ಕೆ.ಆರ್.ನಗರ: ಕೊರೋನಾ ಪಾಸಿಟಿವ್‌ಗೆ ಹೆದರಿದ ಶಿಕ್ಷಕನೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸಾಲಿಗ್ರಾಮ ತಾಲೂಕಿನ ಕೋಗಿಲೂರು ಗ್ರಾಮದ ನಿಂಗೇಗೌಡ ಅವರ ಪುತ್ರ ಕೆ.ಎನ್.ಲೋಕೇಶ್(30) ಆತ್ಮಹತ್ಯೆ ಮಾಡಿಕೊಂಡಿದ್ದು ಈತನಿಗೆ ಎರಡು ದಿನಗಳ ಹಿಂದೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು.
ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆ ಮಾಡಿಸಿದ್ದ ಈತ ವರದಿಯಲ್ಲಿ ಪಾಸಿಟಿವ್ ಫಲಿತಾಂಶ ಬಂದ ಕಾರಣ ಹೆದರಿ ಮಾನಸಿಕವಾಗಿ ಕುಗ್ಗಿಹೋಗಿ ಆ ನಂತರ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೇರಳಾಪುರದ ಪತ್ನಿಯ ಮನೆಗೆ ತೆರಳಿದ್ದನು.
ಆ ನಂತರ ಮನೆಯ ಮುಂದೆ ಬೈಕ್ ನಿಲ್ಲಿಸಿ ಮೊಬೈಲ್ ಬಿಟ್ಟು ಕಣ್ಮರೆಯಾಗಿದ್ದನು ಇದರಿಂದ ಗಾಬರಿಯಾದ ಕುಟುಂಬವರು ಎಲ್ಲೆಡೆ ಹುಡುಕಾಡಿದರೂ ಶಿಕ್ಷಕ ಕೆ.ಎನ್.ಲೋಕೇಶ್ ಪತ್ತೆಯಾಗಿರಲಿಲ್ಲ
ಭಾನುವಾರ ಕೇರಳಾಪುರದ ಬಳಿ ಇರುವ ಕಾವೇರಿ ನದಿಯಲ್ಲಿ ಲೋಕೇಶ್ ಶವವಾಗಿ ಪತ್ತೆಯಾಗಿದ್ದಾರೆ. ಇವರು ಕಳೆದ ವರ್ಷವಷ್ಟೆ ವಿವಾಹವಾಗಿದ್ದು ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.