
ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡು ಇಂದಿಗೆ ೩ ತಿಂಗಳು ಕಳೆದಿದೆ. ಅವರು ಇಲ್ಲ ಎನ್ನುವ ನೋವು ಇಂದಿಗೂ ಕಡಿಮೆ ಆಗಿಲ್ಲ. ಎಲ್ಲಾ ಜಿಲ್ಲಾ ಕಡೆಗಳಿಂದ ಅಭಿಮಾನಿಗಳು ಬಂದು ಪುನೀತ್ ಸಮಾಧಿಯ ದರ್ಶನ ಪಡೆಯುತ್ತಿದ್ದಾರೆ.
ಅಪ್ಪು (Appu) ಕುಟುಂಬಸ್ಥರು ಇಂದು ಮೂರನೇ ತಿಂಗಳ ಪುಣ್ಯ ತಿಥಿ ಕಾರ್ಯ ಮಾಡಲು ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದರು. ಪುಣ್ಯ ತಿಥಿ ಕುಟುಂಬಸ್ಥರು, ಅಭಿಮಾನಿಗಳಿಗೆ ಅನ್ನದಾನ ಕಾರ್ಯಕ್ರಮ ಮತ್ತು ೫೦೦ ಸಸಿಗಳನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಲ್ಲದೆ, ಸ್ಕಿಲ್ ಡಿಪಾರ್ಟ್ಮೆಂಟ್ ವತಿಯಿಂದ ಅಪ್ಪು ಸಮಾಧಿಗೆ ಸಂಜೆ ೬ ಘಂಟೆಗೆ ದೀಪೋತ್ಸವ ಮಾಡಲಿದ್ದಾರೆ.

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಪುನೀತ್ ಪತ್ನಿಅಶ್ವಿನಿ, ಪುನೀತ್ ರಾಜ್ ಕುಮಾರ್, ಅವರಿಗೆ ಕಾಡಿನ ಬಗ್ಗೆ ಕಾಳಜಿ ಇತ್ತು. ಹೀಗಾಗಿ ಅಭಿಮಾನಿಗಳ ದಂಡು ಹರಿದು ಬರುತ್ತಿದೆ. ಅಭಿಮಾನಿಗಳ ಮೂಲಕ ಏನು ವಾಪಸ್ ಕೊಡಬಹುದು ಅಂತ ನಾವು ಯೋಚಿಸಿದ್ದೇವೆ. ಅವರೆಲ್ಲರಿಗೂ ಗಿಡ ನೀಡಿ ಕಾಡು ಉಳಿಸಿ ಬೆಳೆಸೋದಕೆನ್ಕ ಸಹಕಾರ ನೀಡುವಂತರ ಮನವಿ ಮಾಡ್ತಿದ್ದೇವೆ. ಗಿಡಗಳಲ್ಲಿ ಆತ್ಮ ವಾಸಿಸುತ್ತೆ ಅನ್ನೋ ಮಾತಿದೆ. ಇಡೀ ಕುಟುಂಬ ಸೇರಿ ಅವನ ಆತ್ಮಕ್ಕೆ ಗೌರವ ಸಲ್ಲಿಸೋ ಕೆಲಸ ಮಾಡ್ತಿದ್ದಿವಿ.ಅಪ್ಪು ಮೂರನೇ ತಿಂಗಳ ತಿಥಿ ದಿನ ಆರಂಭಿಸಿದ್ದೇವೆ. ಇದನ್ನ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.