ಟೆಲ್ ಡೆಲ್ಲಿ ಬಂಬೂ ಈಸ್ ಪ್ಲವರಿಂಗ್ (ದೆಹಲಿಗೆ ಹೇಳಿ – ಬಿದಿರು ಚಿಗುರುತ್ತಿದೆಯೆಂದು) ಸರ್ಕಾರಿ ಇಲಾಖೆಗೆ ತಂತಿ ಸಂದೇಶವೊಂದು ತಲುಪುವ ಘಟನೆಯನ್ನು ಒಂದೆಡೆ ಕನ್ನಡ ವಿಮರ್ಶೆಯ ಮೇರು ಪ್ರತಿಭೆಯಾದ ಡಿ.ಆರ್. ನಾಗರಾಜ್ ಅವರು ಒಂದೆಡೆ ಉಲ್ಲೇಖಿಸುತ್ತಾರೆ. ವಿಜ್ಞಾನಿಯೊಬ್ಬರಿಂದ ’ಬಿದಿರು ಹೂ ಬಿಡುವ ಕುರಿತು’, ಇಂತಹದನ್ನು ವಿಲಕ್ಷಣ ಮತ್ತು ವಿನಾಶಕ ಘಟನೆಯೆಂದು ತಂತಿ ಸಂದೇಶ ಕಳುಹಿಸುವ ಘಟನೆಯ ವಿವರಗಳನ್ನು ಅವರು ಉಲ್ಲೇಖಿಸಿದ್ದಾರೆ.


ಬಿದಿರು ಹೂಬಿಡುವ ಘಟನೆಯೂ ಕ್ಷಾಮ, ಬರಗಾಲದ ಮುನ್ಸೂಚನೆ! ಇದು ದೆಹಲಿಯ ಸರ್ಕಾರಿ ಇಲಾಖೆಗೆ (ಸರ್ಕಾರಕ್ಕೆ) ಅರ್ಥವಾಗುವುದಿಲ್ಲ. ಪ್ರಕೃತಿಯ ಅಸಾಮಾನ್ಯವಾದ ಈ ಘಟನೆ ವಿನಾಶಕಾರಿಯಾದುದು. ಮುಂದುವರೆದು, ಡಿ.ಆರ್.ಎನ್ ಹೇಳುವಂತೆಯೆ: ಇದೇ ಸಾಂಕೇತಿಕ ನಿದರ್ಶನವನ್ನು ವಿಸ್ತರಿಸುತ್ತ ವಿಶ್ವನಾಥನ್ ಹೇಳುತ್ತಾರೆ: ’ಮಿಜೊರಾಮ್ ಗೇ ವಿಶಿಷ್ಟವಾದ ಬಿದಿರನ್ನು ಅರ್ಥಮಾಡಿಕೊಳ್ಳುವ ಶಕ್ತಿಯಿಲ್ಲದ ದೆಹಲಿಗೆ ಮಿಜೊರಾಮನ್ನು ಅರ್ಥಮಾಡಿಕೊಳ್ಳುವ ಶಕ್ತಿಯೂ ಇಲ್ಲ. ಕೇರಳಕ್ಕೆ ವಿಶಿಷ್ಟವಾದ ತೆಂಗನ್ನು ಅರ್ಥಮಾಡಿಕೊಳ್ಳದ ದೆಹಲಿಗೆ ಕೇರಳವನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯಿಲ್ಲ. ಅದೇ ಕಾರಣ ದೆಹಲಿಗೆ ಮಿಜೊರಾಮನ್ನು ಕೇರಳವನ್ನು ಕಾಪಾಡಿಕೊಳ್ಳುವ ಶಕ್ತಿಯೂ ಇಲ್ಲ.’ ಎಂದು ಉಲ್ಲೇಖಿಸುತ್ತಾರೆ.


ಭಾರತವು ಸಾಮಾನ್ಯವಾದ ಹಾಗೂ ವಿಶೇಷವಾದ ಅನೇಕ ಲಕ್ಷಣಗಳನ್ನು ಪ್ರಾಕೃತಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಆರ್ಥಿಕವಾದ ಬೇರೆ ಭಿನ್ನ ವ್ಯವಸ್ಥೆಗಳನ್ನು ಹೊಂದಿದೆ. ಇಂತಹ ಅನೇಕ ವೈರುಧ್ಯಗಳಿಂದ ಭಾರತವು ಒಟ್ಟಾಗಿ ಕೂಡಿದೆ. ಪ್ರಸ್ತುತ ಭಾರತವು ಅನೇಕ ರಾಜ್ಯಗಳ ಒಕ್ಕೂಟ ವ್ಯವಸ್ಥೆಯಾಗಿದ್ದು, ಎಲ್ಲಾ ರಾಜ್ಯಗಳನ್ನು ಸಮಾನವಾದ ಕೋನದಲ್ಲಿಯೆ ಕಾಣಬೇಕಾದ ದೃಷ್ಟಿಬೇಕಾಗಿದೆ.

