ಮೇಷ
ಈ ರಾಶಿಯ ಛಾಯಾಗ್ರಾಹಕರು, ವಿಡಿಯೊ ಗ್ರಾಹಕರುಗಳಿಗೆ ಹೆಚ್ಚಿನ ಅವಕಾಶಗಳು ಮೂಡಿಬರಲಿದೆ. ಪುಣ್ಯಕ್ಷೇತ್ರ, ಮನೆದೇವರ ದರ್ಶನ ಭಾಗ್ಯ ದೊರೆಯಲಿದೆ. ಬಾಕಿ ಇರುವ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸುವ ಅವಕಾಶವು ಒದಗಿ ಬರುತ್ತದೆ.
ವೃಷಭ
ಈ ರಾಶಿಯವರು ಹೊಸ ಉದ್ಯಮಗಳನ್ನು ಪ್ರಾರಂಭಿಸಲಿದ್ದೀರಿ. ಸಣ್ಣಪುಟ್ಟ ಸಾಲಗಳಿಂದ ಮುಕ್ತರಾಗಲಿದ್ದೀರಿ. ಉದ್ಯೋಗದಾತರ ವಿಶೇಷ ಸಹಾಯ ಸಹಕಾರದಿಂದಾಗಿ ಪರಿಣಿತರಾಗಲಿದ್ದೀರಿ.
ಮಿಥುನ
ಈ ರಾಶಿಯ ರಾಜಕೀಯ ಮತ್ತು ಗಣ್ಯವ್ಯಕ್ತಿಗಳಿಗೆ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸ್ಥಾನಮಾನ ಗೌರವಗಳು ಸಿಗಲಿವೆ. ವ್ಯಾಪಾರ ವ್ಯವಹಾರದಲ್ಲಿರುವವರಿಗೆ ಹೆಚ್ಚಿನ ಲಾಭದ ನಿರೀಕ್ಷೆ. ದೊಡ್ಡ ಹುದ್ದೆಯಲ್ಲಿರುವವರಿಗೆ ಇನ್ನೂ ಹೆಚ್ಚಿನ ಬಡ್ತಿ ದೊರೆಯಲಿದೆ.
ಕಟಕ
ಈ ರಾಶಿಯವರಿಗೆ ನಿಮ್ಮ ಮನಸ್ಸಿನ ವಿಷಯಗಳನ್ನು ಹೇಳಿಕೊಳ್ಳಲು ಸೂಕ್ತ ಸಮಯ. ಸಂಶೋಧಕರು ಪ್ರಶಂಸೆ ಗೌರವಾದರಗಳಿಗೆ ಪಾತ್ರರಾಗುವ ಸಾಧ್ಯತೆಗಳಿವೆ. ಜನಸಾಮಾನ್ಯರ ಸಮಸ್ಯೆಗಳನ್ನು ತಿಳಿದು ಅದಕ್ಕೆ ಸ್ಪಂದಿಸುವ ಕೆಲಸ ಮಾಡಿದಲ್ಲಿ ಉತ್ತಮ ಅವಕಾಶ ದೊರೆಯಲಿದೆ.
ಸಿಂಹ
ಈ ರಾಶಿಯವರು ಸಮಾದಾನದಿಂದ ಚಿಂತನೆ ವಿಮರ್ಶೆಯಿಂದಾಗಿ ವೈಯಕ್ತಿಕ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಸಿಗಲಿದೆ. ಇದರಿಂದಾಗಿ ಮನೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗುವುದು.

ಕನ್ಯಾ
ಈ ರಾಶಿಯವರಿಗೆ ವಾಣಿಜ್ಯ ವ್ಯವಹಾರ, ಜಾಹೀರಾತುಗಳ ಒಪ್ಪಂದಗಳಿಂದ ಲಾಭ ನಿರೀಕ್ಷಿಸಿಸುವ ಸಾಧ್ಯತೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ. ಶುಭವಾರ್ತೆ ಕೇಳುವಿರಿ ಇದರಿಂದ ಮನೆಯಲ್ಲಿ ಸಡಗರ ಸಂಭ್ರಮದ ವಾತಾವರಣ ಇರಲಿದೆ.
