ಮೈಸೂರು: ಜಿಲ್ಲಾ ನಗರ ಬ್ರಾಹ್ಮಣ ಸಂಘದಿಂದ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ನಾಗರಿಕರಿಗೆ ರೈತರಿಂದ ತರಕಾರಿಗಳನ್ನು ಖರೀದಿಸಿ ಚಾಮುಂಡಿಪುರಂ ಬಡಾವಣೆಯಲ್ಲಿರುವ ಅಪೂರ್ವ ಹೋಟೆಲ್ ಮುಂಭಾಗ ವಿತರಿಸಲಾಯಿತು.
ರೈತರಿಂದ 4 ಟನ್ ಟೊಮೇಟೋ, 1 ಟನ್ ಎಲೆಕೋಸು, 2 ಟನ್ ದಪ್ಪ ಮೆಣಸಿನಕಾಯಿ, 1 ಟನ್ ಸೋರೆಕಾಯಿ ಪಡವಲಕಾಯಿ, ಖರೀದಿಸಿ ನೇರ ನಾಗರಿಕರಿಗೆ ಬ್ರಾಹ್ಮಣ ಸಂಘದಿಂದ ಉಚಿತವಾಗಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್ ಮಾತನಾಡಿ ಮೈಸೂರಿನಲ್ಲಿ ಈಗಾಗಲೇ ಕೋವಿಡ್ 2 ನೇ ಅಲೆಯಿಂದ ಸಾಕಷ್ಟು ಮಂದಿ ಆರ್ಥಿಕ ಸಂಕಷ್ಟದಲ್ಲಿದ್ದಾರೆ, ಪರೋಪಕಾರ್ಯಂ
ಇದಂ ಶರೀರಂ ಎಂಬಂತೆ ನಾವು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮಾನವೀಯತೆಯ ಗುಣ, ಹಾಗಾಗಿ ಬ್ರಾಹ್ಮಣ ಸಂಘದಿಂದ ನಾಗರೀಕರಿಗೆ ನೆರವಾಗಲೆಂದು ರೈತರಿಂದ ಉಚಿತವಾಗಿ ತರಕಾರಿಗಳನ್ನು ಖರೀದಿಸಿ ವಿತರಿಸಲಾಗುತ್ತಿದೆ. ರೈತಾಪಿ ವರ್ಗವು ಸಹ ತೊಂದರೆಯಲ್ಲಿದೆ ಉತ್ತಮ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ಕಂಗಾಲಾಗಿದ್ದರು. ಹಾಗಾಗಿ ಬ್ರಾಹ್ಮಣ ಸಂಘದಿಂದ ರೈತಾಪಿ ಬೆಳೆಯನ್ನು ಬೆಂಬಲಿಸಿ ಸಂಕಷ್ಟದಲ್ಲಿರುವ ನಾಗರಿಕರಿಗೆ ತರಕಾರಿ ವಿತರಿಸಿ ಸಹಾಯ ನೀಡಲಾಗುತ್ತಿದೆ. ಅಲ್ಲದೆ, ಮೈಸೂರು ಭಾಗದಲ್ಲಿ ವಿಪ್ರರು ಮೃತರಾದವರ ಅಂತ್ಯಸಂಸ್ಕಾರದ ನೆರವಿಗೆ ಬ್ರಾಹ್ಮಣ ಸಂಘದಿಂದ ವಿಪ್ರ ಸಹಾಯವಾಣಿ ತೆರೆದಿದ್ದು 7829067769 ಸಂಪರ್ಕಿಸಬಹುದಾಗಿದೆ ಎಂದರು.
ಈ ವೇಳೆ ನಗರಪಾಲಿಕೆ ಸದಸ್ಯ ಜಗದೀಶ್, ಬ್ರಾಹ್ಮಣ ಸಂಘದ ಕಾರ್ಯದರ್ಶಿ ಅಪೂರ್ವ ಸುರೇಶ್, ಎಂಐಟಿ ಕಾಲೇಜಿನ ಮುರಳಿ, ಟಿಎಸ್ ರವಿಶಂಕರ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್. ಸತ್ಯನಾರಾಯಣ್, ವಿಪ್ರ ಯುವ ಮುಖಂಡ ಕಡಕೊಳ ಜಗದೀಶ್, ಜಯಸಿಂಹ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಚಕ್ರಪಾಣಿ, ಸುಚೀಂದ್ರ, ಪ್ರಶಾಂತ್, ಪ್ರದೀಪ್ ಇನ್ನಿತರರು ಇದ್ದರು.