ಗುರುದೇವೋಭವ: ಸ್ಮರಿಸುವುದರ ಮುಖೇನ ಭಾರತೀಯ ಪರಂಪರೆಯಲ್ಲಿ ಮಾತೃದೇವೋಭವ: ಪಿತೃದೇವೋ ಭವ: ನಂತರದ ೩ನೇ ವಂದನಾಸ್ಥಾನವನ್ನು ಗುರುವಿಗೆ ನೀಡಲಾಗಿದೆ. ಆಧ್ಯಾತ್ಮಿಕವಾಗಿ ’ಗುರುರ್‌ಬ್ರಹ್ಮ.., ಗುರುರ್‌ವಿಷ್ಣು..., ಗುರು ದೇವೋ ಮಹೇಶ್ವರ: ಗುರುಸಾಕ್ಷಾತ್ ಪರಬ್ರಹ್ಮ: ತಸ್ಮೈಶ್ರೀ ಗುರವೇನಮ:’ ಪ್ರಾರ್ಥಿಸುತ್ತ ತ್ರಿಮೂರ್ತಿ ನಂತರದ ಸ್ಥಾನ ನೀಡಲಾಗಿದೆ. ಪುರಾಣೇತಿಹಾಸಿಕವಾಗಿ, ರಾಜಕೀಯವಾಗಿ ಸಾಮಾಜಿಕವಾಗಿ ಎಲ್ಲಿಲ್ಲದ ಗೌರವ, ಮಾನ್ಯತೆ ಗುರುವಿಗಿದೆ. ’ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಹಾಡಿ ಹೊಗಳಿದ ದಾಸವರೇಣ್ಯರು ಎಷ್ಟುಶ್ರೇಷ್ಟರೊ ಅದನ್ನು ಪರಿಪಾಲಿಸುವವರೂ ಅಷ್ಟೆಶ್ರೇಷ್ಟರು. ’ಅಕ್ಷರಂಏವಂ ಕಲಿಸಿದಾತಂಗುರು’ ಒಂದೇಅಕ್ಷರ ಕಲಿಸಿದವನೂ ಗುರುಆಗುತ್ತಾನೆ. ಶಿಕ್ಷಕ ಉಪನ್ಯಾಸಕ ಮೇಷ್ಟ್ರು, ಅಧ್ಯಾಪಕ ಆಚಾರ್ಯ ಪ್ರವಾಚಕ ಪ್ರಾಧ್ಯಾಪಕ ಪ್ರಾಚಾರ್ಯ ಹತ್ತಾರು ಪದನಾಮಗಳಿಂದ ಗುರುತಿಸುತ್ತಾರೆ. ಅನಂತ ಅನರ್ಘ್ಯ ಅಮೋಘ ಅಧ್ಭುತ ಅಮರ ಅಪರಿಮಿತ ಅಸಾಮಾನ್ಯ ಮುಂತಾದ ಅಗಣಿತ ವ್ಯಾಖ್ಯಾನ ನೀಡುವಂಥದ್ದು ಗುರು ಎಂಬುದರ ನಿಜಾರ್ಥ?! ಅನರ್ಥ ಅಪಾರ್ಥ ಅಸಮರ್ಥ ಅಸಾಧ್ಯ ಕ್ಲಿಷ್ಟ ಕ್ಷುಲ್ಲಕ ಇತ್ಯಾದಿ ಸಮಸ್ಯೆಗಳಿಗೆ ಮತ್ತು ಏಕಚಿತ್ತ, ದ್ವೈತಾದ್ವೈತ, ತ್ರಿಕರಣಶುದ್ಧಿ, ಚತುಷ್‌ದಿಕ್ಕು, ಪಂಚಭೂತ ಅರಿಷಡ್‌ವರ್ಗ, ಸಪ್ತಸ್ವರ, ಅಷ್ಟಭೋಗ-ಭಾಗ್ಯ, ನವ[ಗ್ರಹ]ರಸ ದಶಮಸಿರಿಸೊಬಗು ಏಕಾದಶತೃಪ್ತಿ ದ್ವಾದಶಮುಕ್ತಿ ಹಾಗೂ ಶಿಷ್ಟರಕ್ಷಕ-ದುಷ್ಟಶಿಕ್ಷಕ ಇವೆಲ್ಲದರ ಸಾರಾಂಶ ಎಳೆ ಎಳೆಯಾಗಿ ಕೂಲಂಕಶವಾಗಿ ತಿಳಿಹೇಳುವ ಪೂರ್ಣಕುಂಭ ಪರಿಪೂರ್ಣ ಸುರಭಿಯೆ-ಗುರುಮಹಾತ್ಮೆ !

ಆಚಾರ್ಯನೆಂದರೆ ಜಠಿಲ-ಜರ್ಝರ ಗಾದೆ-ಒಗಟುಗಳನ್ನು ತಾನು ಮೊದಲು ಅರ್ಥೈಸಿಕೊಂಡು ನಂತರ ಅವುಗಳನ್ನು ಸಡಿಲವಾಗಿ ಬಿಡಿಸುವಂತೆ ಶಿಷ್ಯರಿಗೆ ತರಬೇತಿ ನೀಡುವವನು. ತಾತ್ವಿಕ, ಪ್ರಾಯೋಗಿಕ ಶಿಕ್ಷಣದ ಜೊತೆಗೆ ಪಠ್ಯ-ಪಠ್ಯೇತರ ಚಟುವಟಿಕೆಯನ್ನು ಸರಿಯಾಗಿ ಕಲಿಸಿಕೊಡುವವನು. ಅದ್ಭುತ, ಆಶ್ಚರ್ಯ, ನವ್ಯ, ಭವ್ಯ, ತನಿಖೆ, ಪತ್ತೇದಾರಿ ಉನ್ನತಾಧ್ಯಯನ, ಸಂಶೋಧನೆಗಳ ಮಾರ್ಗದರ್ಶಕನು. ಅಸಂಖ್ಯಾತ ಕಗ್ಗಂಟು ಕಠಿಣ ಪದಗಳಿಗೆ ಕೋಟ್ಯಾಂತರ ನವ ಪದ-ವಾಕ್ಯಗಳಿಗೆ ಪರಮ ನಿಘಂಟು! ಪಾಪಪುಣ್ಯ, ಧರ್ಮಾಧರ್ಮ, ಸತ್ಯಾಸತ್ಯತೆ, ಅರ್ಥಾನರ್ಥಗಳನ್ನು ರುಜುವಾತು ಪಡಿಸುವ ಪವಿತ್ರಗ್ರಂಥ ಅಧ್ಯಾಪಕ. ಜಗತ್ತಿನ ಯಾವುದೆ ಭಾಷೆಯ ಸ್ವರ-ವ್ಯಂಜನ-ವ್ಯಾಕರಣಗಳ ಬಗ್ಗೆ ವಾಚಾಮಗೋಚರವಾಗಿ ಪದಪುಂಜದ ಪದೋಚ್ಛಾರಣೆಯ, ಪ್ರಯೋಗವನ್ನು ಪರಿಪೂರ್ಣವಾಗಿ ಪರಿಪಕ್ವವಾಗಿ ಮನನಮಾಡಿಸುವ ಮಹೋಪಾಧ್ಯಾಯನು. ಯಾವುದೆ ಒಂದು ಭಾಷಾ ಜ್ಞಾನ ಬೋಧಿಸಿದ ನಂತರ ಅದನ್ನು ಸರಾಗವಾಗಿ ಸರಳವಾಗಿ ಸಂದರ್ಭೋಚಿತವಾಗಿ ತಾತ್ಪರ್ಯಗೊಳಿಸುವ ಕಲೆಯನ್ನು ಕಲಿಸುವ ತಜ್ಞ. ಗೀತ-ಸಂಗೀತ-ನಾಟ್ಯ-ನಟನೆ(ಕುಂಚ/ಶಿಲ್ಪ)ಕಲೆ-ವಾದ-ವಿವಾದ-ತರ್ಕ-ನೀತಿ-ರೀತಿ ವಾಕ್ಪಟುತನ ಮುಂತಾದ ಶಿಕ್ಷಣ ಕಲೆ ಕಲಿಸುವ ಸಕಲ ಕಲಾವಲ್ಲಭ ಆಗಿರುವವನೇ ಗುರು.