ಭಾರತದಲ್ಲಿ ಅನೇಕ ರಾಜ್ಯಗಳ ತಮ್ಮ ಭೌಗೋಳಿಕ ಲಕ್ಷಣದಿಂದಲೊ, ಸಾಂಸ್ಕೃತಿಕವಾಗಿಯೂ, ಭಾ? ಕಾರಣವಾಗಿಯೊ ಮತ್ತು ವಿವಿಧ ಕಾರಣಗಳಿಗೆ ರಾಜ್ಯಗಳು ಭಿನ್ನ ಅಸ್ತಿತ್ವವನ್ನು ಹೊಂದಿರುವಂತೆಯೆ ಕಾಣುತ್ತವೆ. ಇಂತಹ ವಿಶೇ? ವ್ಯವಸ್ಥೆಗಳನ್ನು ಒಟ್ಟಾಗಿಯೆ ಒಳಗೊಂಡು ಸಾಗಬೇಕಾದಾಗಲೆ ಅನೇಕ ಲಾಭಗಳಿವೆ.ವೈವಿಧ್ಯಗಳ ನಡುವೆಯೆ ವಿಶೇ?ತೆ ಇದೆ. ಹೀಗಿರುವಾಗ, ದೇಶದ ಪ್ರತಿ ರಾಜ್ಯಗಳ ಆರೋಗ್ಯವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಬೇಕಾದ ತುರ್ತು ರಾಜಕೀಯವಾಗಿ ಏಕಮುಖವಾಗಿರದೆ ಸಾಂಸ್ಕೃತಿಕವಾಗಿ, ಪ್ರಾಕೃತಿಕವಾಗಿ, ಶೈಕ್ಷಣಿಕವಾಗಿ, ಭಾಷಿಕವಾಗಿ ಹಾಗೂ ಇನ್ನೂ ಆಯಾಮಗಳಲ್ಲಿ ಮುಂದುವರೆಯಬೇಕಾಗಿದೆ ಎಂಬುದನ್ನು ಮೇಲಿನ ನಿದರ್ಶನ ಮೂಲಕ ಅರ್ಥಮಾಡಿಕೊಳ್ಳಬೇಕಾಗಿದೆ.


ಒಕ್ಕೂಟವು ಪ್ರತಿರಾಜ್ಯಗಳ ಆಗುಹೋಗುಗಳನ್ನು ಗಮನಿಸಿಕೊಳ್ಳಬೇಕಾಗುತ್ತದೆ. ಬಿದಿರು ಹೂಬಿಡುವ ಘಟನೆ ದೆಹಲಿ ಸರ್ಕಾರಕ್ಕೆ ಮುಖ್ಯವಾಗಿಲ್ಲದೆ ಹೋದರೆ ರಾಷ್ಟ್ರದೊಳಗಿರುವ ರಾಷ್ಟ್ರ ನಿರ್ಮಾಣವೇ ಸಾಧ್ಯವಾಗುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಓಟಿನ ರಾಜಕಾರಣಕ್ಕಾಗಿ ಸಮಾಜದಲ್ಲಿರುವ ಅನೇಕ ಸಮಸ್ಯೆಗಳಿಗೆ, ಪ್ರಕೃತಿಯ ತಾಪಾಮಾನ ಏರಿಕೆಯಿಂದಿಡಿದು ಸಾಮರಸ್ಯ ಪರವಾದ, ಸಹಿಷ್ಣುತೆ ಪರವಾದ ಬೇರೆ ಬೇರೆ ವಿಷಯಗಳಿಗೆ ರಾಜಕೀಯ ಪಕ್ಷಗಳು ಗಮನ ನೀಡುತ್ತಿಲ್ಲ. ಬದಲಿಗೆ ಲಾಭವಿರುವ ಉದ್ಯಮದಂತೆ ಕಾಣುವ ಚುನಾವಣಾ ಪ್ರಕ್ರಿಯೆಕ್ಕಾಗಿ ಮಾತ್ರ ಜನರನ್ನು, ಜನರ ಆಲೋಚನೆಯನ್ನು ಧರ್ಮದತ್ತ ಧ್ರುವೀಕರಣ ಮಾಡಲಾಗುತ್ತಿದೆ. ಆದರೆ ಸಮಾಜ ಮತ್ತು ಪರಿಸರ ವ್ಯವಸ್ಥೆಗಳು ದಿನೇ ದಿನೇ ಹದಗೆಡುತ್ತಿವೆ. ಸರ್ಕಾರಗಳ ಯೋಜನೆಗಳು ಸಮಾಜಮುಖಿಯಾಗಿಲ್ಲದಿರುವುದೇ ಇದಕ್ಕೆ ಕಾರಣವಾದರೂ, ಜನರ ಸಾಮೂಹಿಕ ಬೇಜವಾಬ್ದಾರಿ ಮತ್ತೊಂದೆಡೆ ಇದೆ. ಜಾಗತಿಕವಾಗಿ ಅತ್ಯಾಧುನಿಕವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ, ಪ್ರತಿ ದೇಶಗಳ ಯೋಜನೆಗಳಲ್ಲಿ ಸಾಮಾಜಿಕ ಮತ್ತು ಪರಿಸರ ಕಾಳಜಿಯ ಕುರಿತಾಗಿಯೆ ಸ್ಪಷ್ಟವಾದ ನಿಲುವುಗಳಿಲ್ಲ. ಜಾಗತೀಕರಣದ ವಿಸ್ತರಣೆಯಿಂದ ತಂತ್ರಜ್ಞಾನದಿಂದ ಮಾತ್ರ ಮನುಷ್ಯನ ಉದ್ಧಾರ ಸಾಧ್ಯ ಎನ್ನುವ ವಾಕ್ಯಗಳು ಸವಕಲಾಗಿದ್ದರೂ. ಸಮಗ್ರ ಅಬಿವೃದ್ಧಿಯನ್ನು ಯಾರೂ ಬಯಸಿಲ್ಲ. ಇದು ಸಮಾಜ, ಜನ ಸಮುದಾಯಗಳು ಹಿತಾಶಕ್ತಿಗೆ ಒಳಪಟ್ಟಿರುವುದನ್ನು ತೋರಿಸುತ್ತಿದೆ. ಇದು ಸಾಮ್ರಾಜ್ಯಶಾಹಿ ನಶಿಸಿದ ನಂತರದ ದಿನಗಳ ಅದರ ಹೊಸ ರೂಪ.
ಇಡೀ ಜೀವ ಸಂಕುಲಕ್ಕೆ ಎದುರಾಗಬಹುದಾದ ಅಪಾಯಗಳ ಕುರಿತಾಗಿ ಸರ್ಕಾರಗಳು ಯೋಚಿಸಿಲ್ಲ. ಅಲ್ಲೊಂದು ಇಲ್ಲೊಂದು ಹನಿಗಳಂತೆ ಭಾಸವಾಗುವ ಸಮಾವೇಶಗಳು ಇಂತಹ ಪರಿಸ್ಥಿತಿಗಳ ವಿರುದ್ಧ ಎಲ್ಲೊ ಒಂದೊಂದು ಅಲ್ಲಲ್ಲಿ ನಡೆದಿವೆ. ಸಮಗ್ರವಾಗಿ ನಡೆದಿಲ್ಲ. ಹಿಂದೆ, ಜಪಾನಿನ ನೆಲದಲ್ಲಿ ಭೂಮಿಯನ್ನೆ ಫಲವತ್ತುಗೊಳಿಸಿ, ಅಲ್ಲಿದ್ದ ಪ್ರತಿಕೂಲ ಪರಿಸರ ವ್ಯವಸ್ಥೆಯನ್ನು ದಾಟಿ, ತನ್ನ ತಾಳ್ಮೆ, ಪರಿಶ್ರಮ, ಜಾಣ್ಮೆಯಿಂದ ಬೆಳೆಗಳನ್ನು ಬೆಳೆದು ಮಾದರಿಯಾದ ’ಪುಕೊಕಾ’ನಂತವರು ಮಾದರಿಯಾಗಬೇಕಿದೆ.

