್ನ ಯುದ್ಧ ಸೇನಾನಿಗಳಂತೆ ನಿರ್ಮಿಸಿದವರು ಸುಭಾಷ್ ಚಂದ್ರಬೋಸ್ ರವರು, ಆದ್ದರಿಂದ ನಾವು ಭವ್ಯಭಾರತದಲ್ಲಿ ನೆಮ್ಮದಿಯಾಗಿದ್ದೇವೆ ಸೈನ್ಯ ಇವತ್ತಿಗೂ ದೇಶದ ಗಡಿ ಕಾಯುತ್ತಿದೆ ಪ್ರಧಾನಿ ನರೇಂದ್ರಮೋದಿ ರವರು 125ನೇ ಜನ್ಮದಿನೋತ್ಸವದ ಅಂಗವಾಗಿ ಪರಾಕ್ರಮ ದಿವಸ್ ಭಾರತ ಸರ್ಕಾರದಿಂದ ಆಚರಿಸುವಂತೆ ಕರೆ ನೀಡಿರುವುದು ದೇಶಭಕ್ತರಿಗೆ ಸಂದ ಗೌರವ ಎಂದರು..

ನಂತರ ಶಾರದಾ ವಿಲಾಸ ಕಾಲೇಜಿನ ಪ್ರಾಂಶುಪಾಲರಾದ ಹನುಮಂತಾಚಾರ್ ಜೋಷಿ ರವರು ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಎರಡು ತರಹದ ಅಹಿಂಸೆಮಾರ್ಗ ಮತ್ತು ಯುದ್ಧ ಹೋರಾಟ ಮಾರ್ಗ ನಡೆಯುತಿತ್ತು ನೇತಾಜಿ ಮತ್ತು ಭಗತ್ ರವರು ಬರದಿದ್ದರೆ ಸ್ವಾತಂತ್ರ್ಯ ಪಡೆಯಲು ಇನಷ್ಟು ವರುಷಗಳು ಕಾಯಬೇಕಿತ್ತೇನೋ ಎನ್ನುವ ಪ್ರಶ್ನೆ ಮೂಡುತ್ತದೆ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ವಿವೇಕಾನಂದರ ಅಧ್ಯಯನ ಪೀಠ ವಿರುವಂತೆ ನೇತಾಜಿ ರವರ ಅಧ್ಯಯನ ಪೀಠ ಸ್ಥಾಪಿಸುವಲ್ಲಿ ಶಿಕ್ಷಣ ಇಲಾಖೆ ರಾಜ್ಯ ಸರ್ಕಾರ ಮುಂದಾಗಬೇಕು ಇದರಿಂದ ವಿದ್ಯಾರ್ಥಿಗಳಿಗೆ ಯುವಪೀಳಿಗೆಗೆ ದೇಶಪ್ರೇಮದ ಜಾಗೃತಿ ಮೂಡಿಸಬಹುದು ಎಂದರು,

ನಂತರ ಕೆ. ರಘುರಾಂ ವಾಜಪೇಯಿ ಮಾತನಾಡಿ ಸ್ವಾತಂತ್ರ ಹೋರಾಟ ಚಳುವಳಿ ಎಂದರೆ ಸುಬ್ಬರಾಯನ ಕೆರೆ ರಾಮಸ್ವಾಮಿ ವೃತ್ತ ಸ್ವತಂತ್ರಪೂರ್ವ ಭಾರತ ದೇಶಭಕ್ತರ ಕೇಂದ್ರವಾಗಿತ್ತು ಸುಭಾಷ್ ಚಂದ್ರ ಬೋಸ್ ರವರಿಂದ ಅಂದು ಮೈಸೂರಿನಲ್ಲೂ ಸಹ ಲಕ್ಷಾಂತರ ಯುವಕರು ಬ್ರಿಟೀಷರ ವಿರುದ್ಧ ಜೈಹಿಂದ್ ಹೋರಾಟದಲ್ಲಿ ಪಾಲ್ಗೊಂಡಿದ್ದರು, ಇದನ್ನ ಸ್ಮರಿಸುವ ಕಡೆ ಸರ್ಕಾರಗಳು ಮುಂದಾಗದರುವು ಬೇಸರದ ಸಂಗತಿ, ಸಯ್ಯಾಜಿರಾವ್ ರಸ್ತೆ ಜಂಬೂಸವಾರಿ ತೆರಳುವ ಮಾರ್ಗದಲ್ಲಿರುವ ನೇತಾಜಿ ಸುಭಾಷ್ ಚಂದ್ರಬೋಸ್ ವೃತ್ತದಲ್ಲಿ ಅವರ ಪ್ರತೆಮೆ ಸ್ಥಾಪಿಸುವಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು ಎಂದರು,

