ಬೆಟ್ಟದಪುರ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ರೋಟರಿ ಕಚೇರಿ ಅವರಣದಲ್ಲಿ ರೋಟರಿ ಮಿಡ್ ಟೌನ್ ಸಂಸ್ಥೆ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಸಾಧನೆಗೈದ ಶಿಕ್ಷಕರನ್ನು ಗುರ್ತಿಸಿ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ತಾಲೂಕು ರೋಟರಿ ಮಿಡ್ ಟೌನ್ ಸಂಸ್ಥೆಯ ತಾಲೂಕು ಅಧ್ಯಕ್ಷ ತಿರುಮಲಪುರ ರಾಜೇಗೌಡ ಪ್ರಸ್ತಾವಿಕ ಭಾಷಣ ಮಾಡಿ, ವಿದ್ಯಾರ್ಥಿಗಳನ್ನು ಈ ದೇಶದ ಉತ್ತಮ ಸತ್ ಪ್ರಜೆಗಳಾಗಿ ರೂಪಿಸುವ ಶಕ್ತಿ ಶಿಕ್ಷಕರ ಮೇಲಿದೆ. ಅಂಥವರನ್ನು ರೋಟರಿ ಮಿಡ್ ಟೌನ್ ಸಂಸ್ಥೆಯು ಗುರ್ತಿಸಿ ಹಲವಾರು ವರ್ಷಗಳಿಂದಲೂ ಸನ್ಮಾನಿಸಿ ಕೊಂಡು ಬರುತ್ತಿದೆ. ಈ ಬಾರಿ ಪಿರಿಯಾಪಟ್ಟಣ ತಾಲೂಕಿನ ಅತ್ತಿಗೂಡು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ನಾಗಶೆಟ್ಟಿ, ಜಿ. ಬಸವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಟಿ.ಎನ್. ಸುಬ್ರಹ್ಮಣ್ಯ, ದೊಡ್ಡ ಹೊನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸುಧಾ. ಎಂ.ಎಸ್, ತಿರುಮಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಶಂಕರ್ ನಾಯಕ್, ಬೈಲುಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಖಾದರ್. ಹೆಚ್. ಪಿ, ರವರನ್ನು ಆಯ್ಕೆ ಮಾಡಿ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸುತ್ತಿದ್ದೇವೆ ಜೊತೆಗೆ ಸಹಕಾರಿ ಕ್ಷೇತ್ರದಲ್ಲಿ ಆಯ್ಕೆಯಾದ ಸತೀಶ ಹಾಗೂ ಸುರೇಶ್ ರವರನ್ನು ಸನ್ಮಾನಿಸುತಿದ್ದೇವೆ ಎಂದರು. ಹಿರಿಯ ವಕೀಲ ಬಿ.ವಿ. ಜವರೇಗೌಡ ಮಾತನಾಡಿ ಶಾಲಾ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ರೋಟರಿ ಸಂಸ್ಥೆಯ ವತಿಯಿಂದ ಸಾಂಸ್ಕೃತಿಕ ವೇದಿಕೆ ಕಲ್ಪಿಸಿ ಕೊಟ್ಟಿದ್ದೆವು. ಅತ್ತಿಗೋಡು ಪ್ರೌಢಶಾಲೆಯ ಗುರುಪ್ರಸಾದ್ ವಿದ್ಯಾರ್ಥಿಗೆ ಪ್ರಥಮ ಬಾರಿಗೆ ಅವಕಾಶ ಕೊಟ್ಟು ಇಂದು ಖಾಸಗಿ ಜೀ ವಾಹಿನಿಯಿಂದ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾನೆ. ಎಂದು ತಿಳಿಸಿದರು.
ಜಿ .ಬಸವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಖ್ಯ ಶಿಕ್ಷಕ ಟಿ. ಎಸ್ .ಸುಬ್ರಹ್ಮಣ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ ಕರ್ನಾಟಕ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ ಅಣಿಗೊಳಿಸಬೇಕು ಆಗ ಮಾತ್ರ ಕರ್ನಾಟಕದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಆಂಧ್ರಪ್ರದೇಶ, ಗುಜರಾತ್, ರಾಜಸ್ಥಾನ ರಾಜ್ಯಗಳಲ್ಲಿ ಆರನೇ ತರಗತಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದಾರೆ, ಐಐಟಿ, ವೈದ್ಯಕೀಯ ಕೋರ್ಸು ಗಳಿಗೆ ಪಿಯುಸಿಗೆ ಬಂದ ಮೇಲೆ ತರಬೇತಿ ನೀಡುತ್ತಿದ್ದೇವೆ. ಕರ್ನಾಟಕದ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಕಠಿಣವಾಗುತ್ತಿದ್ದು, ಐಐಟಿ ಹಾಗೂ ವೈದ್ಯಕೀಯ ಕೋರ್ಸ್ ಗಳಿಂದ ಅರ್ಹತೆ ಪಡೆಯಲು ವಂಚಿತರಾಗುತ್ತಿದ್ದಾರೆ. ಆದುದರಿಂದ ಸರ್ಕಾರ ಇತ್ತ ಗಮನ ಹರಿಸಬೇಕು ಎಂದರು. ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ ನಾಗಶೆಟ್ಟಿ ಮಾತನಾಡಿ ನಮ್ಮಲ್ಲಿರುವ ಮನೋಭಾವನೆ ಇಮ್ಮಡಿ ಗೊಳಿಸಿ ಹೆಚ್ಚು ಸೇವಾ ಚಟುವಟಿಕೆಗಳನ್ನು ಮಾಡಲು ರೋಟರಿ ಸಂಸ್ಥೆಯು ವಿಶ್ವದಲ್ಲೇ ಪ್ರಮುಖ ಪಾತ್ರ ವಹಿಸಿಕೊಂಡು ಬರುತ್ತಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಮಿಡ್ ಟೌನ್ ಸಂಸ್ಥೆಯ ಅಸಿಸ್ಟೆಂಟ್ ಜೋನ್ 6 ರ ಗವರ್ನರ್ ಸತ್ಯನಾರಾಯಣ, ತಾಲೂಕು ಕಾರ್ಯದರ್ಶಿ ಪುರುಷೋತ್ತಮ್ ಹೆಗಡೆ, ಹಿರಿಯ ವಕೀಲ ಬಿ. ವಿ.ಜವರೇಗೌಡ, ರೋಟರಿ ಮಿಡ್ ಟೌನ್ ಯೂಥ್ ಕಾರ್ಯದರ್ಶಿ ಅಂಬ್ಲೆರೆ ಬಸವೇಗೌಡ, ಸದಸ್ಯರಾದ ನಾಗರಾಜ್ ವಿನಯಶೇಖರ್ ಸತೀಶ್, ಸುರೇಶ್, ಶ್ರೀಕಾಂತ್, ಚಂದ್ರು, ಎಂ ಎಂ ರಾಜೇಗೌಡ, ಎಂ ಪಿ ರಾಜು ಹೇಮೇಶ್, ಹರೀಶ್ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪರಂ ಶಿವಯ್ಯ, ಶಿಕ್ಷಕರಾದ ಅಶೋಕ್, ಮಾಲಿನಿ, ಚಂದ್ರು ಹಾಜರಿದ್ದರು.