ಸ್ವತಃ ಪುಕೊಕಾ ಅವರು ಜಾಗತೀಕರಣ ಮಾರುಕಟ್ಟೆಗಳಿಂದ ಬರುತ್ತಿದ್ದ ಯಾವುದೇ ಕೀಟನಾಶಕಗಳನ್ನು ಬಳಸದೆಯೇ, ನೆಲವನ್ನಲ್ಲದೆ ಬೇರಾವುದನ್ನು ಅವಲಂಬಿಸದೆ ’ಸಹಜ ಕೃಷಿ’ಯನ್ನು ಮಾಡಿದರು. ಪುಕೊಕಾ ಅವರಿಗೆ ಪ್ರಕೃತಿ ಮತ್ತು ಅಂದಿನ ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ಇದ್ದಂತಹ ಅರಿವು ಮತ್ತು ಕಾಳಜಿಯನ್ನು ಸಂಕೇತಿಸುತ್ತದೆ. ಈ ನಿಟ್ಟಿನಲ್ಲಿ ಜನರು ಮತ್ತು ಸರ್ಕಾರಗಳು ಕ್ರಿಯಾತ್ಮಕ ಕೆಲಸಗಳತ್ತ ಮುಂದಾಗಬೇಕಿದೆ.
ಸಾಮಾಜಿಕ ವಾತಾವರಣ & ಪರಿಸರ ಕಾಳಜಿ ಎಂಬ ಪದವನ್ನು ಇತ್ತೀಚಿನ ಕೆಲ ವರ್ಷಗಳ ಹಿಂದೆ ಬಳಸಬಹುದಾಗಿದ್ದ ವಾತಾವರಣದಲ್ಲಿ ನಾವೀಗ ಇಲ್ಲ. ತೀರಾ ಸಂಕಷ್ಟಮಯವಾದ ಪರಿಸ್ಥಿತಿಯಲ್ಲಿದ್ದೇವೆ. ಅವೈಜ್ಞಾನಿಕ, ವೈಚಾರಿಕತೆಯಿಲ್ಲದ ಪರಿಧಿಗಳನ್ನು ವಿಸ್ತರಿಸಿಕೊಂಡಿದ್ದೇವೆ. ಖನಿಜಗಳನ್ನು ಬಳಸಿಕೊಳ್ಳುವ ಭರದಲ್ಲಿ, ಭೂಮಿಯಲ್ಲಿದ್ದ ಸಹಜ ರೀತಿಯ ಪ್ರಕೃತಿಯನ್ನೆ ದಹನಮಾಡಿದ್ದಾಗಿದೆ. ಯಾರೂ ಮಾಡಿದರೂ? ಎಂಬುದನ್ನು ಕೇಳಲೇಬೇಡಿ! ಇದು ಎಲ್ಲರ ತಪ್ಪಾಗಿ ಪರಿಣಮಿಸಿಯಂತೂ ಆಗಿದೆ. ಈಗಾಗಲೇ ಭೂಮಿಯಿಂದ ಅನೇಕ ಜೀವ ಪ್ರಭೇದಗಳು ಶಾಶ್ವತವಾಗಿ ನಶಿಸಿಹೋಗಿವೆ. ಇದು ತಂತ್ರಜ್ಞಾನ, ಆಧುನಿಕತೆ, ಜಾಗತೀಕರಣದ ಉಪಮೇಯಭರಿತ ನಾನಾವಿಧದ ಯೋಜನಾ ಮಾದರಿಗಳಿಂದ ಇಂತಹ ಸಾಧನೆ ಸಾಧ್ಯವಾಗಿದೆ.
ಇಷ್ಟೆಲ್ಲಾದ್ದರಿಂದ, ಇನ್ನಾದರೂ ಎಚ್ಚರಗೊಳ್ಳಬೇಕಾದ ಯುವಸಮುದಾಯ ದಿಕ್ಕೆಟ್ಟಿದೆ. ಯುವ ಸಮುದಾಯವು ಎದುರಿಸುತ್ತಿರುವ ಸಮಸ್ಯೆ ಒಂದೆರಡಲ್ಲ. ಯುವಕರನ್ನ ಸರಕನ್ನಾಗಿ ರೂಪಿಸಬಲ್ಲ ಶಿಕ್ಷಣದಿಂದ ಹಿಡಿದು, ಯುವಸಮುದಾಯವನ್ನೆ ದಾಳವಾಗಿ ಪ್ರಯೋಗಿಸಬಲ್ಲ ನಿಷ್ಣಾತರ ಗುಲಾಮರಾಗುವ ತನಕ, ಜತೆಗೆ ಕೊಳ್ಳುಬಾಕು ಸಂಸ್ಕೃತಿಯಲ್ಲಿ ಯಾವುದೊ ಹೆಸರಿಡದ ಖಾಯಿಲೆಗೆ ತುತ್ತಾಗಿ ಸಾವನ್ನಪ್ಪುವ ತನಕವೂ ಆವರಿಸಿದೆ.