೬೪ ವಿದ್ಯೆಗಳನ್ನು ’ಗುರು-ಶಿಷ್ಯ’ ಎಂಬ ನಿರಂತರ ಬೃಹತ್ ಕಾಲಚಕ್ರದೊಳಗೆ ಒಬ್ಬರಿಂದ ಮತ್ತೊಬ್ಬರು, ಮತ್ತೊಬ್ಬರಿಂದ ಮಗದೊಬ್ಬರು ಪರಸ್ಪರ ಕಲಿತು-ಕಲಿಸುವ ಮನಸ್ಸಿರಬೇಕು. ಗುರುವಾದವನು ಪ್ರಕೃತಿಯಲ್ಲಿರುವ ಸಹಜ ಕ್ರಿಯೆ-ಪ್ರಕ್ರಿಯೆಗಳಿಗೆ ಸ್ಪಂದಿಸಬೇಕು.ಆಯಾ [ಪ್ರ]ದೇಶದ ಭೌಗೋಳಿಕ ಲಕ್ಷಣಕ್ಕೆ ಅಥವಾ ಮಾನವ-ಮಾನವ ನಡುವಣ ಭೌತಿಕ-ಬೌದ್ಧಿಕ ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳಬೇಕು. ಜೀವನಹಾದಿಯಲ್ಲಿ ಎದುರಾಗುವ ಕಷ್ಟ-ನಷ್ಟ, ಕೋಪ-ತಾಪ, ಭೋಗ-ತ್ಯಾಗ ಸಮನಾಗಿ ಸ್ವೀಕರಿಸಲು ಸಿದ್ಧನಿರಬೇಕು. ನಿಸ್ವಾರ್ಥದಿಂದ ಸತ್ಯಕ್ಕೆ ತಲೆಬಾಗಿ ಎಲ್ಲರಿಂದ ಸೈಎನಿಸಿಕೊಳ್ಳಬೇಕು ಎಂಬುದೆಲ್ಲವನ್ನು ಕಲಿಸಿ ಧನ್ಯನಾಗುವುದರ ಜತೆಗೆ ಆಪತ್ಕಾಲದಲ್ಲಿ ತನ್ನಂತಾನು ರಕ್ಷಿಸಿಕೊಳ್ಳಲು ಬೇಕಾದ ೬೫ನೆ ವಿದ್ಯೆಯನ್ನೂ ಕಲಿತು-ಕಲಿಸಿ ಕೊಡಬೇಕು. ಪ್ರಪಂಚದ ಪ್ರತಿಯೊಂದು ಸಾಧನೆ-ಬೋಧನೆಯ ಸಂಗಮವಾಗಿ ನಿಸ್ವಾರ್ಥಿ ನಿಷ್ಪಕ್ಷಪಾತಿ ಜಾತ್ಯಾತೀತನಾಗಿರಬೇಕು. ಸಮಯಸಾಧಕ ಸಮಾಜಕಂಟಕ ನಯವಂಚಕ ಗುರು(ಶಿಷ್ಯ)ದ್ರೋಹಿ ದೇಶದ್ರೋಹಿ ಬಂಧು-ಮಿತ್ರದ್ರೋಹಿ ಮುಂತಾದ ದ್ರೋಹಿಗಳಿಂದ ದೂರವಿದ್ದು-ದೂರವಿರಿಸಬೇಕು.ಆಗಮಾತ್ರ ದಿ[ಟ್ಟ]ಟಗುರುಎನಿಸಿಕೊಳ್ಳಲು ಯೋಗ್ಯ. ಇಲ್ಲವಾದರೆ ಅನ್ಯಾಯವಾಗಿ ಶಿಷ್ಯರಿಂದಲೇ ವಂಚನೆ ದ್ರೋಹಗಳಿಗೆ ಗುರಿಯಾಗಿ ಅಕಾಲ ಮೃತ್ಯುವಿಗೆ ಬಲಿಪಶುವಾಗುತ್ತಾನೆ.
’ವಿದ್ಯೆ’ ಬಗ್ಗೆ ವಿಶ್ವಕವಿ ಕುವೆಂಪು ಹೀಗೆ ವ್ಯಾಖ್ಯಾನಿಸಿದ್ದಾರೆ: ವಿದ್ಯೆಯೆಂಬುದು ಪ್ರಶ್ನೆಯಿಂದ ಆಶ್ಚರ್ಯದೆಡೆಗೆ ಪುನ: ಆಶ್ಚರ್ಯದಿಂದ ಪ್ರಶ್ನೆಯೆಡೆಗೆ ಚಲಿಪ ನಿರಂತರ ಪ್ರಕ್ರಿಯೆ. ನಿರಂತರ ಪ್ರಕ್ರಿಯೆಯಿಂದಲೆ ಪರಿಪೂರ್ಣತೆಯು ಪ್ರಾಪ್ತವಾಗುತ್ತದೆ ಎಂಬುದು ರಾಷ್ಟ್ರಕವಿ ಅಭಿಮತ. ಅಂತೆಯೆ ಸರ್ವಪಲ್ಲಿ ರಾಧಾಕೃಷ್ಣನ್: ಮಿಯರ್ ಇನ್‌ಫ಼ರ್ಮೇಶನ್ ಈಸ್ ನಾಟ್ ನಾಲೆಡ್ಜ್ ಅಂಡ್ ಮಿಯರ್ ನಾಲೆಡ್ಜ್ ಈಸ್ ನಾಟ್ ವಿಸ್‌ಡಮ್ ಎಂದು ಘೋಷಿಸಿದ್ದಾರೆ. ಗುರುವು ಪ್ರತಿಯೊಬ್ಬ ಶಿಷ್ಯನ ಜೀವನಕಟ್ಟಡಕ್ಕೆ ಅಡಿಪಾಯ ಹಾಕಬೇಕು, ಸಕಲ ಶಶ್ತ್ರಾಅಸ್ತ್ರ ವಿದ್ಯೆಯನ್ನು ನಿರ್ವಿವಾದಿತ-ನಿರ್ಭಯವಾಗಿ ಸಕಾಲಕ್ಕೆ ಕಲಿಸುವ ಪಾರಂಗತ ಆಗಿರಬೇಕು. ಪಠ್ಯದ ಜತೆಯಲ್ಲಿ ಪಶು,ಪ್ರಾಣಿ,ಪಕ್ಷಿ,ಸಂಕುಲ ಮುಂತಾದ ರಾಷ್ಟ್ರದ ಪತ್ತು-ಸಂಪತ್ತುಗಳ ಸದು(ದುರು)ಪಯೋಗ, ಅದರಿಂದಾಗುವ ಆ[ವಿ]ಪತ್ತುಗಳ ಪರಿಚಯ ಮಾಡಿಕೊಡಬೇಕು. ಸಮಾಜ/ಕಾನೂನು ಬಾಹಿರ ಚಟುವಟಿಕೆಗಳಿದ ಉಂಟಾಗುವ ನ(ಕ)ಷ್ಟಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು.
ಗುರುವಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿಯೂ/ಸರ್ವನಾಶವೂ ಆಗಬಹುದು. ಗುರು-ಶಿಷ್ಯರು ಸರಿಯಿದ್ದರೆ ಮಾತ್ರ ದೇಶ-ಕೋಶ ಸರಿಯಿರುತ್ತದೆ, ದೇಶ-ಕೋಶವು ಸರಿಯಿದ್ದರೆ ಪಾಳುಬಿದ್ದ ದೇಶವನ್ನೂ ಪುನರ್ನಿರ್ಮಾಣ ಮಾಡಬಹುದು. ಇಲ್ಲವಾದರೆ ಕಾಗೆ-ಗೂಬೆಗಳ ಬೀಡಾಗುತ್ತದೆ! ಯಥಾ ಗುರು-ತಥಾ ಶಿಷ್ಯ, ಯಥಾ ರಾಜ-ತಥಾ ಪ್ರಜಾ ನಾಣ್ಣುಡಿಯನ್ನು ಎಲ್ಲರೂ ಈಗಲೂ ಒಪ್ಪುವುದು ಅನಿವಾರ್ಯ. ಗುರುವೆಂಬ ಮಹಾಶಕ್ತಿಯು ಸಮಯೋಚಿತವಾಗಿ ಯುಕ್ತಿ-ಕುಯುಕ್ತಿ, ಸಂದರ್ಭೋಚಿತವಾಗಿ ಉಪಾಯ-ಕುಟಿಲೋಪಾಯ ಕಲಿಸಿ ಕೊಡುವ ಮೇಧಾವಿಯೂ ಹೌದು! ಅಕ್ಷರಜ್ಞಾನದ ಮೂಲಕ ಕೋಟಿ ಕೋಟಿ ವಿದ್ಯೆ-ಬುದ್ಧಿ ಕಲಿತರೂ ಒಂದಾಗಿ ಬಾಳುವುದನ್ನು ಕಲಿಸುವ ನೂರಾರು ಜಯಾಪಜಯ ಹೊಂದುವ, ಸಹಸ್ರಾರು ಶಕ್ತಿ-ಭಕ್ತಿ-ಮುಕ್ತಿ ಗಳಿಸುವ ಬಗ್ಗೆ ನಾಂದಿ ಹಾಡುವ ರೂವಾರಿ. ಎಲ್ಲ ಕಾಲದಲ್ಲೂ ಸುಗುಣ ಗುರು-ಸುಶೀಲ ಶಿಷ್ಯ ಅಥವಾ ಪರಮ ಗುರು-ಪವಿತ್ರ ಶಿಷ್ಯ ವರ್ಗವು ಯಥೇಚ್ಚವಾಗಿ ಕಂಡು ಬಂದರೂ ಅಲ್ಲಲ್ಲಿ ’ಚೋರ್ ಗುರು-ಚಂಡಾಲ ಶಿಷ್ಯ’ಎಂಬುವ ವಿನಾಶಕಾರಿ ಪಂಗಡವೂ ಅಸ್ತಿತ್ವದಲ್ಲಿರುವುದು ವಿಚಿತ್ರ ಸತ್ಯ ಸಂಗತಿ! ಇತ್ತೀಚೆಗೆ ’ಬೋರ್ ಗುರು – ಭಂಡ ಶಿಷ್ಯ’ ಎನ್ನುವ ನವೋದಯ ಶಕ್ತಿಯೂ ಉದ್ಭವಿಸಿರುವುದು ’ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ’ ಆಗಿ ಹಿಂದೆಂದಿಗಿಂತ ಇ[ಮು]ಂದಿನ ದಿನಗಳಲ್ಲಿ ಇಂಥ ಪಟಾಲಂ ಸಂಖ್ಯೆ ಶೇಕಡಾವಾರು ಹೆಚ್ಚುತ್ತಲೆಇದೆ! ಯಾರುಗುರು? ಯಾರುಶಿಷ್ಯ? ಗುರುತಿಸಲೂ ಸಾಧ್ಯವಿಲ್ಲದಷ್ಟು ಹೀನಾಯಸ್ಥಿತಿ ತಲುಪಿ ಕಾಲನಿರ್ಣಯವೆ ಗತಿ ಎನ್ನುವಂತಾಗಿದೆ. ಗುರು-ಶಿಷ್ಯರು ಭೇಟಿಯಾದಾಗ ಹಾಯ್-ಬಾಯ್, ಕಾರ್-ಬಾರ್, ಪಿಜ಼ಾ-ಬರ್ಗರ್, ಜೆರಾಕ್ಸ್‌ನೋಟ್ಸ್, ಲ್ಯಾಪ್‌ಟಾಪ್-ಪೆನ್‌ಡ್ರೈವ್, ಆಡಿಯೊ-ವೀಡಿಯೊ, ಇಯರ್ಫ಼ೋನ್-ಮೊಬೈಲ್-ಟ್ಯಾಬ್ಲೆಟ್-ಇಂಟರ್‌ನೆಟ್ ಮುಂತಾದ್ದನ್ನು ಅಗತ್ಯಕ್ಕಿಂತ ಹೆಚ್ಚು ಬಳಸುವಲ್ಲಿ ತಲ್ಲೀನರಾಗಿದ್ದಾರೆ. ಕೆಲವರಂತೂ ಅಡ್ಡಿಕ್ಟ್ ಮಟ್ಟ ತಲುಪಿರುವುದುಂಟು! ಅಧ್ಯಾಪಕ-ವಿದ್ಯಾರ್ಥಿ ಜೀವನಕ್ಕೆ ಅಂದು-ಇಂದು-ಮುಂದು? ವಿದ್ಯಾರ್ಜನೆಗೆ ಅವಶ್ಯವಾದ, ಧೀರ್ಘಬಾಳಿಕೆಯ, ಎಲ್ಲರಿಗೂ ಎಟುಕುವ, ಆಪ್ಯಾಯಮಾನ ಆರೋಗ್ಯಕರವಾದ ಪೆನ್ನು ಹಾಳೆ ನೋಟ್ ಬುಕ್ ಟೆಕ್ಸ್ಟ್ ಬುಕ್ ಡಿಕ್ಷನರಿ ಗೈಡ್ ಜಾಮಿಟ್ರಿ, (ರಾಮನಾಮ ಕಾಪಿಪುಸ್ತಕ) ಕೈಬರಹ ಕಾಣದಂತೆ ಮಾಯವಾದವು. ಮುಂಜಾನೆ ಮತ್ತು ಗೋಧೂಳಿ ಸಮಯದ ಕಾಗುಣಿತ ಓದು, ಮಗ್ಗಿ-ಪದ್ಯ ಕಂಠಪಾಠ-ಮನೆಪಾಠ, ಸಮೂಹಾಭ್ಯಾಸ, ಮುಂತಾದ ಶಾಶ್ವತ ಪದ್ಧತಿಗಳು ಇತಿಹಾಸದ ಪುಟ ಸೇರಿದವು! ವಯೋಮಾನಕ್ಕೆ ತಕ್ಕಂತೆ ವಿದ್ಯಾಬುದ್ಧಿ ನಡೆನುಡಿ ಕಲಿತು ಗುರುಹಿರಿಯರನ್ನು ಗೌರವಿಸಿ ತಾಯಿತಂದೆ, ಸೋದರಸೋದರಿ, ಬಂಧುಬಳಗ, ನೆರೆಹೊರೆ, ನೆಂಟರಿಷ್ಟರ ಬುದ್ಧಿವಾದ, ದೇಶಸುತ್ತಿ ಕೋಶಓದಿ ಸುಜ್ಞಾನ ಅಳವಡಿಸಿಕೊಳ್ಳುವ ಸಂಸ್ಕಾರ, ಸೂರ್ಯೋದಯಕ್ಕೆ ಮುನ್ನ ನಿದ್ದೆಯಿಂದೆದ್ದು ವ್ಯಾಯಾಮ ಅಭ್ಯಾಸ, ಮನೆಕೆಲಸದಲ್ಲಿ ನೆರವು, ಮುಂತಾದ ಸನ್ನಡತೆ-ಸುಬುದ್ಧಿ ಗೋರಿ ಸೇರಿಕೊಂಡವು! ಆದ್ದರಿಂದಲೆ ವಯೋಧರ್ಮಕ್ಕೆ ಅನುಗುಣವಾಗಿ ಕಲಿಕೆ-ಗಳಿಕೆ ಮಾಡಲಾಗುತ್ತಿಲ್ಲ, ಸಕಾಲಕ್ಕೆ ವಿವಾಹದ ಮಕ್ಕಳ ಭಾಗ್ಯ ದೊರಕುತ್ತಿಲ್ಲ, ಅಕಾಲ ಮರಣಕ್ಕೆ ತುತ್ತಾಗುತ್ತಿರುವರು ಎಲ್ಲ! ಗುರು-ಶಿಷ್ಯರು ಪರಸ್ಪರ ಘನತೆ-ಗೌರವ ವಿನಿಮಯ ಮಾಡಿಕೊಳ್ಳುವ ಸುಗುಣತನ ಮರೆಯಾಗಿ ಅಸಡ್ಡೆ-ಉದಾಸೀನತೆ ಮ[ನ]ನೆ ಮಾಡಿಕೊಂಡಿರುವುದು ಖಂಡಿತ ಆತಂಕಕಾರಿ ಬೆಳವಣಿಗೆ.ಇಂಥವರಿಂದಲೆ [ವಿ]ದೇಶಗಳ ಪ್ರಗತಿ ಅವನತಿಯಂಚಿಗೆ ಹೋಗುತ್ತಿದೆ. ಸಂಸ್ಕೃತಿ-ನಾಗರಿಕತೆ, ಜ್ಞಾನ-ವಿಜ್ಞಾನ ವಿನಾಶದಮಧ್ಯೆಯಿದ್ದು, ಯಾವಾಗಬೇಕಾದ್ರೂ ಅಧೋಗತಿಗೆ ಇಳಿಯಬಹುದು? ಇದಕ್ಕೆಲ್ಲ ಕಾರಣವೆಂದರೆ ಗುರುವಿನ:-
ಸಂಸ್ಕಾರ, ಸೇವಾಮನೋಭಾವ, ಕರ್ತವ್ಯನಿಷ್ಠೆ, ಕಾಳಜಿ, ಕಾರ್ಯತತ್ಪರತೆಗಳ ಕೊರತೆ
ಅತಿಬುದ್ಧಿವಂತಿಕೆ, ವಿಪರೀತ ಸ್ವಾ(ರ್ಥ)ಭಿಮಾನ, ಅಲ್ಪವಿದ್ಯೆ ಮಹಾಗರ್ವಿ, ಉದ್ಧಟತನ
ಹಣ-ಜನ-ರಾಜಕಾರಣ ಬೆಂಬಲದಿಂದ ಬರುವ ಉಡಾಫ಼ೆ
ದುರಹಂಕಾರ, ದುರಾಸೆ, ದುರ್[ಸ್ವ]ಜನ ಪಕ್ಷಪಾತ ಹಾಗೂ ದುರ್ಬಲ ಆತ್ಮಸಾಕ್ಷಿ
ಹೆಣ್ಣು-ಹೊನ್ನು-ಮಣ್ಣು ವ್ಯಾಮೋಹದ ವೈಪರೀತ್ಯ ಅಥವಾ ಕಾಮ-ಕ್ರೋಧ-ಲೋಭಗಳ ದಾಸ್ಯತ್ವ
ನಿಯಮ/ಕಾನೂನು ಚೌಕಟ್ಟಿನೊಳಗಣ ತನ್ನ ಜವಾಬ್ಧಾರಿ, ಪರಿಧಿ-ಪರಿಮಿತಿಗಳನ್ನು ಅರಿಯದಿರುವುದು
ಕುಟುಂಬಸದಸ್ಯರಿಂದ ಪ್ರೀತಿ-ವಾತ್ಸಲ್ಯ-ನೆಮ್ಮದಿ ಕೊರತೆ. ಅತೃಪ್ತಿ ಹತಾಶ ಮನೋಭಾವ ನಿಷ್ಕ್ರಿಯತೆ, ನಿರ್ಲಿಪ್ತತೆ
ಅಚ್ಚುಕಟ್ಟುತನ, ಶುಚಿತ್ವ, ಶಿಸ್ತು- ಇವುಗಳಿಲ್ಲದ, ಸಂಯಮ ರಹಿತ ಅಶುದ್ಧ ಮನಸ್ಸು
ಅತಿ ಅಧ್ಯಯನದಿಂದ, ಅಸಮತೋಲನ ಆಹಾರದಿಂದ, ಆವರಿಸಿಕೊಂಡ ಅನಾರೋಗ್ಯ ಅರೆಬುದ್ಧಿಮಾಂದ್ಯತೆ
ಹೇಳುವುದು ಪುರಾಣ ತಿನ್ನುವುದು ಬದನೇಕಾಯಿ ಎಂಬ ಗುಣಪ್ರವೃತ್ತಿ ಬೆಳೆಸಿಕೊಂಡಿರುವುದು
ಅಜಾತಶತ್ರು ಎನಿಸಿಕೊಳ್ಳುವ ದಿಶೆಯಲ್ಲಿ ಕನಿಷ್ಠ ಶಿಕ್ಷಕಾರ್ಹತೆ ಕೊರತೆ, ಸಾಮಾನ್ಯಜ್ಞಾನ ರಹಿತ, ಸಂಬಳಕ್ಕಾಗಿ ಮಾತ್ರ ದುಡಿವ ಮನೋವಿಕಲ್ಪಎ ಸೈಲೆಂಟ್ ಟೀಚರ್ ವಿತೌಟ್ ಮಿನಿಮಂ ಟೀಚಿಂಗ್(ಕಾಮನ್)ಸೆನ್ಸ್ ಈಸ್ ಎ ವೇಸ್ಟ್ ಬಾಡಿ ಇಂಥ ಗುರುಗಳಲ್ಲಿ ಇರಬಹುದಾದ ಸಹಸ್ರಾರು ಘಟನೆಗಳಲ್ಲಿ ಒಂದೆರೆಡು ಉಧಾ. ನೀಡಲಾಗಿದೆ:-
[೨] ಪ್ರೌಢ/ಕಾಲೇಜು ಶಿಕ್ಷಣದ ವಿದ್ಯಾರ್ಥಿಯೋರ್ವ ಪಾಠಮಾಡುವಾಗ ನಿದ್ದೆ ಮಾಡುವುದನ್ನು ಕಂಡ ಅಧ್ಯಾಪಕರು ಏಯ್ ಈಡಿಯಟ್..ಕ್ಲಾಸ್ ರೂಮಲ್ಲೇಕೆ ನಿದ್ದೆ ಮಾಡುತ್ತಿರುವೆ, ಇಷ್ಟವಿಲ್ಲದಿದ್ದರೆ ಗೆಟೌಟೆಂದು ಗುಡುಗಿದ ತಕ್ಷಣವೇ ಥ್ಯಾಂಕ್ಸ್ ಸಾ.. ಎಂದು ಹೊರಗೆ ಹೊರಟೇಬಿಟ್ಟ. ಕೂಡಲೇ ಪ್ರಾಂಶುಪಾಲರು ಆ ವಿದ್ಯಾರ್ಥಿಯನ್ನು ಕರೆದು ಕಾರಣ ಕೇಳಿದಾಗ, ಅವನು ಉತ್ತರಿಸಿದ್ದು ಹೀಗೆನಿನ್ನೆಯವರೆಗೆ ಗುರುಗಳು ಮಾಡುತ್ತಿದ್ದುದು ನಿದ್ದೆಯನ್ನೆ -ಯಥಾಗುರು ತಥಾಶಿಷ್ಯ!
[೩] ಸ್ನಾತಕೋತ್ತರ ಶಿಕ್ಷಣದ ವಿದ್ಯಾರ್ಥಿಗೆ ಪ್ರಾಧ್ಯಾಪಕರು ಹೇಳಿಕೊಟ್ಟ ಇಂಗ್ಲಿಷ್: ಕುಲ್ಡ್, ವುಲ್ಡ್, ಶುಲ್ಡ್ ಗರ್ಲ್ಸ್ ಪೆರ್ಲ್ಸ್ ವರ್ಲ್ಡ್!…..ಎಲ್ಲಿಂದೆಲ್ಲಿಗೆಹೋಯ್ತು ಗುರುವಿನ ಬೋಧನಾರ್ಹತೆ, ಯೋಗ್ಯತೆ, ಪ್ರತಿಭೆ, ಮಾನದಂಡ. ತತ್ಪರಿಣಾಮವಾಗಿ ಇಂದಿನ ಉನ್ನತ ಶಿಕ್ಷಣದ ಮಟ್ಟವು ಶೂನ್ಯ!?
ಗುರುವು ಹೀಗಿರಬೇಕು?:- ಸಕಲ ವಿಷಯದಲ್ಲಲ್ಲದಿದ್ದರು ಸಂಬಂಧಪಟ್ಟ ವಿಷಯದಲ್ಲಾದರೂ ಅವಶ್ಯಕ ಎನಿಸುವಷ್ಟು ಅರಿವು ತಾಲೀಮು, ಪಕ್ವತೆ, ತಜ್ಞತೆ, ತಲ್ಲೀನತೆ, ಮುಂತಾದವುಗಳನ್ನು ಕರತಲಾಮಲಕ ಮಾಡಿರಬೇಕು. ಅಡಿಯಿಂದ ಮುಡಿಯವರೆಗೆ ಅಂತ:ಕರಣ ಶುದ್ಧಿಯಿಂದ ತಾನು ಕಲಿತಿರುವ ಎಲ್ಲಾ ವಿದ್ಯೆಯನ್ನು ವಿದ್ಯಾಭ್ಯಾಸ ನಿರತರಿಗೆ ಕಲಿಸುತ್ತಾ ಪ್ರತಿಯೊಂದು ಹಂತದಲ್ಲೂ ಸದಭಿರುಚಿಯ, ಸಮರ್ಥತೆಯ,ಬೋಧನೆ,ಸಂಶೋಧನೆ ಹಾಗೂ ಸಾಮಾಜಿಕ ನಡವಳಿಕೆ ಬಗ್ಗೆ ಓರ್ವ ನವ್ಯಶಿಕ್ಷಕ ಎನಿಸಿಕೊಂಡು ’ಮಾದರಿ’[ರೋಲ್‌ಮಾಡಲ್] ಆಗಬೇಕು. ಇದರ ಜೊತೆಗೆ, ವಿದ್ಯಾರ್ಥಿವೃಂದಕ್ಕೆ ಸಹೋದ್ಯೋಗಿಗಳಿಗೆ ಅಪರಿಚಿತರಿಗೆ ಅವಶ್ಯಕತೆಯಿದ್ದವರಿಗೆ ಬಯಸಿ ಬರುವವರಿಗೆ ವಿದ್ಯಾಸಕ್ತ ಸಮುದಾಯಕ್ಕೆ ಸಾರ್ಥಕ ರೀತಿಯಲ್ಲಿ ಸಹಾಯಹಸ್ತ ನೀಡಿ, ಪ್ರತಿಫಲಾಪೇಕ್ಷೆ ಬಯಸದೆ ತ್ರಿಕರಣ [ಕಾಯಾ-ವಾಚಾ-ಮನಸಾ] ಶುದ್ಧಿಯಿಂದ ಶಾರದಾಸುಪುತ್ರ ಎನಿಸುವಂತೆ ಪ್ರಾಮಾಣಿಕವಾಗಿ ವಿದ್ಯಾದಾನ ಮಾಡಬೇಕು.