ತುಲಾ
ಈ ರಾಶಿಯವರು ಮಾಡುವ ಸಮಾಜ ಸೇವೆ ಕಾರ್ಯಗಳಿಂದ ಗೌರವ ಹೆಚ್ಚಾಗಲಿದ್ದು, ಉತ್ತಮವಾದ ಲಾಭವೂ ಬರಲಿದೆ. ಹಲವರು ಗಣ್ಯರ ಆಕಸ್ಮಿಕ ಸಂಪರ್ಕದಿಂದಾಗಿ ಜೀವನಶೈಲಿಯಲ್ಲಿ ಬದಲಾವಣೆ ಸಾಧ್ಯತೆಗಳಿದೆ. ಹಣಕಾಸಿನ ಸ್ಥಿತಿ ಉತ್ತಮಗೊಳ್ಳುವ ಸಾಧ್ಯತೆಗಳಿವೆ.
ವೃಶ್ಚಿಕ
ಈ ರಾಶಿಯವರು ತಮ್ಮ ಕೆಲಸ ಕಾರ್ಯಗಳಲ್ಲಿ ವಿಶೇಷ ಆಸಕ್ತಿಯಿಂದ ಶ್ರಮ ವಹಿಸುವುದು ಒಳ್ಳೆಯದು. ಮಕ್ಕಳ ಬದುಕಿನಲ್ಲಿ ಹೊಸ ತಿರುವು ಬರಲು ಅವಕಾಶ. ಧಾರ್ಮಿಕ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡುವವರು.
ಧನು
ಈ ರಾಶಿಯವರ ಸಮಸ್ಯೆಗಳು ಪರಿಹಾರವಾಗುವ ಸಾಧ್ಯವಾಗಲಿದೆ. ಮೇಲಧಿಕಾರಿಗಳ ವಿಶ್ವಾಸಕ್ಕೆ ಪಾತ್ರರಾಗಲಿದ್ದೀರಿ. ವಿವಾಹ ನಿರೀಕ್ಷೆಯಲ್ಲಿರುವವರಿಗೆ ಉತ್ತಮವಾದ ಸಂಬಂಧಗಳು ಕೂಡಿಬರಲಿದೆ. ನೂತನ ಉದ್ಯಮ ಆರಂಭಕ್ಕೆ ಒಳ್ಳೆಯಕಾಲವಾಗಿದೆ.
ಮಕರ
ಈ ರಾಶಿಯವರಿಗೆ ಮನೆ ನಿರ್ಮಾಣ ಇಲ್ಲವೇ ಖರೀದಿ ಮಾಡುವ ಸಾಧ್ಯತೆಗಳಿದೆ. ಲೇವಾದೇವಿ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಕಾಣಲಿದ್ದೀರಿ. ಶ್ರಮಕ್ಕೆ ತಕ್ಕ ಪ್ರತಿಫಲ ಬರಲಿದೆ. ಮನೆಯ ಸದಸ್ಯರೊಂದಿಗೆ ದೇವರ ದರ್ಶನ ಮಾಡುವ ಸಾಧ್ಯತೆಯಿದೆ.
ಕುಂಭ
ಈ ರಾಶಿಯವರಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ ಮಾಡುವ ಸಂಭವವಿದೆ. ಸಣ್ಣ ಸಣ್ಣ ಉದ್ಯಮದಾರರಿಗೆ ಹೆಚ್ಚಿನ ಲಾಭ ಬರಲಿದೆ. ಕೆಲವು ವ್ಯಾಪಾರಿಗಳಿಗೆ ಕ್ಷೇತ್ರ ಬದಲಾಯಿಸಲು ಇದು ಉತ್ತಮ ಸಮಯ.
ಮೀನ
ಈ ರಾಶಿಯವರಲ್ಲಿ ಗಂಭೀರವಾದ ಉದ್ದೇಶಗಳಿಟ್ಟುಕೊಂಡು ಸಾಕಷ್ಟು ಬದಲಾವಣೆಗಳು ಕಂಡುಬರಲಿದೆ. ಸ್ತ್ರೀ ಕುಲಕ್ಕೆ ಹೆಚ್ಚಿನ ಜವಾಬ್ದಾರಿ ಬೀಳಲಿದೆ. ಕೆಲಸ ಕಾರ್ಯಗಳಲ್ಲಿ ಸಿಗುವ ಉತ್ತಮ ಪ್ರೋತ್ಸಾಹದಿಂದ ಹೆಚ್ಚಿನ ಪ್ರಸಂಶೆಗೆ ಪಾತ್ರರಾಗುವಿರಿ.