ಯುವ ಸಮುದಾಯವನ್ನು ಕೋಚಿಂಗ್ ಸೆಂಟರ್‌ಗಳು ತಿಂದು ತೇಗಿವೆ. ನೂರಿನ್ನೂರು ಇರುವ ಉದ್ಯೋಗಗಳಿಗೆ ಲಕ್ಷಾಂತರ ಮಂದಿ ಅರ್ಜಿ ಹಾಕುವ ಏಕೈಕ ಅವಕಾಶಕ್ಕೆ ಪದವಿ ಪಡೆದ ಯುವಕರನ್ನು ಮರಿ ಕುರಿಗಳನ್ನಾಗಿ ಪರಿವರ್ತಿಸಿ ಲೂಟಿ ಮಾಡಲಾಗುತ್ತಿದೆ. ಜೊತೆಗೆ ಸಾಮಾಜಿಕ ವಾಸ್ತವವನ್ನು ಅರ್ಥಮಾಡಿಕೊಳ್ಳದ ಹಾಗೆ ಯುವಕರನ್ನು ಭ್ರಮೆಯಲ್ಲಿಡಲಾಗಿದೆ. ತಳಸಮುದಾಯಗಳಿಗೆ ಸಿಕ್ಕ ಕೇವಲ ಪ್ರಾತಿನಿಧ್ಯವನ್ನೆ ಸರಿಯಾದ ತಿಳುವಳಿಕೆಯಿಲ್ಲದೆ ತುಚ್ಚವಾಗಿ ಪ್ರಶ್ನಿಸುವಂತೆ ತಯಾರಾಗುವ ಪರಿ ನಮ್ಮ ಶಿಕ್ಷಣದ ಅರಿವನ್ನು ಕಿರಿದಾಗಿದೆ ಎನ್ನವುದರ ಒಂದು ಉದಾಹರಣೆಯಷ್ಟೆ.

ಇಂತಹ ಅನೇಕ ಸಮಸ್ಯೆಗಳು ಯುವ ಸಮುದಾಯವನ್ನು ಕಾಡುತ್ತಿವೆ. ಯುವಕ-ಯುವತಿಯರ ಸಮೂಹ ಕಾರ್ಖಾನೆಯಲ್ಲಿರುವ ಯಂತ್ರ ಬಿಡಿಭಾಗದಂತೆ ವರ್ತಿಸುತ್ತಾ, ಆಲೋಚಿಸುತ್ತಾ ಸಾಗಿದೆ. ಹಾಗಾಗಿಯೆ ಅಕ್ಷರಸ್ಥರು ವಿದ್ಯಾವಂತರಾಗದೆ (ಪರಿಣತ ಕುಶಲ ವರ್ಗವಾಗದೆ) ಇರುವುದು ಮತ್ತೊಂದು ಕಾರಣ. ಇದರಿಂದ ಅನುತ್ಪಾದಕತೆ ತಾಂಡವ ಆಡುತ್ತಿದೆ. ಕೊಳ್ಳುವವರು, ತಿನ್ನುವವರು ಹೆಚ್ಚೆಚ್ಚು ಆಗಿದ್ದಾರೆ. ಇದರಿಂದಾಗಿಯೆ ಉತ್ಪಾದಕ ವರ್ಗದ ಶಕ್ತಿ ಕ್ಷಿಣಿಸುತ್ತಿದೆ. ಪರಿಸರದ ಕಾಳಜಿಗಳನ್ನು ಹೊತ್ತ ಯೋಜನೆಗಳನ್ನು ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಇರಬೇಕು. ಅದನ್ನು ಅನುಷ್ಠಾನಕ್ಕೆ ತರುವಂತೆ ಆಗಬೇಕು. ಈ ಮೂಲಕ ಭವಿಷ್ಯದಲ್ಲಿ ಎದುರಾಗುವ ಆಪತ್ತುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬೇಕು.

