ಚಾಮರಾಜನಗರ: ನಗರದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಸಿದ್ದಗಂಗಮ್ಮ ನಿಧನರಾದ ಹಿನ್ನೆಲೆಯಲ್ಲಿ ಶಿಕ್ಷಣಇಲಾಖೆ ಅಧಿಕಾರಿಗಳು, ಪೋಷಕರು ಹಾಗೂ ಎಸ್‌ಡಿಎಂಸಿ ವತಿಯಿಂದ ಶಾಲಾವರಣದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಇದೇವೇಳೆ ಕ್ಷೇತ್ರಶಿಕ್ಷಣಾಧಿಕಾರಿ ಸೋಮಣ್ಣೇಗೌಡ ಮಾತನಾಡಿ, ಸಿದ್ದಗಂಗಮ್ಮ ಅವರು ಇಲಾಖೆಯಲ್ಲಿ ೨೫ ವರ್ಷಸೇವೆ ಸಲ್ಲಿಸಿದ್ದು, ಅವರು ಸೇವೆಯಲ್ಲಿರುವಷ್ಟು ಕಾಲ ಇಲಾಖಾಧಿಕಾರಿಗಳು, ಶಿಕ್ಷಕರ ಜತೆ ಉತ್ತಮಭಾಂದವ್ಯ ಇರಿಸಿಕೊಂಡಿದ್ದರು.
ಜತೆಗೆ ಶಾಲಾಮಕ್ಕಳ ಬಗ್ಗೆ ಅಪಾರಕಾಳಜಿಯಿಟ್ಟುಕೊಂಡಿದ್ದರು, ಅವರ ನಿಧನದಿಂದ ಇಲಾಖೆಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.
ಶಾಲಾಶಿಕ್ಷಕ ಮಹದೇವಸ್ವಾಮಿ ಮಾತನಾಡಿ, ಸಿದ್ದಗಂಗಮ್ಮ ಅವರು ಉತ್ತಮಶಿಕ್ಷಕರಾಗಿ ಸೇವೆಸಲ್ಲಿಸುವ ಜತೆಗೆ ಶಾಲಾಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಿದ್ದರು. ಉತ್ತಮ ಸೇವೆಗಾಗಿ ಜಿಲ್ಲಾಮಟ್ಟದ ಉತ್ತಮಶಿಕ್ಷಕ ಪ್ರಶಸ್ತಿ ಸಂದಿರುವುದು ಇವರ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ ಎಂದರು.
ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಮಾದಪ್ಪ, ತಾಲೂಕು ಅಧ್ಯಕ್ಷ ಲಾಲಿಂಗಸ್ವಾಮಿ, ಮುಖ್ಯಶಿಕ್ಷಕಿ ಶಬಾನಾಭಾನು, ಶಿಕ್ಷಕರಾದ ಮುರುಗೇಶ್, ಕೃಷ್ಣಮೂರ್ತಿ, ನವೀದ್, ಜಹೀರ್, ನಸ್ರುಲ್ಲಾ, ಜಖಾ, ಹಬೀಬ್, ಇಕ್ಬಾಲ್ ರಹಮತ್. ಸುಹೇಲ್, ಕಾದರ್, ಪೋಷಕರು ಹಾಜರಿದ್ದರು.