ಜೈಹಿಂದ್ ಯುವ ಪ್ರಶಸ್ತಿಗೆ ಭಾಜನರಾದ
ಮುತ್ತಣ್ಣ (ವೈದ್ಯಕೀಯ ಕ್ಷೇತ್ರ), ಪಿ. ನಂಜುಂಡಸ್ವಾಮಿ (ಸಾಮಾಜಿಕ ಕ್ಷೇತ್ರ), ಎಂಕೆ ವಿನಯ್ ಬಾಬು (ಹೋಟೆಲ್ ಉದ್ಯಮ ಕ್ಷೇತ್ರ), ನಾಗೇಂದ್ರ ಬಾಬು( ಪತ್ರಿಕಾ ಕ್ಷೇತ್ರ), ಪ್ರದೀಪ್ ಗೌಡ (ಉದ್ಯಮ ಕ್ಷೇತ್ರ), ಜಬ್ಬಿ‌ಅಜ್ಜು (ಸಾಮಾಜಿಕ ಕ್ಷೇತ್ರ) ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು

ನೇತಾಜಿ ಸುಭಾಷ್ ಚಂದ್ರಬೋಸ್ ರವರ ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ವೆಂಗಿಪುರಮಠದ ಇಳೈ ಆಳ್ವಾರ್ ಸ್ವಾಮೀಜಿ, ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ ಪ್ರಕಾಶ್, ಹಿರಿಯ ಸಮಾಜಸೇವಕ ಕೆ. ರಘುರಾಂ ವಾಜಪೇಯಿ, ಶಾರದವಿಲಾಸ ಕಾಲೇಜಿನ ಹನುಮಂತಾಚಾರ್ ಜೋಷಿ, ಲಯನ್ಸ್ ಜೀವಧಾರ ರಕ್ತನಿಧಿಕೇಂದ್ರದ ನಿರ್ದೇಶಕರಾದ ಗಿರೀಶ್, ಜಿ.ಎಸ್ ಎಸ್ ಯೋಗಿಕ್ ಪೌಂಡೇಶನ್ ಅಧ್ಯಕ್ಷರಾದ ಶ್ರೀಹರಿ ದ್ವಾರಕನಾಥ್, ಮಹರ್ಷಿ ಶಿಕ್ಷಣ ಸಂಸ್ಥೆಯ ಭವಾನಿ ಶಂಕರ್, ಕಾಂಗ್ರೆಸ್ ಯುವಮುಖಂಡರಾದ ಎನ್.ಎಮ್ ನವೀನ್ ಕುಮಾರ್,ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ರೇಣುಕಾ ರಾಜ್ ,ಜೈ ಹಿಂದ್ ಸಂಘಟನೆಯ ಅಧ್ಯಕ್ಷರಾದ ಅಜಯ್ ಶಾಸ್ತ್ರಿ ,ವಿಕ್ರಂ ಅಯ್ಯಂಗಾರ್ , ಎಸ್ ಎನ್ ರಾಜೇಶ್ ,ರಾಕೇಶ್ ಭಟ್ ,ಜಯಸಿಂಹ ಎನ್ ಶ್ರೀಧರ್, ಸುಚೀಂದ್ರ,ಚಕ್ರಪಾಣಿ ,ರಂಗನಾಥ್ ,ಟಿಎಸ್ ಅರುಣ್ ,ಲೋಹಿತ್ ,ಹಾಗೂ ಇನ್ನಿತರರು ಹಾಜರಿದ್ದರು

By admin