ಚಾಮರಾಜನಗರ: ನಗರಸಭೆ ೨೪ ನೇ ವಾರ್ಡ್ ವ್ಯಾಪ್ತಿಯ ಚನ್ನಿಪುರಮೋಳೆ ಗ್ರಾಮದ ಮಾಜಿ ಯಜಮಾನ ಕೆ.ಸಿದ್ದರಾಜು (ಸಿದ್ದಶೆಟ್ಟಿ (೬೮) ಸೋಮವಾರ ಅನಾರೋಗ್ಯದಿಂದ ನಿಧನರಾದರು.
ಮೃತರು ಶ್ರೀ ದೊಡ್ಡಮ್ಮತಾಯಿ ನೀಲಗಾರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಬಂಧುಬಳಗವನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ ಮಂಗಳವಾರ ಚನ್ನಿಪುರದ ಮೋಳೆ ಗ್ರಾಮದ ರುದ್ರ ಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.