ಶಿಷ್ಯರು ಹೀಗಿರಬೇಕು?:- ದಿನಚರಿಗೆ ಅನುಗುಣವಾಗಿ ಅನುದಿನ ಸರಿಯಾದ ಸಮಯಕ್ಕೆ ಹಾಸಿಗೆಯಿಂದೆದ್ದು, ಮಿಂದು, ತಾಯಿ ತಂದೆ ಗುರುಹಿರಿಯರಿಗೆ ಅಂಜಲಿಬದ್ಧರಾಗಿ ನಮಸ್ಕರಿಸಬೇಕು. ದೇವರ ಧ್ಯಾನದ ನಂತರ ವಿದ್ಯಾಭ್ಯಾಸ ಪ್ರಾರಂಭಿಸಬೇಕು. ಕಷ್ಟಪಟ್ಟು ಕಲಿಯುವ ಬದಲು ಇಷ್ಟಪಟ್ಟು ಕಲಿತುಕೊಳ್ಳಬೇಕು. ನಿಷ್ಠೆಯಿಂದ ಎಲ್ಲಾ ತರಗತಿಗಳಿಗೆ ಹಾಜರಾಗಿ ನಿಶ್ಯಬ್ಧತೆ ಕಾಪಾಡಿ ತಲ್ಲೀನತೆಯಿಂದ ಉಪನ್ಯಾಸ ಆಲಿಸಬೇಕು. ಪ್ರತಿಯೊಬ್ಬ ಗುರುವಿಗೂ ಸಮಾನ ಗೌರವ/ವಿಧೇಯತೆ ತೋರಿಸಬೇಕು. ಅರ್ಥವಾಗದಿದ್ದುದನ್ನು ಮತ್ತೊಮ್ಮೆ ಕೇಳಿ ಶ್ರದ್ಧಾಭಕ್ತಿಯಿಂದ ತಿಳಿದುಕೊಳ್ಳಬೇಕು. ಎಲ್ಲದಕ್ಕೂ ಗೋಣು ಬಸವನಂತೆ ತಲೆಯಾಡಿಸುವುದು ಅಥವಾ ಯಾವಾಗಲೂ ಪ್ರಶ್ನೆ (ತರ್ಕ)ಮಾಡುವುದು ಇವೆರಡೂ ಅತಿಯಾಗಿರಬಾರದು. ಮೌನ(ಗ್ರಹಿಕೆ) ಮತ್ತು ಪ್ರಶ್ನೆ(ತರ್ಕ) ನಿದ್ದೆಮಾಡುವಾಗ ನಂಬಿಕೆ ಮತ್ತು ಶ್ರದ್ಧೆ ಎಚ್ಚರವಾಗಿರುತ್ತವೆ! ಜ್ಞಾನ ಮತ್ತು ಅನುಭವಗಳ ಪಾಕವೆ ವಿವೇಕವಾಗಿದ್ದು, ಜ್ಞಾನಾನುಭವಗಳಿಗಿಂತ ವಿವೇಕವು ಎತ್ತರದಲ್ಲಿರುತ್ತದೆ! ಯಾವುದೆ ಬಗೆಯ ವಿದ್ಯಾರ್ಜನೆಗೆ ಶೀಲ, ವಿನಯ, ವಿನಮ್ರತೆ, ನಂಬಿಕೆ ಭೂಷಣವಾಗಿರಬೇಕು ಚಾರಿತ್ರ್ಯ(ಕೈ-ಬಾಯಿ-ಕಚ್ಚೆ)ಸ್ವಚ್ಚವಾಗಿರ ಬೇಕು. ಇದಕ್ಕೊಂದು ಉತ್ತಮ ಉಧಾಹರಣೆ:- ಒಮ್ಮೆ ಶುಕ್ರಾಚಾರ್ಯರ ಪುತ್ರಿ ’ದೇವಯಾನಿ’ ತನ್ನ ತಂದೆಯ ಶಿಷ್ಯ ’ಕಚ’ ನನ್ನು ಮೋಹಿಸುವಂತೆ ಒತ್ತಾಯಿಸುತ್ತಾಳೆ. ಆಗವನು ಗುರುಪುತ್ರಿ ದೇವಯಾನಿಯು ತನ್ನ ಸೋದರಿ ಸಮಾನವೆಂದರಿತು ಅವಳಿಗೆ ವಿವೇಕ ಹೇಳಿ ತಿರಸ್ಕರಿಸುತ್ತಾನೆ, ಗುರುದ್ರೋಹಿಯಾಗದೆ ಶಿಷ್ಯೋತ್ತಮನೆನಿಸಿಕೊಳ್ಳುತ್ತಾನೆ! ಆದ್ದರಿಂದ, ವಿದ್ಯಾರ್ಥಿಯು ವಿದ್ಯಾತುರಾಣಾಂ ನ ನಿದ್ರಾಹಾರಂ ಹಿಂದೆಗುರು ಮುಂದೆಗುರಿ ಸ್ಟೂಡೆಂಟ್‌ಲೈಫ಼್ ಈಸ್ ಗೋಲ್ಡನ್‌ಲೈಫ಼ೆಂಬುದಕ್ಕೆ ಅನ್ವರ್ಥವಾಗುವಂತೆ ಶಾಲಾ, ಕಾಲೇಜು, ಸರ್ಕಾರ, ಸಮಾಜ, ಪೋಷಕರು, ಮಿತ್ರರು, ಸಹಪಾಠಿ, ಗ್ರಂಥಾಲಯ, ಮಾಧ್ಯಮ, ಮುಂತಾದವರಿಂದ ಸಿಗುವ ಪ್ರತಿಯೊಂದು ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ವಿದ್ಯೆ ಬುದ್ಧಿ ಸಿದ್ಧಿಸಲು ಉತ್ತಮ ಸಾಧನವಾಗಿ ಉಜ್ವಲಗುರಿ ತಲುಪಲು ಸಾಧ್ಯ. ಇಲ್ಲವಾದರೆ ಶೂನ್ಯಜ್ಞಾನ ಸಂಪಾದನೆಯಿಂದ ಹೊಟೆಲ್/ಬಸ್ ಕ್ಲೀನರ್, ಗಾರೆ ಗ್ಯಾರೇಜ್ ಎಟಿಎಂ/ಸೆಕ್ಯುರಿಟಿ/ಬಾರ್/ಕ್ಲಬ್ ಮುಂತಾದೆಡೆ ಕೆಳದರ್ಜೆ ನೌಕರನಾಗಿ ಜೀವಮಾನ ಪೂರ್ತಿ ಹೀನಾಯ ರೀತಿಯಲ್ಲಿ [ಕೆಲವರು ಅನಿವಾರ್ಯದ ಹೆಸರಲ್ಲಿ ಅಡ್ಡದಾರಿ ಹಿಡಿದು ಕಾನೂನು ಬಾಹಿರ/ಅಪರಾಧ ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಂಡು ಸೆರೆಮನೆ ಸೇರಿ?!] ಜೀವಂತ ಶವವಾಗಿ ಬದುಕಬೇಕಾಗುತ್ತದೆ?!