ರಾಜಕೀಯ ಪಕ್ಷಗಳಲ್ಲಿ ಪರಿಸರ ಕುರಿತಾದ, ದೇಶ ಎಲ್ಲಾ ಜನರು ಒಳಗೊಳ್ಳಬೇಕಾದ ಯೋಜನೆಗಳು ಸರ್ಕಾರದಿಂದ ಪ್ರಾಯೋಜಿತಗೊಳ್ಳಬೇಕು. ರೈತವಿರೋಧಿ, ಪರಿಸರ ವಿರೋಧಿ ಯೋಜನೆಗಳನ್ನು ಧಿಕ್ಕರಿಸಿ, ರೈತರು, ದಲಿತರು, ಮಹಿಳೆಯರು, ಆದಿವಾಸಿ ಬುಡಕಟ್ಟು ಸಮುದಾಯಗಳೆಲ್ಲವೂ ಸಮಗ್ರವಾಗಿರಬೇಕು. ಜೊತೆಗೆ, ಮನು?ನ ಸಹವರ್ತಿಗಳಾದ ಪ್ರಾಣಿ-ಪಕ್ಷಿಗಳಿಗೂ ಅನುಕೂಲಕರ ವಾತಾವರಣ ಸೃಷ್ಟಿಯಾಗಬೇಕಾದ ಕಾನೂನು, ಕಾಯ್ದೆಗಳ, ಅವುಗಳ ನೇರಾನು?ನ ಅನಿವಾರ್ಯ. ಹೀಗೆ, ನಮ್ಮ ಆಲೋಚನೆಗಳು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಉಳಿಸಿಕೊಳ್ಳಲು ಮುಂದಾಗಬೇಕಿದೆ. ಅದು ಸಾಮಾಜಿಕ ಪರಿಸರವಾಗಿರಬಹುದು, ಪ್ರಾಕೃತಿಕ ಪರಿಸರವಾಗಿರಬಹುದು. ಇವೆರಡರ ಆರೋಗ್ಯವು ಕೆಡದಂತೆ ಕಾಲಕಾಲಕ್ಕೆ ನಿಗಾವಹಿಸಬೇಕಿದೆ. ವ್ಯಕ್ತಿಯಿಂದಿಡಿದು ಸಮಾಜವೆಲ್ಲವೂ ವಿವಿಧ ಜೀವ ಸಮುದಾಯಗಳ ಹಿತ ಕಾಯಬೇಕಿದೆ. ಇಂತಹ ಜವಾಬ್ದಾರಿಯನ್ನು ಸ್ವತಃ ಸರ್ಕಾರಗಳು ಕೈಗೊಳ್ಳಬೇಕು. ಜನರು ಜಾಗೃತರಾಗಬೇಕು. ಪ್ರಕೃತಿಕೇಂದ್ರಿತ, ಜೀವಕೇಂದ್ರಿತ ರಾಜಕೀಯವನ್ನು ರೂಢಿಗೊಳ್ಳಬೇಕಿದೆ. ಸಮಾಜವಾಗಲಿ, ಪರಿಸರವಾಗಲಿ ಧಿಡೀರನೆ ವೈಪರೀತ್ಯಕ್ಕೆ ಒಳಗಾಗಿ ನಾಶವಾಗುವ, ಅಸಮತೋಲನದಿಂದ ದಿಕ್ಕೆಡುವುದನ್ನು ತಪ್ಪಿಸಬೇಕಿದೆ. ಇದು ಇಂದಿನ ತುರ್ತು.
ರಾಜಕೀಯವನ್ನು ಪರಿಪೂರ್ಣ ಪ್ರಕೃತಿಯಲ್ಲಿ ಹುಡುಕಬೇಕಿದೆ. ಮಾನವ ಜನಾಂಗಕ್ಕೆ ಪ್ರಕೃತಿಯಿಂದ ಸಾಮರಸ್ಯ, ಸಹಿಷ್ಣುತೆ, ಸಮಾನತೆಗಳು ಹತ್ತಿರವಾಗುತ್ತವೆ. ಅವು ದಾರಿದೀಪವಾಗಿ ಎಲ್ಲರನ್ನೂ ಕೊಂಡಯ್ಯುತ್ತವೆ.

ರಾಜೇಶ್
ಸಂಶೋಧನಾ ವಿದ್ಯಾರ್ಥಿ
ಮಾನಸ ಗಂಗೋತ್ರಿ, ಮೈ ವಿ ವಿ, ಮೈಸೂರು.
ಪೋನ್ ನಂಬರ್: ೯೧೪೮೯೦೫೨೧೯