ಶಿಕ್ಷಕರ ದಿನಾಚರಣೆ ಮತ್ತು ಗುರು ಶಿಷ್ಯರು?!
ಆಚಾರ್ಯನೆಂದರೆ ಜಠಿಲ-ಜರ್ಝರ ಗಾದೆ-ಒಗಟುಗಳನ್ನು ತಾನು ಮೊದಲು ಅರ್ಥೈಸಿಕೊಂಡು ನಂತರ ಅವುಗಳನ್ನು ಸಡಿಲವಾಗಿ ಬಿಡಿಸುವಂತೆ ಶಿಷ್ಯರಿಗೆ ತರಬೇತಿ ನೀಡುವವನು. ತಾತ್ವಿಕ, ಪ್ರಾಯೋಗಿಕ ಶಿಕ್ಷಣದ ಜೊತೆಗೆ ಪಠ್ಯ-ಪಠ್ಯೇತರ ಚಟುವಟಿಕೆಯನ್ನು ಸರಿಯಾಗಿ ಕಲಿಸಿಕೊಡುವವನು. ಅದ್ಭುತ, ಆಶ್ಚರ್ಯ, ನವ್ಯ, ಭವ್ಯ, ತನಿಖೆ, ಪತ್ತೇದಾರಿ ಉನ್ನತಾಧ್ಯಯನ, ಸಂಶೋಧನೆಗಳ ಮಾರ್ಗದರ್ಶಕನು.…