ಗುಂಡ್ಲುಪೇಟೆ: ಬಸ್‍ನಲ್ಲಿ ಪ್ರಯಾಣಿಸುವಾಗ ಮೊಬೈಲ್ ಕಳೆದುಕೊಂಡಿದ್ದ ವಿದ್ಯಾರ್ಥಿಯ ಮೊಬೈಲ್ ಪತ್ತೆ ಹಚ್ಚಿ ಮತ್ತೆ ಆತನಿಗೆ ಬೇಗೂರು ಠಾಣೆ ಪೊಲೀಸರು ಹಸ್ತಾಂತರ ಮಾಡಿದ್ದಾರೆ.

ತಾಲೂಕು ಕೊಡಗಾಪುರ ಗ್ರಾಮದ ಕಾಲೇಜು ವಿದ್ಯಾರ್ಥಿ ಕೆ.ಪಿ.ಭರತ್ ಎಂಬಾತ ಬೇಗೂರಿನಿಂದ ನಂಜನಗೂಡಿನ ಕಾಲೇಜಿಗೆ ಬಸ್ ನಲ್ಲಿ ಪ್ರಯಾಣಿಸುವಾಗ ಮೊಬೈಲ್ ಕಳೆದುಕೊಂಡು ನಂತರ ಬೇಗೂರು ಠಾಣೆಗೆ ದೂರು ನೀಡಿದ್ದನು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಇನ್ಸ್ ಪೆಕ್ಟರ್ ರೆಹಾನಾ ಸೂಚನೆ ಮೇರೆಗೆ ಎಎಸ್‍ಐ ಮಹೇಶ್ ಕುಮಾರ್, ಶಂಕರ್ ರಾಜು ಮತ್ತು ಸಿದ್ದರಾಜು ತಾಂತ್ರಿಕ ಸಹಾಯದಿಂದ ಮೊಬೈಲ್ ಪತ್ತೆ ಹಚ್ಚಿ ವಿದ್ಯಾರ್ಥಿ ಭರತ್‍ಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಭರತ್ ಪೆÇಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ವರದಿ: ಬಸವರಾಜು ಎಸ್.ಹಂಗಳ