ಪುರುಷವಿದ್ಯಾರ್ಥಿಗಳಿಗೆ ಸಲಹೆ:-
೧. ಸ್ತ್ರೀಯರ ಬಗ್ಗೆ, ಮಹಿಳಾ ಸಹಪಾಠಿಯರ ಬಗ್ಗೆ ಗೌರವ, ಸ್ನೇಹ, ಸದಭಿಪ್ರಾಯ, ಅನುಕಂಪ ಸದಾ ಇರಲಿ
೨. ರೌಡಿಗೂಂಡಾಗಿರಿ,ಲಂಚಶಿಫ಼ಾರಸ್ಸು,ಚಮಚಾಗಿರಿ,ಮುಂತಾದ ಸಮಾಜಘಾತುಕಶಕ್ತಿ ಮೂಲಕ ಪದವಿಯನ್ನು ಗಳಿಸದಿರಿ
೩. ಈವ್‌ಟೀಸಿಂಗ್,ಅನಾನಿಮಸ್‌ಲೆಟರ್/ಕಂಪ್ಲೇಂಟ್, ಶೀಲ/ಚಾರಿತ್ರ್ಯವಧೆ ಮಾಡುವಂಥ ಪ್ರವೃತ್ತಿಗೆ ಗುಡ್‌ಬೈ ಹೇಳಿರಿ
೪. ಅನಿಯಮಬದ್ಧ ಅಪಾಯಕರ ವೀಲಿಂಗ್/ಔಟ್‌ಲಾ/ಈಜು/ಕರಾಟೆ/ಕುಂಗ್‌ಫ಼ು/ಕುಸ್ತಿವರಸೆ/ಸರ್ಕಸ್ ಮುಂತಾದ ಮಾರಣಾಂತಿಕ ದುಸ್ಸಾಹಸ ಕೈಗೊಳ್ಳದಿರಿ
೫. ಅಡ್ಡದಾರಿಯಿಂದ ಅಥವಾ ಶ್ರಮವಿಲ್ಲದೆ ದೊರಕುವ ಪುಕ್ಸಟ್ಟೆ; ಪದವಿ, ಹುದ್ದೆ, ಹಣ, ಅಂತಸ್ತು, ಅಧಿಕಾರ ಇತ್ಯಾದಿಗಳನ್ನು
ಪುರಸ್ಕರಿಸದೆ ಸಾರಾಸಗಟಾಗಿ ತಿರಸ್ಕರಿಸಿರಿ
ವಿದ್ಯಾರ್ಥಿನಿಯರಿಗೆ ಕಿವಿಮಾತು:-
೧. ವಿಪರೀತ ಅಂಗಾಂಗ ಪ್ರದರ್ಶನಗೊಳ್ಳುವಂಥ ಉದ್ರೇಕಕಾರಿ ವಸ್ತ್ರ ಧರಿಸದಿರಿ, ನಡೆ-ನುಡಿಯಲ್ಲಿ ಎಚ್ಚರವಿರಲಿ
೨. ಬಿಡುವಿನ ವೇಳೆಯಲ್ಲಿ ಸಾಧ್ಯವಾದಷ್ಟು ಬಂಧು-ಬಳಗ-ಪೋಷಕರೊಡನೆ ಸಾರ್ಥಕರೀತಿ ಕಾಲ ಕಳೆಯಿರಿ
೩. ವ್ಯಕ್ತಿಸ್ವಾತಂತ್ರ್ಯದ ಹೆಸರಲ್ಲಿ ಸ್ವೇಚ್ಛಾಚಾರಕ್ಕೆ, ನಾಗರೀಕತೆ ಹೆಸರಲ್ಲಿ ಐರೋಪ್ಯ/ಪಾಶ್ಚಿಮಾತ್ಯ ಫ಼್ಯಾಶನ್‌ಗಳಿಗೆ ದಾಸರಾಗದಿರಿ
೪. ಜೋಡಿ ಅಧ್ಯಯನ[ಕಂಬೈಂಡ್ ಸ್ಟಡಿ] ಅಭ್ಯಾಸವನ್ನು ಹೆಣ್ಣುಸಹಪಾಠಿಯೊಡನೆ ಮಾತ್ರ ಇರಿಸಿಕೊಳ್ಳಿರಿ
೫. (ಅ)ಪರಿಚಿತ ಪುರುಷನ/ವಿಕೃತಕಾಮಿ/ಗೋಮುಖವ್ಯಾಘ್ರ/ಗುರು/ಸಹಪಾಠಿಯರ ಹಣ-ವಿದ್ಯೆ-ಬುದ್ಧಿ-ಮಾತಿನ ಮೋಡಿ ಬಾಹ್ಯ ಚೆಲುವು, ರೂಪು, ಲಾವಣ್ಯ, ಮುಂತಾದ ಆಕರ್ಷಣೆಗಳಿಗೆ ಮನಸೋತು ಪ್ರೀತಿ-ಪ್ರಣಯ-ಪ್ರೇಮ-ವಿವಾಹ ಮುಂತಾದವುಗಳಿಗೆ ಎಡೆ ಮಾಡಿಕೊಟ್ಟು ನಿಮ್ಮ ಕುಟುಂಬ, ಬಂಧು, ಬಳಗದ ಜೊತೆಗೆ ಇಡೀ (ವಿದ್ಯಾರ್ಥಿ)ಜೀವನವನ್ನೆ ಹಾಳುಮೊಡಿಕೊಳ್ಳಬೇಡಿ
’ಗುರು-ಶಿಷ್ಯರು’ ಶಾರದೆಯ ಕಣ್ಣುಗಳಿದ್ದಂತೆ; ಸಮಾಜೋದ್ಧಾರಕರೂ ಆಗಬಹುದು ಸಮಾಜವಿನಾಶಕರೂ ಆಗಬಹುದು ಎಂಬ ಸತ್ಯವರಿತು ಈರ್ವರೂ ಜಗತ್ತಿಗೇ ಉತ್ತಮ ವರಪ್ರದಾನ ಕೊಡುಗೆಯಾಗಲಿ ಎಂಬ ಒಂದೇ ಒಂದು ಮಹತ್ವಾಕಾಂಕ್ಷೆಯಿಂದ ಬರೆದ ಈ ಲೇಖನ ಮುಗಿಯುವ ಮುನ್ನ ಲಿಂಗತಾರತಮ್ಯವಿಲ್ಲದೆ ಇಡೀ ವಿದ್ಯಾರ್ಥಿಸಮೂಹಕ್ಕೆ [ಕಾಮನ್ ಗೈಡ್‌ಲೈನ್ಸ್] ಸಾಮಾನ್ಯಾನ್ವಯ ಮಾರ್ಗದರ್ಶನ ಇಂತಿದೆ:-
- ಯಾವುದೆ ಕಾರಣಕ್ಕೂ ಜಿಗುಪ್ಸೆಯಿಂದ ಹೇಡಿಯಂತೆ ಆತ್ಮಹತ್ಯೆ ಮಾಡಿಕೊಳ್ಳದೆ, ಈಸಬೇಕು ಇದ್ದುಜೈಸಬೇಕು ಎಂದು ನಿರ್ಧರಿಸಿರಿ
- ರ‍್ಯಾಂಕ್ ಪಡೆಯಲು ಅಂಕಗಳಿಸುವ ಬದಲು, ಅರ್ಥಮಾಡಿಕೊಂಡು ಅಂಕ ಪಡೆಯುವುದೆ ಮಿಗಿಲು ಎಂದು ಅರಿಯಿರಿ
- ತಡರಾತ್ರಿಯಲ್ಲಿ ಹಾಸ್ಟೆಲ್/ಮನೆ ತಲುಪುವ ಮೂಲಕ ವಾರ್ಡನ್/ಪೋಷಕರನ್ನು ರೋಗ ಪೀಡಿತರನ್ನಾಗಿಸಿ ಬಲಿಕೊಡದಿರಿ
- ಸ್ವಯಂಕೃತ ಅಪರಾಧಗಳಿಗೆ ’ಶಾಪ’ ಮುಂತಾದ ಮೂಢ[ಅಪ]ನಂಬಿಕೆಗಳ ಹೆಸರಿಟ್ಟು ಸುಳ್ಳು ನೆಪವೊಡ್ಡಿ ಜಾರಿಕೊಳ್ಳದಿರಿ
- ರ‍್ಯಾಗಿಂಗ್ ಎಂಬ ಶಿಕ್ಷಾರ್ಹ ಅಪರಾಧದ ಅನಗತ್ಯ ಪಿಡುಗನ್ನು ಬುಡ ಸಹಿತ ಕಿತ್ತೊಗೆಯಲು ಪಣತೊಡಿರಿ
- ಲವ್‌ಲವಿಕೆಯಿಂದಿರಲು ಆಟೋಟ, ಚರ್ಚಾ, ಸಾಂಸ್ಕೃತಿಕ ಸ್ಪರ್ಧೆ, ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ.
