ಗುಂಡ್ಲುಪೇಟೆ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷ ರಾಗಿ ಅರ್. ಜಯರಾಮು ಹಾಗೂ ಉಪಾಧ್ಯಕ್ಷ ರಾಗಿ ದಾಕ್ಷಾಯಿಣಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಯರಾಮು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ದಾಕ್ಷಾಯಿಣಮ್ಮ ಹೊರತುಪಡಿಸಿ ಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆ ಇಬ್ಬರ ಆಯ್ಕೆಯನ್ನು ಚುನಾವಣಾ ಅಧಿಕಾರಿಯಾಗಿದ್ದ ತಹಸೀಲ್ದಾರ್ ಎಂ. ನಂಜುಂಡಯ್ಯ ಘೋಷಿಸಿದರು.
ಈ ವೇಳೆ ನೂತನ ಅಧ್ಯಕ್ಷ ಜಯರಾಮು ಮಾತನಾಡಿ, ನನ್ನ ಆಡಳಿತ ಅವಧಿಯಲ್ಲಿ ಸಂಘದ ಎಲ್ಲಾ ಸದಸ್ಯರ ಸಹಕಾರದಿಂದ ಸಹಕಾರ ಸಂಘದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವುದಾಗಿ ತಿಳಿಸಿದರು.
ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಸನ್ಮಾನ:
ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಕಾಂಗ್ರೆಸ್ ಯುವ ಮುಖಂಡ ಹೆಚ್.ಎಂ. ಗಣೇಶ್ ಪ್ರಸಾದ್, ಕಾಡ ಮಾಜಿ ಅಧ್ಯಕ್ಷ ಹೆಚ್.ಎಸ್. ನಂಜಪ್ಪ, ಜಿಲ್ಲಾ ಪಂಚಾಯತಿ ಸದಸ್ಯರಾದ ಕೆ.ಎಸ್. ಮಹೇಶ್, ಚಾಮೂಲ್ ಅಧ್ಯಕ್ಷ ಹೆಚ್.ಎಸ್. ನಂಜುಂಡ ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಬಿ.ರಾಜಶೇಖರ್, ಬಿ.ಎಂ. ಮುನಿರಾಜು, ಮೂಡಗೂರು ಎಂ.ಪಿ. ಸುನೀಲ್ , ಕೆ.ಆರ್. ಲೋಕೇಶ್, ಎಲಚೆಟ್ಟಿ ಬಸಪ್ಪ ಇತರರು ಹಾರ ಹಾಕಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ರಾಜಶೇಖರಪ್ಪ, ಹೆಚ್.ಎಸ್. ಬಸಪ್ಪ, ಎ.ಎಸ್. ಸೋಮಶೇಖರ್, ಮಂಗಳಮ್ಮ, ವೆಂಕಟರಾಜು, ಗೋಕುಲ ಶಟ್ಟಿ, ಬಿ.ಜಿ.ಮಹದೇಶ, ಜಿ.ಮಡಿವಾಳಪ್ಪ, ನಾಗಪ್ಪ, ಆಡಳಿತ ಅಧಿಕಾರಿ ಪದ್ಮಾ ನಂದ, ಸಿಬ್ಬಂದಿ ವರ್ಗದವರಾದ ಪುಟ್ಟಮಾದ, ನಾಗಮಲ್ಲಪ್ಪ ಸೇರಿದಂತೆ ಇತರರು ಹಾಜರಿದ್ದರು.
ವರದಿ: ಬಸವರಾಜು ಎಸ್ ಹಂಗಳ