“ಕನ್ನಡ, ಸಂಸ್ಕೃತ, ಆಂಗ್ಲ ಸಾಹಿತ್ಯಗಳ ಭಿನ್ನಮುಖಗಳ ಭಿನ್ನ ಅಭಿವ್ಯಕ್ತಿಯ ವಿಶ್ವಮಾನ್ಯ ಸಾಧಕಿ ಡಾ.ಕೆ ಲೀಲಾಪ್ರಕಾಶ್”
ಕಾಲತ್ರಯದ ಮಹಿಮೆಯನ್ನು ಬಲ್ಲವರಾರು, ಅಂದು ಮನೆಯೊಳಗೆಯೇ ತಲೆ ಎತ್ತಿ ಮಾತನಾಡದ ಮಹಿಳೆ ಇಂದು ಜಗತ್ತೇ ತಲೆ ಎತ್ತಿ ತನ್ನನ್ನು ನೋಡುವಂತೆ ತನ್ನ ಮಹಿಳಾ ಶಕ್ತಿಯನ್ನು ಹೊಗಳುವಂತೆ ಬೆಳೆದು ನಿಂತಿದ್ದಾಳೆ. ಕಾಲಘಟ್ಟಕ್ಕಾದ ಅಸಾಧಾರಣ ಮಹಿಳೆಯರನ್ನು ಸರತಿಸಾಲಿನಂತೆ ಭೂತ, ವರ್ತಮಾನವನ್ನು ಅವಲೋಕಿಸಿದಾಗ ವೇದದ ಮೈತ್ರೇಯಿ,ಗಾರ್ಗಿ,ವಚನ…