- ಶ್ರವಣ/ದೃಶ್ಯ ಮಾಧ್ಯಮದ ಮೂಲಕ ಶೈಕ್ಷಣಿಕ ಜ್ಞಾನ ಪಡೆವ ಪ್ರವೃತ್ತಿಯ ಜೊತೆಗೆ ಮನರಂಜನಾತ್ಮಕ ಹಾಸ್ಯಪ್ರಜ್ಞೆ ಬೆಳೆಸಿಕೊಳ್ಳಿರಿ
- ಅಂದಾಭಿಮಾನ, ದ್ವೇಷಾಸೂಯೆ, ಪ್ರೀತಿ,ಪ್ರೇಮ,ಚಾಟಿಂಗ್,ಡೇಟಿಂಗ್ ಮುಂತಾದ ಅನಾಗರೀಕ ಅತಿರೇಕಗಳನ್ನು ದೂರವಿರಿಸಿರಿ
- ಶತ್ರುತ್ವವನ್ನು ಮಿತ್ರತ್ವದಿಂದ, ದ್ವೇಷವನ್ನು ಪ್ರೀತಿಯಿಂದ, ಕ್ರಾಂತಿಯನ್ನು ಶಾಂತಿಯಿಂದ ಗೆಲ್ಲುವ ಸಂಯಮಶೀಲತೆ ಕಾಯ್ದುಕೊಳ್ಳಿರಿ
- ಕಳೆದುಹೋದರೆ ಮತ್ತೆಂದಿಗೂ ಸಿಗದ; ಕಾಲ, ಹಣ, ಜ್ಞಾನ, ಪಾಠಪ್ರವಚನಗಳನ್ನು ವ್ಯರ್ಥವಾಗಿ ಹರಣ ಮಾಡದಿರಿ
- ಯಾವುದೆ ಸ್ನೇಹ, ವಿಶ್ವಾಸ, ಸೌಲಭ್ಯ, ಸದವಕಾಶ, ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಿ
- ತಪ್ಪು- ಯಾರೆ ಮಾಡಲಿ ಧೈರ್ಯವಾಗಿ ಪ್ರಶ್ನಿಸಿ, ಮತ್ತು ತಿದ್ದುಕೊಳ್ಳಲು ಅವಕಾಶ ನೀಡಿರಿ-ಪಡೆಯಿರಿ
ಎಂಥದ್ದೆ ತಪ್ಪು ಪುನರಾವರ್ತನೆಯಾಗದಂತೆ ಅಲ್ಲಲ್ಲೆ/ಆಗಾಗ್ಗೆ ಸರಿಪಡಿಸಿಕೊಂಡು ತೇರ್ಗಡೆಯಾಗಲು ಶ್ರಮವಹಿಸಿರಿ - ಯಾವಾಗಲೂ ಯಾವಕಾರಣಕ್ಕೂ ಯಾರಮನಸ್ಸನ್ನೂ ನೋಯಿಸದಿರಿ. ತಾಯಿ,ತಂದೆ,ಗುರು,ಹಿರಿಯರ ಬಗ್ಗೆ ಭಯ-ಭಕ್ತಿಗಿಂತಲೂ ವಿಧೇಯತೆ-ಗೌರವ ಇಟ್ಟುಕೊಳ್ಳಿ. ಜಾತೀಯತೆ, ಅಮಾನವೀಯತೆ, ಅಶ್ಲೀಲತೆ, ಕೊಳಕು ರಾಜಕೀಯ, ಮುಂತಾದ ಅನಿಷ್ಟಗಳಿಂದ ದೂರವಿರಿ.
- ಧೂಮಪಾನ, ಮದ್ಯಪಾನ, ಡ್ರಗ್ಸ್ ಮುಂತಾದವುಗಳ ವ್ಯಸನಿಯಾಗಿ ಕುಟುಂಬ-ಸಮಾಜ-ರಾಷ್ಟ್ರಕ್ಕೆ ಕಂಟಕ ಪ್ರಾಯರಾಗದಿರಿ
- ಚಾಟಿಂಗ್-ಡೇಟಿಂಗ್-ಬ್ಲೂಫ಼ಿಲಂ-ಡಿಸ್ಕೊತೆಕ್-ಕ್ಲಬ್ ಅಶ್ಲೀಲ/ಅಸಭ್ಯ ದುಶ್ಚಟಗಳನ್ನು ಕನಸಲ್ಲೂ ನೆನಸಿಕೊಳ್ಳಬೇಡಿ
- ವಿದ್ಯಾರ್ಥಿನಿ ಜೀವನವನ್ನು ಸದುಪಯೋಗ ಪಡಿಸಿಕೊಂಡರೆ ಮಾತ್ರ ಸರಿಗುರಿ ತಲುಪಲು ಸಾಧ್ಯ. ಉನ್ನತ ಪದವಿ ಹುದ್ದೆ ಸ್ಥಾನಮಾನ, ಬಾಳಸಂಗಾತಿ ಸೇರಿದಂತೆ ಬಯಸಿದ್ದೆಲ್ಲವೂ ನಿಮ್ಮ ಪಾದದ ಬಳಿಗೇ ಬರುತ್ತವೆ.
- ಎನ್.ಎಸ್.ಎಸ್, ಎನ್.ಸಿ.ಸಿ, ಬಾಯ್‌ಸ್ಕೌಟ್/ಗರ್ಲ್‌ಗೈಡ್, ರೆಡ್‌ಕ್ರಾಸ್, ಸಂಚಾರಿಪೊಲೀಸ್, ಸಹಾಯವಾಣಿ ಇತ್ಯಾದಿಗಳ ಮೂಲಕ ಅಂಗವಿಕಲರಿಗೆ, ಅಬಲೆಯರಿಗೆ, ವಯೋವೃದ್ಧರಿಗೆ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿರಿ
- ದೇಶದ್ರೋಹ/ನಕ್ಸಲೈಟ್/ಭಯೋತ್ಪಾದನೆ ವಿರುದ್ಧ ಸಿಡಿದೆದ್ದು, ಸಂಸ್ಕೃತಿ, ಪರಂಪರೆ ರಾಷ್ಟ್ರಭಿಮಾನ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಬದುಕಿ ಇತರರನ್ನೂ ಬದುಕಲು ಬಿಡಿ.

- ಕುಮಾರಕವಿ ಬಿ.ಎನ್.ನಟರಾಜ
೯೦೩೬೯೭೬೪೭೧
ಬೆಂಗಳೂರು