ಅಲ್ಲಿ ಎಲ್ಲೋ ಸುತ್ತಲು ಕವಿದಿದೆ ಕತ್ತಲೆಯಲಿ
ಪ್ರೀತಿಯ,ಮಮತೆಯ ಮೋಹದ ಕನಸು
ಬತ್ತಿದೆ ಹಗಲಲಿ ,ಕರುಣೆ ಮಾಸಿದ ನಡೆ
ಹಾಗೆ ಮೆಲ್ಲನೆ …..ಸುಮ್ಮನೆ ಸಾಗೋಣ
ನದಿ, ತೊರೆ ,ಪರಿಸರದ ಜಲಚರಗಳು
ಮಳೆಯನ್ನೇ ಆವರಿಸಿವೆ
ಮನುಜನೀತ ಕಲುಷಿತ ಸಂಜಾತ ಮಾತ್ರ
ಮಹಲುಗಳ ಮೇಲೆ ಮಹಲು ಕಟ್ಟುತಾ
ವಿಹರಿಸುತಿರುವಾ…..ಭ್ರಮೆಯೆಂಬ ಆಟದಲಿ
ಇರುವುದನ್ನ ಬಿಟ್ಟು ; ಇಲ್ಲದಿರುವ ಕಡೆ ಅದೇನೊ
ವ್ಯಾಮೋಹದ ಬಂಧನದ ಹೂರಣ
ಹೊಸ ಭರವಸೆಯ ಕಟ್ಟೋಣ
ನಮ್ಮಗಳ ಸೂತಕದ ಸಂಕೋಲೆ ಸರಿಸುತಾ
ವಿಶ್ವಮಾನವರಾಗೋಣ..
ಜಾತಿ- ಮತ-ಪಂಥವ ಬಿಡೋಣ
ನವೊಲ್ಲಾಸದ ಬದುಕಿಗೆ ನಾಂದಿ ಬರೆಯೋಣ
ಬುದ್ದ,ಬಸವ,ಅಂಬೇಡ್ಕರ್ ಆಶಯವ ಸಾಕಾರಗೊಳಿಸೊಣ…ನಾಳಿನ ಕನಸಿಗೆ
ಶಕ್ತಿಯಾಗುತ ಎಲ್ಲರಲ್ಲೂ ನಾವಾಗೋಣ..
- ಶ್ರೀಕಾಂತ ಮಳೆಗಲ್,ಬಳ್ಳಾರಿ
ಕವಿ, ಅತಿಥಿ ಉಪನ್ಯಾಸಕ
ಬಳ್ಳಾರಿ